Advertisements

ತಂದೆ ತಾಯಿಗೆ ಆದ ಬಳಿಕ ಈಗ ಮೇಘನಾ ಮತ್ತು ಮಗುವಿನ ಸರದಿ..ಮತ್ತೊಂದು ಅಗ್ನಿಪರೀಕ್ಷೆಯಲ್ಲಿ ಮೇಘನಾ ಸರ್ಜಾ..

Cinema

ನಮಸ್ತೇ ಸ್ನೇಹಿತರೇ, ಪತಿ ಚಿರು ಸರ್ಜಾ ಅವರನ್ನ ಕಳೆದುಕೊಂಡ ಮೇಲೆ ಕಗ್ಗತ್ತಲಾಗಿದ್ದ ಮೇಘನಾ ರಾಜ್ ಅವರ ಬಾಳಲ್ಲಿ ಮತ್ತೆ ಆಶಾಕಿರಣ ಮೂಡಿಸಿದ್ದು ಅವರ ಮಗು. ತಮ್ಮ ಮುದ್ದಾದ ಮಗುವಿನ ಆರೈಕೆಯಲ್ಲೇ ಸುಂದರವಾದ ಕ್ಷಣಗಳನ್ನ ಕಳೆಯಬೇಕು ಏನುವಷ್ಟರಲ್ಲಿ ಮೇಘನಾ ಅವರ ಜೀವನದಲ್ಲಿ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ಕೆಲ ದಿನಗಳ ಹಿಂದಷ್ಟೇ ತೊಟ್ಟಿಲು ಶಾಸ್ತ್ರ ಮುಗಿಸಿ ತನ್ನ ಮಗುವಾಗಿ ಚಿರು ಮತ್ತೆ ಹುಟ್ಟಿ ಬಂದಿದ್ದಾನೆ ಎನ್ನುವ ಬಲವಾದ ನಂಬಿಕೆಯಿಂದ ಜೀವನ ಕಳೆಯುತ್ತಿರಬೇಕಾದ್ರೆ ಮೇಘನಾ ಅವರ ಬಾಳಲ್ಲಿ ಮತ್ತೊಂದು ಸಂಕಷ್ಟದ ಪರಿಸ್ಥಿತಿ ಉದ್ಭವವಾಗಿದೆ.

Advertisements

ಮೊನ್ನೆ ರಾತ್ರಿಯಷ್ಟೇ ಮೊದಲು ಮೇಘನಾ ಅವರ ತಾಯಿಯಾದ ಪ್ರಮೀಳಾ ಜೋಷಾಯ್‍ ಅವರಿಗೆ ಕೊ’ರೊನಾ ಪಾಸಿಟೀವ್ ಬಂದಿದ್ದು, ಬಳಿಕ ಮೇಘನಾ ಅವರ ತಂದೆ ಹಿರಿಯ ನಟ ಸುಂದರ್ ರಾಜ್ ಅವರಿಗೂ ಕೊ’ರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಇನ್ನು ಮೇಘನಾ ತಂದೆ ತಾಯಿಗಳಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆಯೂ ಮತ್ತೊಂದು ಶಾ’ಕಿಂಗ್ ಸುದ್ದಿ ಬಂದಿದೆ. ಹೌದು, ಕಷ್ಟ ಬಂದಾಗ ಮತ್ತಷ್ಟು ಕಷ್ಟಗಳು ಜೊತೆಯಾಗೇ ಬರುತ್ತವೆ ಎಂಬಂತೆ ಮೇಘನಾ ರಾಜ್ ಅವರ ಜೀವನದಲ್ಲಿಯೂ ಕೂಡ ಕಷ್ಟಗಳ ಸರಮಾಲೆಯೇ ಏರ್ಪಟ್ಟಿದೆ. ಹೌದು, ನಾವು ನೀವೆಲ್ಲಾ ಅರಗಿಸಿಕೊಳ್ಳದ ವಿಚಾರ ಏನೆಂದರೆ ಮೇಘನಾ ಅವರ ಮುದ್ದು ಮಗುವಿಗೂ ಕೂಡ ಕೊ’ರೊನಾ ಪಾಸಿಟೀವ್ ಇರುವುದು ಧೃಡಪಟ್ಟಿದೆ. ಜೊತೆಗೆ ಮೇಘನಾ ರಾಜ್ ಗೂ ಕೂಡ.

ಇನ್ನು ಇದರ ಬಗ್ಗೆ ನಟ ಸುಂದರ್ ರಾಜ್ ರವರೇ ಮಾಧ್ಯಮಗಳಿಗೆಮಾಹಿತಿ ನೀಡಿದ್ದಾರೆ. ಇನ್ನು ಮೇಘನಾ ಹಾಗೂ ಅವರ ಮಗುವನ್ನ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಇನ್ನು ತಮ್ಮ ಕುಟುಂಬದ ಜೊತೆ ಸಂಪರ್ಕ ಇದ್ದವರ ಬಗ್ಗೆ ಮನವಿ ಮಾಡಿಕೊಂಡಿರುವ ನಟ ಸುಂದರ್ ರಾಜ್ ಎಚ್ಚರಿಕೆಯಿಂದಿರಿ ಎಂದು ಹೇಳಿದ್ದಾರೆ. ಇನ್ನು ಸದ್ಯದ ಮಾಹಿತಿಗಳ ಪ್ರಕಾರ ಮೇಘನಾ ಅವರ ತಾಯಿ ನಟಿ ಪ್ರಮೀಳಾ ಜೋಷಾಯ್ ಅವರು ಆರೋಗ್ಯದಿಂದ ಇದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ವಿಷಯ ಸರ್ಜಾ ಕುಟುಂಬದಲ್ಲಿ ಆತಂಕಕ್ಕೀಡು ಮಾಡಿದ್ದು ಆದಷ್ಟು ಬೇಗ ಎಲ್ಲರು ಹುಷಾರಾಗಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.