Advertisements

ಮುದ್ದು ಮಗುವಿನ ತೊಟ್ಟಿಲು ಶಾಸ್ತ್ರದ ವೇಳೆ ಕಣ್ಣೀರಿಟ್ಟ ಮೇಘನಾ ಹೇಳಿದ್ದೇನು ಗೊತ್ತಾ ?ಇಲ್ಲಿದೆ ನೋಡಿ ತೊಟ್ಟಿಲು ಶಾಸ್ತ್ರ ಸಂಭ್ರಮದ ವಿಡಿಯೋ

Cinema

ನಮಸ್ತೇ ಸ್ನೇಹಿತರೇ, ಸರ್ಜಾ ಕುಟುಂಬಕ್ಕೆ ಪುಟ್ಟ ಕಂದಮ್ಮನ ಆಗಮನವಾಗಿರುವ ಹಿನ್ನಲೆಯಲ್ಲಿ, ನಟ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡಿರುವ ನೋವು ಕುಟುಂಬದಲ್ಲಿ ಇದ್ದರೂ ಕೂಡ ಜೂನಿಯರ್ ಚೀರುವಿನಿಂದಾಗಿ ಆ ನೋವನ್ನೆಲ್ಲಾ ಮರೆಯುವಂತಾಗಿದೆ. ಈ ಮುದ್ದು ಮಗುವಿನಿಂದಾಗಿ ಮೇಘನಾ ರಾಜ್ ಸೇರಿದಂತೆ ಕುಟುಂಬದವರಲ್ಲಿ ಬಹಳ ದಿನಗಳ ಬಳಿಕ ಸಂತಸ ಮನೆ ಮಾಡಿದೆ. ಕಳೆದ ತಿಂಗಳು ಅಕ್ಟೋಬರ್ ೨೨ರಂದು ಮೇಘನಾ ರಾಜ್ ರವರು ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದು ಇದೀಗ ೨೦ ದಿನಗಳು ಕಳೆದು ಹೋಗಿವೆ.

Advertisements

ಚಿರು ಸರ್ಜಾ ಅವರನ್ನ ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಸರ್ಜಾ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಮೂಡಿದೆ. ಹೌದು, ತೊಟ್ಟಿಲ ಶಾಸ್ತ್ರದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇಂದು ಅಂದರೆ ನವೆಂಬರ್ ಹನ್ನೆರಡರಂದು ಜೆಪಿ ನಗರದ ನಿವಾಸದಲ್ಲಿ ಚಿರು ಮೇಘನಾ ರಾಜ್ ರವರ ಮುದ್ದಾದ ಗಂಡು ಮಗುವಿಗೆ ತೊಟ್ಟಿಲು ಶಾಸ್ತ್ರದ ಕಾರ್ಯಕ್ರಮ ನಡೆದಿದೆ. ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆತ್ಮಿಯ್ಯ ಸ್ನೇಹಿತರು ಮಾತ್ರ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಇನ್ನು ತನ್ನ ಪ್ರೀತಿಯ ಅಣ್ಣನ ಮಗುವಿಗಾಗಿ ಚಿಕ್ಕಪ್ಪನಾಗಿರುವ ನಟ ಧ್ರುವ ಸರ್ಜಾ ಅವರು ಮಗು ಹುಟ್ಟುವ ಮೊದಲೇ ಹತ್ತು ಲಕ್ಷ ಬೆಲೆ ಬಾಳುವ ಬೆಳ್ಳಿ ತೊಟ್ಟಿಲು ಮಾಡಿಸಿದ್ದರು.

ತನ್ನ ಮುದ್ದಾದ ಮಗುವಿನ ತೊಟ್ಟಿಲು ಶಾಸ್ರ ನಡೆಯುತ್ತಿರುವ ಈ ಶುಭ ಸಂಧರ್ಭದಲ್ಲಿ ಹಲವು ದಿನಗಳ ಬಳಿಕ ಮೀಡಿಯಾ ಮುಂದೆ ಬಂದು ಮಾತನಾಡಿರುವ ಮೇಘನಾ ರಾಜ್ ಕಠಿಣವಾದ ಸಮಯವನ್ನ ಎದುರಿಸುವುದನ್ನ ನಾನು ಚಿರುವಿನಿಂದ ಕಲಿತಿರುವೆ. ಅವರು ಇಲ್ಲದೆ ಇರುವ ನೋವನ್ನ ಮರೆಯಲು ಆಗುವುದಿಲ್ಲ. ಆದರೆ ನನ್ನ ಮಗುವಿನಲ್ಲಿ ನನ್ನ ಚಿರುವನ್ನ ನೋಡುತ್ತಿದ್ದೇನೆ. ನನ್ನ ಶಕ್ತಿಯೇ ನನ್ನ ಮಗುವಾಗಿದ್ದು ಎಲ್ಲವನ್ನು ಚಿರುವೆ ನನ್ನ ಕೈನಿಂದ ಮಾಡಿಸಿದ್ದಾರೆ ಎಂದು ಕಣ್ಣೀರು ಹಾಕುತ್ತಾ ಮಾತನಾಡಿದ್ದಾರೆ ಮೇಘನಾ.

ಮಗ ಬಂದಿರೋದು ನನ್ನ ಜೀವನದಲ್ಲಿ ದೊಡ್ಡ ಸಂಭ್ರಮವನ್ನೇ ತಂದಿದೆ. ಇಂದು ನನ್ನ ಮಗನ ತೊಟ್ಟಿಲು ಶಾಸ್ತ್ರವಾಗಿದ್ದು ಇದು ನನ್ನ ಪಾಲಿಗೆ ಮರೆಯಲಾಗದ ದಿನ ಎಂದು ಚಿರು ಅಗಲಿಕೆಯ ನೋವಿನಲ್ಲೂ ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದಾರೆ ಮೇಘನಾ ರಾಜ್. ಇನ್ನು ಮಾಧ್ಯಮಗಳ ಬಗ್ಗೆ ಮಾತನಾಡಿದ ಮೇಘನಾ ನೀವು ನನ್ನನ್ನ ಮಗಳಾಗಿ ನೋಡಿದ್ದೀರಾ..ನಾನು ಎಂದೆಂದಿಗೂ ನಿಮಗೆ ಚಿರಋಣಿ ಎಂದು ಧನ್ಯವಾದಗಳನ್ನ ಅರ್ಪಿಸಿದ್ದಾರೆ.