ನಮಸ್ತೆ ಸ್ನೇಹಿತರೆ, ಮೇಘನ ರಾಜ್.. ಕಮಲದಂತೆ ನಗು, ಮಗುವಿನಂತಹ ಹೃದಯ ಹೊಂದಿರುವ ಈ ನಟಿ ಕನ್ನಡದ ಖ್ಯಾತ ಕಲಾವಿದರಾದ ಸುಂದರ್ ರಾಜ್ ಹಾಗು ಪ್ರಮಿಳಾ ಜೋಷಾಯ್ ಅವರ ಮುದ್ದಾದ ಮಗಳು. ಸುಂದರ ಬಾಲ್ಯವನ್ನು ಕಳೆದ ಮೇಘನ ರಾಜ್ ಬಾಲ ನಟಿಯಾಗಿ ಜೋಕುಮಾರಸ್ವಾಮಿ ಚಿತ್ರದಲ್ಲಿ ನಟಿಸಿ.. ನಂತರ ಓದಿನ ಕಡೆಗೆ ಹೆಚ್ಚು ಹೊತ್ತು ಕೊಟ್ಟು ಸೈ’ಕಾಲಜಿಯಲ್ಲಿ ಡಿಗ್ರಿ ಮುಗಿಸಿದ ಮೇಘನ ರಾಜ್ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಮಲಯಾಳಂ ನ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಮೇಘನ ರಾಜ್ ಅಲ್ಲಿ ಟಾಪ್ ನಟಿಯಾಗಿ ಮಿಂಚಿ ರಾಜಾ ಹುಲಿ ಚಿತ್ರದ ಮೂಲಕ ಮತ್ತೆ ಕನ್ನಡದ ತೆರೆಯಲ್ಲಿ ಪ್ರಖ್ಯಾತಿ ಗಳಿಸಿದರು.

ಆಗಾದ್ರೆ ಮೇಘನ ರಾಜ್ ಅವರ ಬೆಂಗಳೂರಿನ ಮನೆ ಹೇಗಿದೆ ಅಂತ ನೋಡೊಣ.. ಮೇ 3 , 1990 ರಲ್ಲಿ ಹುಟ್ಟಿದ ಮೇಘನ ರಾಜ್ ಸುಂದರ್ ರಾಜ್ ಅವರ ಮುದ್ದಿನ ಮಗಳು. 180 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುಂದರ್ ರಾಜ್ ಅವರು ಕನ್ನಡದ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿ ಜನಮನ್ನಣೆ ಗಳಿಸಿದವರು.. ಇದೇ ನೋಡಿ ಮೇಘನ ರಾಜ್ ಅವರು ಹುಟ್ಟಿ ಬೆಳೆದ ಮನೆ. ಮನೆಯ ಹೊಳಗೆ ಸಾಂಸ್ಕೃತಿಕ ಹಾಗೂ ಸಂಪ್ರದಾಯದ ಶೈಲಿಯಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿದೆ.. ಈ ಮನೆಯ ವಿಶೇಷತೆ ಏನೆಂದರೆ ಇದು ಬೆಂಗಳೂರಿನಲ್ಲಿ ಇದ್ದರೂ ಹಳ್ಳಿಯ ಮನೆಯಂತೆ ಸುತ್ತಮುತ್ತ ಹಲಾವರು ಗಿಡ ಮರಗಳನ್ನ ಬೆಳೆಯಲಾಗಿದೆ.

ಪರಿಸರ ಪ್ರೇಮಿಗಳಾಗಿರುವ ಮೇಘನ ರಾಜ್ ಕುಟುಂಬ ಮನೆಯ ಸುತ್ತಲೂ ತರಕಾರಿ, ಹಣ್ಣು, ಔಷಧಿ ಗಿಡಗಳನ್ನು ಬೆಳೆಸಿದ್ದಾರೆ.. ಸುಮಾರು ವರ್ಷ ಗಾಡವಾದ ಪ್ರೀತಿಯಲ್ಲಿದ್ದ ಮೇಘನ ರಾಜ್ ಹಾಗು ಚಿರಂಜೀವಿ ಸರ್ಜಾ 2018 ರಲ್ಲಿ ಎರಡು ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗುತ್ತಾರೆ. ಆದರೆ ಈ ಸುಂದರ ಜೋಡಿಯನ್ನ ನೋಡಿ ವಿಧಿಗೆ ಸಹಿಸಲಾಗಲಿಲ್ಲ.. ಕೇವಲ ಎರಡು ವರ್ಷಕ್ಕೆ ಮೇಘನ ರಾಜ್ ಅವರ ಪ್ರೀತಿಯ ಗಂಡನನ್ನ ಕಿತ್ತುಕೊಂಡ ವಿಧಿ ಕಣ್ಣೀರಿನ ಸಮುದ್ರದ ಒಳಗೆ ನೂ’ಕಿತು. ಆದರೆ ಜೂನಿಯರ್ ಚಿರು ಹುಟ್ಟಿದ ಮೇಲೆ ಈ ಮನೆಯಲ್ಲಿ ಒಂದಷ್ಟು ನಗು ಮೂಡುತ್ತಿದೆ. ಆದರೆ ಪ್ರೀತಿಯ ಚಿರು ಇಲ್ಲದೇ ಪ್ರತೀ ಕ್ಷಣ ಮೇಘನ ರಾಜ್ ಅವರ ಹೃದಯ ಹಿಂ’ಡುತಿರೋದಂತು ನಿಜ..