ಸರ್ಜಾ ಕುಟುಂಬದವರಿಗೆ ಎಂದಿಗೂ ಅಳಿಸಲಾರದ ನೋವು ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡದ್ದು. ಅದರಲ್ಲೂ ಮೇಘನಾ ಮತ್ತು ಅವರ ಕುಟುಂಬದವರನ್ನ ಎಂದಿಗೂ ಬಿಟ್ಟು ಹೋಗಲ್ಲ ಈ ಅಳಿಸಲಾರದ ನೋವು. ಏಕೆಂದರೆ ನಟ ಚಿರಂಜೀವಿ ಸರ್ಜಾ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಈ ಭೂಮಿಯಿಂದಲೇ ಮರೆಯಾದದ್ದು ನ್ಯಾಯಯುತವಾದದ್ದಲ್ಲ. ಆದರೆ ವಿಧಿಯ ಮುಂದೆ ಎಲ್ಲರೂ ತಲೆ ಬಾಗಲೇಬೇಕು.

ಇನ್ನು ಗರ್ಭಿಣಿಯಾಗಿರುವ ಮೇಘನಾ ರಾಜ್ ಅವರ ನೋವನ್ನ ಹೇಳಲು ಸಾಧ್ಯವಿಲ್ಲ. ತನ್ನ ಪ್ರೀತಿಯ ಪತಿ ಚಿರು ಸರ್ಜಾ ಅವರನ್ನ ಕಳೆದುಕೊಂಡು ಅನುಭವಿಸುತ್ತಿರುವ ಯಾತನೆ ಅವರಿಗಷ್ಟೇ ತಿಳಿದಿದೆ. ಇದು ಮೇಘನಾ ಅವರಿಗೆ ಅತ್ಯಂತ ಕಠಿಣ ದಿನಗಳು. ಇಂತಹ ಸಮಯದ್ಲಲೂ ಇತ್ತೀಚೆಗಷ್ಟೇ ತಮ್ಮ ಪ್ರೀತಿಯ ಪತಿಯ ಬಗೆಗಿನ ಮನದಾಳದ ಹೃದಯಸ್ಪರ್ಶಿ ಮಾತುಗಳನ್ನ ತಮ್ಮ ಬರಹದ ಮೂಲಕ ಹಂಚಿಕೊಂಡಿದ್ದರು.

ಇನ್ನು ಈಗ ಮೇಘನಾ ರಾಜ್ ತಮ್ಮ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದಾರೆ. ಹೌದು, ಇದುವರೆಗೂ ಅವರ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಮೇಘನಾ ರಾಜ್ ಎಂದಷ್ಟೇ ಹೆಸರು ಇತ್ತು. ಈಗ ಚಿರಂಜೀವಿ ಸರ್ಜಾ ಅಗಲಿಕೆಯ ಬಳಿಕ ಸರ್ಜಾ ಕುಟುಂಬದ ಸರ್ ನೇಮ್ ಅನ್ನ ಸೇರಿಸಿಕೊಂಡಿದ್ದು, ಮೇಘನಾ ರಾಜ್ ಸರ್ಜಾ ಎಂದು ತಮ್ಮ ಹೆಸರನ್ನ ಬದಲಾಯಿಸಿಕೊಂಡಿದ್ದಾರೆ.