Advertisements

ಇದು ನನ್ನ ಮಗುವಲ್ಲ ಎಂದು ಸ್ಪಷ್ಟನೆ ಕೊಟ್ಟ ಮೇಘನಾ ಸರ್ಜಾ.?

Cinema

ಸ್ನೇಹಿತರೇ, ಇತ್ತೀಚೆಗಷ್ಟೇ ನಟಿ ಮೇಘನಾ ರಾಜ್ ಹಾಗೂ ಅವರ ಮಗು ಮತ್ತು ಮೇಘನಾ ತಂದೆ ತಾಯಿಗಳು ಕೊ’ರೋನಾ ಸೋಂಕಿಗೆ ಒಳಗಾಗಿಗಿದ್ದು ಚಿಕಿತ್ಸೆಯಲ್ಲಿದ್ದು ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಆದರೆ ಇನ್ನು ಒಂದು ವಾರದ ಬಳಿಕವೇ ಸೋಂಕಿನ ಪರೀಕ್ಷೆ ನಡೆಸಿದ ವರದಿ ಬಂದ ಬಳಿಕ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಆದಷ್ಟೂ ತಾಯಿ ಮಗು ಸೋಂಕಿನಿಂದ ಗುಣಮುಖರಾಗಲಿ ಎನ್ನುವುದೇ ನಮ್ಮೆಲ್ಲರ ಆಶಯ. ಇನ್ನು ಇದರ ನಡುವೆಯೇ ಮಗುವೊಂದರ ಫೋಟೋವೊಂದನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮೇಘನಾ ರಾಜ್ ರವರು ಈ ಮಗು ನನ್ನದಲ್ಲ ಎಂದು ಬರೆದುಕೊಂಡಿದ್ದಾರೆ.

Advertisements

ಹೌದು, ಮೇಘನಾ ರಾಜ್ ಮೊನ್ನೆಯಷ್ಟೇ ತನ್ನ ಮಗನ ಕುರಿತು ಮಾಹಿತಿಯೊಂದನ್ನ ಹಂಚಿಕೊಂಡಿದ್ದು, ನನ್ನ ಮಗನು ಹೆಣ್ಣುಮಕ್ಕಳಿಗೆ ಗೌರವ ಕೊಡುವ ರೀತಿಯಲ್ಲಿ, ಒಳ್ಳೆಯ ದಾರಿಯಲ್ಲಿ ಬೆಳೆಸುತ್ತೇನೆ, ನಿಮ್ಮ ಮಗಳಿಗೆ ಯಾವುದೇ ತೊಂದರೆಯಾಗದಂತೆ ನನ್ನ ಮಗನನ್ನ ಬೆಳೆಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು. ಇನ್ನು ಮೇಘನಾರವರ ಈ ಮಾತುಗಳಿಗೆ ಎಲ್ಲಾ ಕಡೆಯಿಂದಲೂ ಬಾರೀ ಮೆಚ್ಚೆಗೆಗಳು ವ್ಯಕ್ತವಾಗಿದ್ದು ಈ ವಿಚಾವಂತೂ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ಇದರ ಜೊತೆಗೆ ಸೆಲೆಬ್ರೆಟಿಗಳು ಹಾಗೂ ಅವರ ಮಕ್ಕಳ ಕುರಿತು ಇಲ್ಲ ಸಲ್ಲದ ಸುಳ್ಳು ಸುದ್ದಿಗಳು ಪ್ರಸಾರವಾಗುವುದು ಸಾಮಾನ್ಯವಾಗಿಬಿಟ್ಟಿದೆ.

ಅದೇ ರೀತಿ ಮೇಘನಾ ರಾಜ್ ಅವರಿಗೆ ಸಂಬಂಧಪಟ್ಟ ವಿಷಯವೊಂದು ಯೂಟ್ಯೂಬ್ ನಲ್ಲಿ ಬಾರೀ ಸುದ್ದಿಯಾಗಿದ್ದು ವೈರಲ್ ಆಗಿತ್ತು. ಇನ್ನು ಇದಕ್ಕೂ ಮುಂಚೆ ಚಿರು ಸರ್ಜಾ ಇಲ್ಲವಾದ ದಿನಗಳಿಂದಲೂ ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬದ ಕುರಿತಂತೆ ಹಲವಾರು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಇನ್ನು ಕೆಲವೊಂದಕ್ಕೆ ಮಾತ್ರ ಸ್ವತಃ ಮೇಘನಾ ಅವರೇ ಸತ್ಯಾಂಶದ ಸ್ಪ್[ಸ್ಪಷ್ಟನೆ ನೀಡುತ್ತಿದ್ದರು. ಇನ್ನು ಇದೆ ರೀತಿ ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ ಒಂದು ಇದು ಮೇಘನಾ ರಾಜ್ ಅವರ ಮಗುವೆಂದು ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ಅದು ಬಾರೀ ವೈರಲ್ ಆಗಿತ್ತು. ಇನ್ನು ಆ ಮಗು ಮೇಘನಾ ಅವರದ್ದೇ ಎಂದು ನಂಬಿದ್ದದ ಅನೇಕರು ಕಾಮೆಂಟ್ ಗಳನ್ನ ಮಾಡಿದ್ದರು. ಆದರೆ ಅಸಲಿಗೆ ಅದು ಮೇಘನಾ ಅವರ ಮಗುವಿನ ವಿಡಿಯೋ ಆಗಿರಲಿಲ್ಲ. ಬೇರೆ ಯಾವುದೊ ಮಗುವಿನ ವಿಡಿಯೋ ಆಗಿತ್ತು.

ಆದರೆ ಇದನ್ನ ಗಮನಿಸಿದ ಮೇಘನಾ ರಾಜ್ ರವರು ತಾವೇ ಖುದ್ದಾಗಿ ಆ ವಿಡಿಯೋದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನು ಆ ಮಗುವಿನ ಫೋಟೋ ಹಂಚಿಕೊಂಡಿರುವ ಮೇಘನಾ ಸರ್ಜಾ ಅವರು ಈ ಮಗು ನೋಡೋದಕ್ಕೆ ತುಂಬಾ ಕ್ಯೂಟ್ ಆಗಿದೆ..ಆದರೆ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ..ಈ ಮಗು ನನ್ನ ಜೂನಿಯರ್ ಚಿರು ಅಲ್ಲ ಎಂದು ಬರೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಒಟ್ಟಿನಲ್ಲಿ ವಿಷಯಕ್ಕೆ ದೂರವಾದ ವಿಚಾರಗಳನ್ನ ಕೆಲವರು ತಮಗೆ ಇಷ್ಟಬಂದ ಹಾಗೆ ಹರಡುತ್ತಿರುತ್ತಾರೆ. ಇನ್ನು ಮೇಘನಾ ರಾಜ್ ರವರು ಕೂಡ ಇಂತಹ ಸುದ್ದಿಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ, ಅವುಗಳನ್ನ ನಿರ್ಲಕ್ಷ್ಯ ಮಾಡುವುದೇ ಉಚಿತ..ಅವರು ಕೂಡ ಅದನ್ನೇ ಮಾಡುತ್ತಿದ್ದಾರೆ..