Advertisements

ವೇದಿಕೆ ಮೇಲೆ ಅಪ್ಪು ಡೈಲಾಗ್ ಹೊಡೆದ ಅಶ್ವಿನಿ! ಹೇಗಿತ್ತು ನೋಡಿ..

Cinema

ಮಾತು ಕಡಿಮೆ ಕೆಲಸ ಹೆಚ್ಚು ಎಂದು ನಡೆಯುವವರು ಸೌಜನ್ಯದ ಮೂರ್ತಿ ಸರಳತೆಯ ಕೀರ್ತಿ ಈ ಕಾರ್ಯಕ್ರಮ ಅತಿಥಿಯಾಗಿದ್ದು ಅಶ್ವಿನಿ ಯವರು ಬಂದು ಕಾರ್ಯಕ್ರಮದಲ್ಲಿ ಏನೆಂದರು ಗೊತ್ತೆ ? ಅಲ್ಲದೆ ಇವರ ಮಾತು ಕೇಳಿ ನಟಿ ಮೇಘನಾ ರಾಜ್ ರವರು ಕಣ್ಣೀರಿಟ್ಟಿದ್ದು ಯಾಕೆ ಗೊತ್ತೆ? ಮುಂದೆ ಓದಿ. ನಟ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಮತ್ತು ಧ್ರುವ ಸರ್ಜಾ ಅವರು ಡಾನ್ಸಿಂಗ್ ಚಾಂಪಿಯನ್’ ಗ್ರಾಂಡ್ ಫಿನಾಲೆಯಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದ್ದಾರೆ. ಹೌದು ಡ್ಯಾನ್ಸ್ ಎಂದರೆ ಪುನೀತ್. ಪುನೀತ್ ಸ್ಥಾನವನ್ನು ಈಗ ಅಶ್ವಿನಿ ತುಂಬಿದ್ದು ಕಾರ್ಯಕ್ರಮಕ್ಕೆ ಅಶ್ವಿನಿ ಹೋಗುವುದು ಕಡಿಮೆಯೇ ಆದರೆ ಈಗ ಪುನೀತ್ ಪ್ರತಿನಿಧಿಯಾಗಿ ಕಾರ್ಯಕ್ರಮದ ಕರೆಯೋಲೆಯ ಗೌರವಕ್ಕೆ ಅಶ್ವಿನಿ ಹೋಗಿದ್ದಾರೆ.

Advertisements

ಹೌದು ಕಾರ್ಯಕ್ರಮಕ್ಕೆ ಆಗಮಿಸಿದ ಧ್ರುವ ಸರ್ಜಾ ಪೊಗರು ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದು ಅಶ್ವಿನಿ ಪುನೀತ್ ರಾಜಕುಮಾರ್ ಆಗಮಿಸಿ ಫೈನಲ್ ಜೊಡಿಗಳಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ. ಇನ್ನು ಗ್ರಾಂಡ್ ಫಿನಾಲೆಯಲ್ಲಿ 5 ಜೋಡಿಯಿದ್ದು ಡಾನ್ಸಿಂಗ್ ಚಾಂಪಿಯನ್ ಗ್ರಾಂಡ್ ಫಿನಾಲೆ ಭಾನುವಾರ ( ಮೇ 29 ) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಇಡೀ ಡ್ಯಾನ್ಸಿಂಗ್ ಚಾಂಪಿಯನ್ ಸಂಭ್ರಮವನ್ನು ನಾವು ಪುನೀತ್ ರಾಜ್‌ಕುಮಾರ್‌ ಅವರಿಗೆ ಸಮರ್ಪಣೆ ಮಾಡ್ತಿದ್ದೀವಿ. ಅದರ ಭಾಗಿಯಾಗಿನೀವು ಬಂದಿದ್ದೀರಾ.

ನೀವು ಬಂದಿರುವುದಕ್ಕೆ ನಾವು ಬಹಳ ಕೃತಜ್ಞರಾಗಿರುತ್ತೀವಿ ಎಂದು ವಿಜಯ್ ರಾಘವೇಂದ್ರ ವೇದಿಕೆ ಮೇಲೆ ಹೇಳಿದ್ದು ಇಡೀ ಕರ್ನಾಟಕನೇ ಮಗು ತರ ಎತ್ತಿ ಬೆಳಸಿರುವಂತ ನಮ್ಮ ಪುನೀತ್ ಅವರನ್ನು ಡ್ಯಾನ್ಸಿಂಗ್ ರೂಪದಲ್ಲಿ ಶೊ ವಿನ್ನರ್ ಅವರ ಮನೆಗೆ ಹೋಗುತ್ತಿದ್ದಾರೆ ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ. ಫಿನಾಲೆ ಹಂತ ತಲುಪಿರುವ ಎಲ್ಲಾ ಸ್ಪರ್ಧಿಗಳಿಗೆ ಆಲ್‌ ದಿ ಬೆಸ್ಟ್‌ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ವೇದಿಕೆ ಮೇಲಿಂದ ವಿಶ್ ಮಾಡಿದ್ದಾರೆ. ಅಲ್ಲದೇ ಅಶ್ವಿನಿ ಯವರು ಅಪ್ಪು ಅವರ ಡೈಲಾಗ್ ಹೊಡೆದಿದ್ದು ಇದನ್ನು ಕೇಳಿದ ಮೇಘನಾ ಕಣ್ಣೀರು ಹಾಕಿದ್ದಾರೆ. ಇನ್ನು ಅಶ್ವಿನಿ ಅವರು ಅಪ್ಪು ಅವರ ಯಾವ ಡೈಲಾಗ್ ಹೊಡೆದರು ಎಂದು ತಿಳಿಯಲು ಪಿನಾಲೆ ಸಂಚಿಕೆ ವರೆಗೂ ಕಾಯಬೇಕಿದೆ.