Advertisements

ಅಪ್ಪು ಜೊತೆ ನಟಿಸಲು ಮೇಘನಾ ರಾಜ್ ಗೆ ಅಂದು ಅವಕಾಶ ಕೊಟ್ಟಾಗ ತಿರಸ್ಕರಿಸಿದ್ದರು ಯಾಕೆ ಗೊತ್ತಾ?

Cinema

ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಈ ನಾಯಕಿಯರು ಅದೆಷ್ಟೇ‌ ಹೆಸರು ಮಾಡಿದ್ದರೂ ಸಹ ಪವರ್ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಸಿಕ್ಕಾಗ ಯಾರೂ ಕೂಡ ಬೇಡ ಅನ್ನುವುದಿಲ್ಲ. ಹೌದು ನಟನಾ ಕೆರಿಯರ್ ನಲ್ಲಿ ಒಂದು ಬಾರಿಯಾದರೂ ಕೂಡ ಸ್ಟಾರ್ ನಟನ ಜೊತೆ ನಟಿಸಬೇಕು ಅನ್ನುವ ಆಸೆ ಇಟ್ಟು ಕೊಂಡಿರುತ್ತಾರೆ. ಹೌದು ಅದಕ್ಕಾಗಿ ಎದುರು ನೋಡುತ್ತಿರುತ್ತಾರೆ. ಇನ್ನು ಕನ್ನಡ ಸಿನಿಮಾ ರಂಗದಲ್ಲಿ ಈ ಹಿಂದೆ ಡಾ ರಾಜ್ ಕುಮಾರ್ ಜೊತೆ ಡಾ ವಿಷ್ಣುವರ್ಧನ್ ಜೊತೆ ಅಂಬರೀಷ್ ಜೊತೆ ಹಾಗೂ ರವಿಚಂದ್ರನ್ ಜೊತೆ ಹೀಗೆ ಅನೇಕರ ಜೊತೆ ನಟಿಸಲು ಅನೇಕ ನಟಿ ಮಣಿಯರು ಕಾಯುತ್ತಿದ್ದರು. ಆ ಬಳಿಕ ಈಗನ ಪೀಳಿಗೆಯಲ್ಲಿ ಡಿ ಬಾಸ್ ದರ್ಶನ್ ಜೊತೆ ಕಿಚ್ಚ ಸುದೀಪ್ ಜೊತೆ ಅದೇ ರೀತಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಲು ನಟಿಯರು ಆಸೆ ಪಡುತ್ತಾರೆ. ಆದರೆ ನಿಮಗೊತ್ತೆ ಒಂದು ಕಾಲದಲ್ಲಿ ನಟಿ ಮೇಘನಾ ರಾಜ್ ಅವರಿಗೆ ಪುನೀತ್ ರಾಜ್ ಕುಮಾರ್ ಜೊತೆ ನಟಿಸಲು ಆಫರ್ ಬಂದಿತ್ತಂತೆ. ಹೌದು ಆದರೆ ಅದನ್ನು ಅವರು ತಿರಸ್ಲರಿಸಿದ್ದರಂತೆ. ಯಾರೇ ಆಗಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಲು ಅವಕಾಶ ಸಿಕ್ಕಾಗ ಹಿಂದೆ ಮುಂದೆ ನೋಡೋದಿಲ್ಲ.‌

Advertisements

ಹೀಗಿರುವಾಗ ಮೇಘನಾ ರಾಜ್ ಯಾಕೆ ಹೀಗೆ ಮಾಡಿದ್ದರು ಎಂದು ಅಚ್ಚರಿ ಪಡಲೇಬೇಕು. ಆದರೆ ಇದಕ್ಕೆ ಕಾರಣವೂ ಕೂಡ ಇದ್ದು ಮೇಘನಾ ರಾಜ್ ಅವರಿಗೆ ಪುನೀತ್ ಜೊತೆ ನಟಿಸುವ ಅವಕಾಶ ಬಂದಾಗ ಅದನ್ನು ಅವರ ತಂದೆ ನಟ ಸುಂದರ್ ರಾಜ್ ಅವರೇ ಬೇಡ ಅಂದಿದ್ದರಂತೆ. ಹೌದು ಹೀಗಂತ ಇತ್ತೀಚೆಗೆ ಸುಂದರ್ ರಾಜ್ ಹೇಳಿ ಕೊಂಡಿದ್ದು ಆ ಸಮಯದಲ್ಲಿ ಮೇಘನಾ ರಾಜ್ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದರಂತೆ.ಹೌದು ಆ ವಯಸ್ಸಿಗೆ ಸಿನಿಮಾ ನಟನೆ ಅಂತ ಹೋದರೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ತಿರಸ್ಕರಿಸಿದ್ದು ನಟ ಸುಂದರ್‌ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ಅವರ ಮಗಳು ಮೇಘನಾ ರಾಜ್ ಅವರು ಇದೀಗ ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರೂ ತಮ್ಮದೆ ಆದ ಸರಳ ನಟನೆಯಿಂದ ಅಭಿಮಾನಿ ಬಳಗವನ್ನು ಹೊಂದಿರುವವರು.‌ ಹೌದು ಬಾಲಕಲಾವಿದರಾಗಿ ನಂತರ ತೆಲುಗು ಚಿತ್ರರಂಗ ದಲ್ಲಿ ಮೊದಲು ಸಿನಿಮಾ ದಲ್ಲಿ ನಟಿಸಿ ನಂತರ ಸ್ಯಾಂಎಲ್ ವುಡ್‌ ಪ್ರವೇಶ ಮಾಡಿದವರು.‌

ಹೌದು ಕನ್ನಡದಲ್ಲಿ ಆಟಗಾರ ರಾಜಾಹುಲಿ ಪುಂಡ ಮುಂತಾದ ಸಿನಿಮಾಗಳಲ್ಲಿ ನಟಿಯಾಗಿ ನಟಿಸಿದ್ದಾರೆ. ಇವರು ನಟ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಆದರೆ ವಿಧಿ ಅವರ ಬಾಳಲ್ಲಿ ಕ್ರೂರಿಯಾಗಿ ಬಿಟ್ಟಿದ್ದು ಐದು ತಿಂಗಳ ಗರ್ಭಿಣಿಯಾಗಿರುವಾಗಲೇ ಚಿರು ಸರ್ಜಾ ಹೃದಯಾಘಾತದಿಂದ ಅಗಲಿದ್ದಾರೆ.ಆ‌ ಬಳಿಕ ತೀರಾ ನೊಂದಿದ್ದ ಮೇಘನಾ‌ ರಾಜ್ ಮಗ ರಾಯನ್ ಹುಟ್ಟಿದ ನಂತರ ತನ್ನೆಲ್ಲಾ ನೋವುಗಳನ್ನು ‌ಮರೆತು‌‌ ಮಗನಿಗಾಗಿ ಖುಷಿ ಖುಷಿಯಿಂದ ಜೀವನ‌ ನಡೆಸುತ್ತಿದ್ದಾರೆ. ಹೌದು ಮತ್ತೆ ಮೊದಲಿನಂತೆ ಲವ ಲವಿಕೆ ಇಂದ ಜನರ ಮುಂದೆ ಬಂದಿದ್ದು ಕೆಲವು ಸಿನಿಮಾಗಳಿಗೂ ಸಹಿ‌ ಹಾಕಿರುವ ಮೇಘನಾ ರಾಜ್ ಇದೀಗ ಕಾರ್ಯಕ್ರಮ ದಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ಥ್ರಿಲ್ಲರ್ ಸಿನಿಮಾ ಮೂಲಕ ನಟಿ ಮೇಘನಾ ರಾಜ್ ಬೆಳ್ಳಿತೆರೆಗೆ ಮರಳುತ್ತಿದ್ದು ವಿಶಾಲ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಮೇಘನಾರಾಜ್ ಅಭಿನಯಿಸಲಿದ್ದಾರೆ. ಹ್ಯಾಪಿ ನ್ಯೂ ಇಯರ್ ಮತ್ತು ಫ್ರೆಂಚ್ ಬಿರಿಯಾನಿ ಚಿತ್ರಗಳ ಮೂಲಕ ನಿರ್ದೇಶಕರಾಗಿ ಛಾಪು ಮೂಡಿಸಿರುವ ಪನ್ನಗಾಭರಣ ಈ ಸಿನಿಮಾ ಮೂಲಕ ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರ ಜನ್ಮ ದಿನಾಚರಣೆಯಂದು (ಅಕ್ಟೋಬರ್ 17) ಚಿತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು ಕ್ರೈಮ್ ಥ್ರಿಲ್ಲರ್ ನಲ್ಲಿ ನಾಲ್ಕು ಪ್ರಮುಖ ಪಾತ್ರಗಳಿದ್ದು ಮೇಘನಾ ಪ್ರಾಜೆಕ್ಟ್ ನಲ್ಲಿ ಮೊದಲಿಗರಾಗಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಈ ಬಗ್ಗೆ ನಿಮ್ಮ‌ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.