Advertisements

ಮಗನ ಭವಿಷ್ಯಕ್ಕೋಸ್ಕರ ದೊಡ್ಡ ನಿರ್ಧಾರ ತಗೆದುಕೊಂಡ ಮೇಘನಾರಾಜ್! ನೋಡಿ..

Cinema

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಯುವನಟನಾಗಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು ಚಿರು. ಹೌದು ಯುವಸಾಮ್ರಾಟ್ ಎಂದೇ ಹೆಸರು ಪಡೆದುಕೊಂಡಿದ್ದ ಚಿರು ರವರು ಅಷ್ಟು ಬೇಗ ಈ ಪ್ರಪಂಚ ಬಿಟ್ಟು ಹೋಗುತ್ತಾರೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಹೌದು ಚಿರು ಅವರು 2018ರಲ್ಲಿ ಅಂದರೆ ಆ ರೀತಿ ಆಗುವ ಎರಡೇ ವರ್ಷಗಳ ಮೊದಲು ಮೇಘನಾ ರಾಜ್ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಏಳೆಂಟು ವರ್ಷಗಳ ಕಾಲ ಪ್ರೀತಿಸಿ ತಂದೆ ತಾಯಿಯನ್ನು ಒಪ್ಪಿಸಿ ಮದುವೆಯಾಗಿತ್ತು ಈ ಜೋಡಿ. ಹೌದು ಆದರೆ ಮದುವೆಯಾದ ಎರಡೇ ವರ್ಷಕ್ಕೆ ಈ ರೀತಿಯ ಘಟನೆ ನಡೆದು ಹೋಗಿದ್ದು ಇನ್ನು ಚಿರು ಅವರು ಹೋದಮೇಲೆ ಮೇಘನಾ ರಾಜ್ ಅವರೊಡನೆ ಇರುವುದು ಅವರ ಕುಟುಂಬ ಹಾಗೂ ಚಿರುವಿನ ಪ್ರತಿರೂಪ ಆಗಿರುವ ಮಗ ರಾಯನ್ ರಾಜ್ ಸರ್ಜಾ ಎನ್ನಬಹುದು. ಇಂದು ಮೇಘನಾ ಅವರಿಗೆ ಎಲ್ಲವೂ ಆಗಿರುವುದು ಅವರ ಮಗ ರಾಯನ್ ರಾಜ್ ಸರ್ಜಾನೇ.

Advertisements

ಇನ್ನು ತಮ್ಮ ಮಗುವಿನ ಬಗ್ಗೆ ಚಿರು ಅವರು ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದು ಮಗನನ್ನು ಹೇಗೆ ಬೆಳೆಸಬೇಕು ಎಂದು ಕನಸು ಕಂಡಿದ್ದರು. ಹೌದು ಇದೀಗ ಮೇಘನಾ ರಾಜ್ ಅವರು ಚಿರುವಿನ ಕನಸಿನಂತೆ ಮಗನನ್ನು ಬೆಳೆಸುತ್ತಿದ್ದು ತಮಗೆಲ್ಲ ಗೊತ್ತಿರುವ ಹಾಗೆ ಚಿರು ಅವರು ಇದ್ದಾಗ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಹೌದು ಆದರೆ ಚಿರು ಅವರು ದಿಢೀರ್ ಎಂದು ಇನ್ನಿಲ್ಲವಾದ ಕಾರಣ ಸಿನಿಮಾ ಕೆಲಸಗಳು ಸ್ಲೋ ಆಗಿದ್ದವು. ಸದ್ಯ ಇದೀಗ ಚಿರು ಅವರು ಅಭಿನಯಿಸಿರುವ ರಾಜ ಮಾರ್ತಾಂಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಈ ಸಿನಿಮಾ ಬಗ್ಗೆ ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದ್ದು ರಾಜ ಮಾರ್ತಾಂಡ ಸಿನಿಮಾದಲ್ಲಿ ಚಿರು ಅವರ ಮುದ್ದಿನ ಮಗ ರಾಯನ್ ರಾಜ್ ಸರ್ಜಾ ಕೂಡ ಕಾಣಿಸಿಕೊಂಡಿದ್ದಾರೆ.

ಹೌದು ಇದೇ ಮೊದಲ ಬಾರಿಗೆ ರಾಯನ್ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದು ಅದು ತಂದೆಯ ಸಿನಿಮಾ ಎನ್ನುವುದು ವಿಶೇಷ. ಇನ್ನು ಚಿರು ಅವರು ಈ ಸಮಯದಲ್ಲಿ ಇದ್ದಿದ್ದರೆ ಬಹಳ ಸಂತೋಷ ಪಡುತ್ತಿದ್ದರು ಎಂದೇ ಎಲ್ಲರೂ ಭಾವಿಸುತ್ತಿದ್ದು ರಾಜ ಮಾರ್ತಾಂಡ ಸಿನಿಮಾದಲ್ಲಿ ರಾಯನ್ ಕಾಣಿಸಿಕೊಂಡಿರುವ ಬಗ್ಗೆ ಸಿನಿಮಾ ನಿರ್ದೇಶಕ ರಾಮ್ ನಾರಾಯಣ್ ಅವರು ತಿಳಿಸಿದ್ದಾರೆ. ಹೌದು ಚಿರು ಅವರಿಗೆ ತಮ್ಮ ಧ್ರುವ ಸರ್ಜಾ ಡಬ್ ಮಾಡಿದ್ದು ಸಿನಿಮಾ ಬಗ್ಗೆ ಕೆಲವು ಮಾಹಿತಿ ನೀಡಿರುವ ನಿರ್ದೇಶಕರು ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ. ರಾಯನ್ ರನ್ನು ತೆರೆಮೇಲೆ ನೋಡಲು ಕಾಯುತ್ತಿದ್ದಾರೆ ಅಭಿಮಾನಿಗಳು.