ಮೊನ್ನೆ ಜಮ್ಮ ಕಾಶ್ಮೀರದ ಹಂಡ್ವಾರಾ ಪ್ರದೇಶದಲ್ಲಿ ನಡೆದ ಭಾರತದ ಆರ್ಮಿ ಹಾಗೂ ಶತ್ರುಗಳ ನಡುವಿನ ಚಕಮಕಿಯಲ್ಲಿ ನಾವು ಮೇಜರ್ ಅನುಜ್ ಸೂದ ಅವರನ್ನು ಕಳೆದುಕೊಂಡಿದ್ದೇವೆ. ಅವರ ಜೊತೆ ಕರ್ನಲ್ ಸೇರಿ ಇನ್ನೂ ಮೂವರು ಹೀಗೆ ಐದು ಯೋಧರನ್ನು ಕಳೆದುಕೊಂಡಿದ್ದೇವೆ. ಮೇಜರ್ ಸೂದ್ ಅವರಿಗೆ ಮೂವತ್ತು ವರ್ಷ ವಯಸ್ಸು ಅಷ್ಟೇ. ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು.

ಅತ್ಯಂತ ಬುದ್ಧಿವಂತ ಆಫೀಸರ್. Six times NDA torch holder ಅಂತೆ ಇವರು, IISc ಬೆಂಗಳೂರಿನಿಂದ Mtech ಪದವಿ ಪಡೆದಿದ್ದಾರೆ. ಅವರು ಕ್ಲಾಸಿನಲ್ಲಿ ಯಾವತ್ತೂ ಟಾಪರ್. IIT ಪರೀಕ್ಷೆಯಲ್ಲಿ ಪಾಸಾಗಿ, ಅಲ್ಲಿ ಪ್ರವೇಶ ಪಡೆಯುವ ಅವಕಾಶ ಇದ್ದರೂ ಅದನ್ನು ಬಿಟ್ಟು NDA ಸೇರಿದ್ದರು. ಪರದೇಶಕ್ಕೆ ಹೋಗಿ ಐಶಾರಾಮಿ ಜೀವನ ನಡೆಸುವ ಅವಕಾಶ ಇದ್ದರೂ ಭಾರತಮಾತೆಯ ಮಡಿಲಿಗೆ ಜೀವನವನ್ನು ಅರ್ಪಿಸಿದ್ದರು ಮೇಜರ್ ಸೂದ್. ಅವರ ತಂದೆ ನಿವೃತ್ತ ಬ್ರಿಗೇಡಿಯರ್.

ನನ್ನ ಮಗ ಅತ್ಯಂತ ಶ್ರೇಷ್ಠ ತ್ಯಾಗ ಮಾಡಿದ್ದಾನೆ. ಆತ ಭಾರತಮಾತೆಯ, ತನ್ನ ತಾಯಿಯ, ಸೇವೆ ಮಾಡುತ್ತಿರುವಾಗ ಹುತಾತ್ಮ ನಾಗಿದ್ದಾನೆ. ಅದಕ್ಕಾಗಿಯೇ ಆತ ತರಬೇತಿ ಪಡೆದಿರುವುದು. ಆದರೆ ನನಗೆ ಆತನ ಮಡದಿಯ ಬಗ್ಗೆ ಯೋಚಿಸುವಾಗ ಬಹಳ ದುಃಖವಾಗುತ್ತದೆ. ಮದವೆಯಾಗಿ ಇನ್ನೂ ಮೂರು-ನಾಲ್ಕು ತಿಂಗಳಾಗಿಲ್ಲ” ಎಂದು ಬ್ರಿಗೇಡಿಯರ್ ಚಂದ್ರಕಾಂತ್ ಸೂದ್ ಹೆಮ್ಮೆಯ ಜೊತೆಗೇ ನೊಂದುಕೊಳ್ಳುತ್ತಾರೆ.

ಇದನ್ನು ಓದುವಾಗ ದುಃಖದಿಂದ ಗಂಟಲು ಬಿಗಿಯಾಗುತ್ತಿದೆ. ಎಂತಹ ಒಳ್ಳೆಯ ಆಫಿಸರ್, ಯೋಧ, ಮಗ, ಗಂಡನನ್ನು ಈ ದೇಶ ಕಳೆದುಕೊಂಡಿದೆ.