Advertisements

ಚೀನಾ ಮೊಬೈಲ್ ಗಳಿಗೆ ಠಕ್ಕರ್ ಕೊಡಲು ಮತ್ತೆ ಬರುತ್ತಿದೆ ಸ್ವದೇಶಿ ಬ್ರಾಂಡ್ Micromax ಮೊಬೈಲ್ ಗಳು..

News

ಭಾರತದಲ್ಲಿ ಮೊದಲಿನಿಂದಲೂ ಚೀನಾ ನಿರ್ಮಿತ ವಸ್ತುಗಳನ್ನ ಬಹಿಷ್ಕಾರ ಮಾಡಬೇಕೆಂಬ ಕೂಗು ಕೇಳಿ ಬರುತಿತ್ತು. ಆದರೆ ಚೀನಾ ನಮ್ಮ ಭಾರತೀಯ 20 ಯೋಧರನ್ನ ಕುತಂತ್ರದಿಂದ ಬಲಿ ತೆಗೆದುಕೊಂಡ ಮೇಲೆ, ಚೀನಾ ನಿರ್ಮಿತ ವಸ್ತುಗಳ ಮೇಲೆ ನಿರ್ಭಂದ ಹೇರಬೇಕೆಂಬ ಕೂಗು ಹೆಚ್ಚಾಗಿದೆ.

Advertisements

ಇನ್ನು ಸ್ವದೇಶಿ ಉತ್ಪನ್ನಗಳನ್ನು ಬಳಸಿ ಎಂಬ ಕೂಗು ದೇಶದೆಲ್ಲೆಡೆ ಹೆಚ್ಚಾಗಿರುವ ನಡುವೆಯೇ ಕಣ್ಮರೆಯಾಗಿದ್ದ ಮೈಕ್ರೋಮ್ಯಾಕ್ಸ್ ಪೋನ್ ಮೇಡ್ ಫಾರ್ ಇಂಡಿಯನ್,ಮೇಡ್ ಬೈ ಇಂಡಿಯನ್ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಶೀಘ್ರವಾಗಿ ಹೊಸ ಪೋನ್ ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಇನ್ನು ಚೀನಾ ಪೋನ್ ಗಳು ದೇಶಕ್ಕೆ ಕಾಲಿಡುವುದಕ್ಕೆ ಮುಂಚೆ ದೇಶದಲ್ಲಿ ಅತೀ ಹೆಚ್ಚು ಮೊಬೈಲ್ ಗಳನ್ನ ತಯಾರಿಸಿ ಮಾರಾಟ ಮಾಡುತಿತ್ತು ಮೈಕ್ರೋಮ್ಯಾಕ್ಸ್.

ಬೇಸಿಕ್ ಪೋನ್ ಗಳು ಸೇರಿದಂತೆ ಸ್ಮಾರ್ಟ್ ಫೋನ್ ಗಳನ್ನು ಕೂಡ ಮಾರಾಟ ಮಾಡುತಿತ್ತು ಸ್ವದೇಶದಲ್ಲಿ ಕಂಪನಿ ಮೈಕ್ರೋಮ್ಯಾಕ್ಸ್. ಆದರೆ 2016ರ ಬಳಿಕ ಭಾರತದಲ್ಲಿ ಚೀನಾ ಮೊಬೈಲ್‌ ಗಳ ಪ್ರಾಬಲ್ಯ ಹೆಚ್ಚಾಗಿದ್ದು ಒನ್ ಪ್ಲಸ್‌, ರೆಡ್ಮಿ, ವೀವೋ, ಒಪ್ಪೋ ಮೊಬೈಲ್‌ ಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮ ಆಧಿಪತ್ಯ ಸಾದಿಸಿದ್ದವು. ಈ ಚೀನಾ ಮೊಬೈಲ್ ಗಳ ನಡುವೆ ಮೈಕ್ರೋಮ್ಯಾಕ್ಸ್ ಮಾರುಕಟ್ಟೆ ಸಂಪೂರ್ಣವಾಗಿ ಕುಸಿದುಬಿತ್ತು.

ಈಗ ಚೀನಾ ಉತ್ಪನ್ನಗಳ ಬಾಯ್ಕಟ್ ಆಂಧೋಲನಗಳು ದೇಶದಲ್ಲಿ ಶುತುವಾದ ಹಿನ್ನೆಲೆಯಲ್ಲಿ, ಮೈಕ್ರೋಮ್ಯಾಕ್ಸ್ ಮೊಬೈಲ್ ಗಳನ್ನು ಮರಳಿ ಮಾರುಕಟ್ಟೆಗೆ ತರುವಂತೆ ಸೋಶಿಯಲ್ ಮೀಡಿಯಾಗಳಲ್ಲಿ ಕಂಪನಿಯ ಮೇಲೆ ಒತ್ತಡ ಹೇಳಲಾಗುತ್ತಿದೆ. ಇದೇ ಕಾರಣದಿಂದಲೇ ಮತ್ತೆ ಮೈಕ್ರೋಮ್ಯಾಕ್ಸ್ ಸ್ಮಾರ್ಟ್ ಮೊಬೈಲ್ ಗಳನ್ನ ಬಜೆಟ್ ನ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ ಎಂದು ಕಂಪನಿ ಹೇಳಿದೆ.