Advertisements

ಬೈಕ್ ಮೇಲೆ ಹಾಲು ತೆಗೆದುಕೊಂಡು ಹೋಗ್ತಿದ್ದ 11 ವರ್ಷದ ಹುಡುಗ, ನಂತರ ನಡೆದಿದ್ದು ನೋಡಿ ದಂಗಾದ ಪೊಲೀಸರು..

Kannada Mahiti

ನಮಸ್ತೇ ಸ್ನೇಹಿತರೆ, 11 ವರ್ಷದ ಹುಡುಗ ಬೈಕ್ ನ ಮೇಲೆ ಹಾಲನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಟ್ರಾಫಿಕ್ ಪೋಲಿಸ್ ಆ ಹುಡುಗನನ್ನು ಹಿಡಿದುಬಿಟ್ಟರು.. ನಂತರ ಅಲ್ಲಿ ನಡೆದ ಘಟನೆ ಈಗ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ಅಸಲಿಗೆ 11 ವರ್ಷದ ಬಾಲಕ ಬೈಕ್ ತೆಗೆದುಕೊಂಡು ಹೋಗಲು ಕಾರಣವಾದರೂ ಏನು ಮತ್ತು ಅಲ್ಲಿ ನಡೆದಿದ್ದಾರು ಏನು ಎಂದು ನೋಡೊಣ.. ಇಡೀ ಭಾರತದಾದ್ಯಂತ ಹೊಸ ವಾಹನ ಕಾಯಿದೆ ಶುರುವಾಗಿದ ದಿನದಿಂದಲೂ ಸಹ ಟ್ರಾಫಿಕ್ ಪೋಲಿಸರ ಕಾಟ ಸಿಕ್ಕಾಪಟ್ಟೆ ಜ್ಯಾಸ್ತಿಯಾಗಿದೆ. ಮೊದ ಮೊದಲು ಏನೇ ತಪ್ಪು ಮಾಡಿದರು ಸಹ 50 ಅಥವಾ 100 ರೂಪಾಯಿ ಕೊಡುತ್ತಿದ್ದರೆ ಪೋಲಿಸರು ಸುಮ್ಮನೆ ಆಗುತ್ತಿದ್ದರು.

Advertisements

ಆದರೆ ಈಗ ಸಾವಿರಗಟ್ಟಲೆ ಫೈನ್ ಗಳನ್ನು ಹಾಕಿ ಕಳುಹಿಸುತ್ತಾರೆ.. ಇನ್ನೂ ಇಲ್ಲೊಬ್ಬ 11 ವರ್ಷದ ಹುಡುಗ ಬೈಕ್ ಹೋಡಿಸಿಕೊಂಡು ಹೋಗುತ್ತಿದ್ದಾಗ ಯಾಮಾರಿ ಪೋಲಿಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ನಂತರ ನಡೆದಿದ್ದು ಮಾತ್ರ ಪ್ರತಿಯೊಬ್ಬ ತಂದೆ, ತಾಯಿ ಮತ್ತು ಭಾರತೀಯರಿಗೂ ಪಾಠವಾಗಬೇಕು. ಈ ಸುದ್ದಿ ಕೇಳಿ ಬರುತ್ತಿರುವುದು ಉತ್ತರ ಪ್ರದೇಶದ ಲಕ್ನೊನಿಂದ.. ಈ ಹುಡುಗ ಬೈಕ್ ಮೇಲೆ ಹಾಲಿನ ಕ್ಯಾನ್ ಗಳನ್ನು ಹಿಟ್ಟು ಕೊಂಡು ಹೋಗುತ್ತಿರುತ್ತಾನೆ. ಆಗ ಪೋಲಿಸರು ಈ ಹುಡುಗನನ್ನು ಹಿಡಿದು ಡಿ.ಎಲ್, ಆರ್.ಸಿ ಬುಕ್, ಇನ್ಶುರೆನ್ಸ್‌ ಕೇಳಿದಾಗ ಈ ಹುಡುಗ ಏನು ಮಾತನಾಡದೇ ಸುಮ್ಮನಾಗುತ್ತಾನೆ.

ಆಗ ಪೋಲಿಸರು ಈ ಹುಡುಗನನ್ನು ಹಿಡಿದು ಬರೋಬ್ಬರಿ 27 ಸಾವಿರ ದಂಡವನ್ನು ಹಾಕುತ್ತಾರೆ. ಆಗ ಏನು ಮಾಡಬೇಕೆಂದು ತಿಳಿಯದ ಈ ಹುಡುಗ ತನ್ನ ತಂದೆಯನ್ನು ಆ ಜಾಗಕ್ಕೆ ಕರೆಯುತ್ತಾರೆ. ನಂತರ ಈ ಹುಡುಗನ ತಂದೆ ಬಂದು ಪೂರ್ತಿ ವಿಚಾರವನ್ನು ಪೋಲಿಸರಿಗೆ ಹೇಳುತ್ತಾರೆ.. ಈತನ ಹೆಸರು ರಮ್ ಸಿಂಗ್.. ಈತ ಲಕ್ನೊನಲ್ಲಿ ಹಾಲಿನ ವ್ಯಾಪಾರವನ್ನು ಮಾಡುತ್ತಿರುತ್ತಾನೆ. ಆದರೆ ಈತನಿಗೆ ಸಿಕ್ಕಾಪಟ್ಟೆ ಜ್ವರ ಬಂದಿರುವ ಕಾರಣ ಗಾಡಿಯನ್ನು ಹೋಡಿಸಲು ಆಗೋದಿಲ್ಲ.. ಆದುದರಿಂದ 7ನೇ ಕ್ಲಾಸ್ ಓದುತ್ತಿರುವ ತನ್ನ ಮಗ ನಾನೇ ಹಾಲನ್ನು ವ್ಯಾಪಾರ ಮಾಡುತ್ತೇನೆ ಕೊಡಿ ಎಂದು ಹೆಲ್ಮೆಟ್ ಕೂಡ ಧರಿಸಿ ಗಾಡಿಯನ್ನು ತೆಗೆದುಕೊಂಡು ಹೋದ.. ಆದರೆ ಅಷ್ಟರಲ್ಲಿ ಪೋಲಿಸರು ಹಿಡಿದು ದಂಡವನ್ನು ಹಾಕುತ್ತಾರೆ.

ರಾಮ್ ಸಿಂಗ್ ಈಗ ನಾನೊಬ್ಬ ಹಾಲಿನ ವ್ಯಾಪಾರಿ ಸರ್ ಇಷ್ಟೊಂದು ಹಣ ಕಟ್ಟಲು ಆಗುತ್ತಿಲ್ಲ ದಯವಿಟ್ಟು ಬಿಟ್ಟುಬಿಡಿ ಎಂದು ಕೇಳಿಕೊಳ್ಳುತ್ತಾರೆ.. ಆದರೆ ಪೋಲಿಸರು. ಇಲ್ಲಾ 11 ವರ್ಷದ ಹುಡುಗನಿಗೆ ಬೈಕ್ ಕೊಟ್ಟಿದ್ದು ಮೊದಲನೆಯ ತಪ್ಪು, ಜೊತೆಗೆ ಇಷ್ಟೊಂದು ತೂಕವಿರುವ ಹಾಲಿನ ಕ್ಯಾನ್ ಗಳನ್ನು ಇಟ್ಟುಕೊಂಡು ಅವನು ಗಾಡಿಯನ್ನು ಹೋಡಿಸುತ್ತಿರುವಾಗ ಯಾರಿಗಾದರೂ ಗುದ್ದಿ ಅಪಘಾ’ತ ವಾದರೆ ಯಾರದು ಹೊಣೆ ಹೇಳಿ.. ಮತ್ತು ಒಂದು ಬಾರಿ ಚಲನ್ ಹಾಕಿದರೆ ಅದನ್ನು ಹಿಂಪಡೆಯಲು ಸಾಧ್ಯವೇಯಿಲ್ಲ. ಈಗ ಈ ವಿಚಾರ ಲಕ್ನೊದ ಕೋರ್ಟ್ ಮೆಟ್ಟಿಲೇರಿದೆ.. ನಿಮಗೇನು ಅನಿಸುತ್ತದೆ ಸ್ನೇಹಿತರೆ ಈ ವಿಚಾರದಲ್ಲಿ ತನ್ನ ತಂದೆಯ ಸಹಾಯಕ್ಕಾಗಿ 11 ವರ್ಷದ ಹುಡುಗ ಗಾಡಿ ಓಡಿಸಿದ್ದು ತಪ್ಪಾ ಅಥವಾ ಆ ಹುಡುಗನಿಗೆ 27 ಸಾವಿರ ರುಪಾಯಿ ದಂಡ ಹಾಕಿದ ಟ್ರಾಪೀಕ್ ಪೊಲಿಸರದ್ದು ತಪ್ಪಾ ಅಂತ ನೀವೆ ತಿಳಿಸಿ.