Advertisements

ನೀವು ಮದುವೆ ಸಮಾರಂಭಗಳಿಗೆ ಹೋದಾಗ ವಾಟರ್ ಬಾಟಲಿಗಳಲ್ಲಿ ನೀರು ಕುಡಿದಿದ್ದರೆ ತಪ್ಪದೇ ಇದನ್ನ ನೋಡಿ..

Kannada Mahiti

ಸ್ನೇಹಿತರೇ, ಮೊದಲೆಲ್ಲಾ ಮದುವೆ ಇರಲಿ ಮತ್ತ್ಯಾವುದೇ ಸಮಾರಂಭಗಳಿರಲಿ ಊಟದ ಸಂದರ್ಭದಲ್ಲಿ ಗ್ಲಾಸಿನಲ್ಲಿ ನೀರು ಕೊಡುವುದು ವಾಡಿಕೆಯಾಗಿತ್ತು. ಆದರೆ ಈಗಂತೂ ನೀವು ಯಾವುದೇ ಸಮಾರಂಭಗಳಿಗೂ ಹೋದರೂ ಮಿನರಲ್ ವಾಟರ್ ಬಾಟಲ್ ಗಳದ್ದೇ ಕಾರುಬಾರು. ಅದು ಒಂದು ರೀತಿ ಪ್ರತಿಷ್ಟೆಯಂತೆ ಆಗಿಬಿಟ್ಟಿದೆ. ಇತ್ತೀಚೆಗಷ್ಟೇ ನಾನೊಂದು ಮದುವೆಗೆ ಹೋಗಿದ್ದೆ. ಅಲ್ಲಿಯೂ ಕೂಡ ಊಟದ ವೇಳೆ ಕೊಡಲು ಮಿನರಲ್ ವಾಟರ್ ಬಾಟಲಿಗಳ ವ್ಯವಸ್ಥೆ ಮಾಡಿದ್ದರು. ನಾನು ನೀರನ್ನ ಕುಡಿದ ಬಳಿಕ ಸ್ವಲ್ಪ ನೀರು ಬಾಟಲ್ ನಲ್ಲಿ ಉಳಿದಿದ್ದ ಕಾರಣ ಅದನ್ನ ನನ್ನ ಬ್ಯಾಗ್ ನಲ್ಲಿ ಹಾಕಿಕೊಂಡು ಬಂದೆ. ಇದರಿನ ನನಗೆ ಯಾವುದೇ ಮುಜುಗರ ಅವಮಾನವೇನೂ ಆಗಲಿಲ್ಲ.

Advertisements

ಇನ್ನು ಮಿನರಲ್ ವಾಟರ್ ಬಾಟಲ್ ಗಳನ್ನ ಹಂಚುವುದಕ್ಕು ಹಲವಾರು ಕಾರಣಗಳು ಇದರಬಹುದು. ನೀರನ್ನ ಹಂಚಲು ಒಬ್ಬ ಸಹಾಯಕನ ಅವಶ್ಯಕತೆ ಇಲ್ಲವೆಂದೋ ಅಥ್ವಾ ಫಿಲ್ಟರ್ ನೀರನ್ನೇ ಹಂಚುವ ಉದ್ದೇಶ ಆಗಿರಬಹುದು. ಇಲ್ಲವೋ ತಮ್ಮ ಸ್ಟೇಟಸ್ ನ್ನ ತೋರಿಸಿಕೊಳ್ಳಲು ಆಗಿರಬಹುದು. ಆದರೆ ಇದರಿಂದ ಅಪಾಯ ಆಗುತ್ತಿರುವುದು ಮಾತ್ರ ನಾವು ಜೀವಿಸುತ್ತಿರುವ ಪ್ರಕೃತಿಯ ಮೇಲೆ. ಇನ್ನು ಈ ಮಿನರಲ್ ವಾಟರ್ ಬಾಟಲ್ ಗಳ ವ್ಯವಸ್ಥೆ ಕೇವಲ ಮದುವೆ ಮುಂಜಿಗಳಲ್ಲಿ ಮಾತ್ರವಲ್ಲದೆ ದೊಡ್ಡ ದೊಡ್ಡ ರಾಷ್ಟೀಯ ಅಂತಾರಾಷ್ಟ್ರೀಯ ಕಛೇರಿ ಮೀಟಿಂಗ್ ಗಳಲ್ಲಿ ಈ ಬಾಟಲ್ ಗಳನ್ನ ಇಡುವ ಸಂಪ್ರದಾಯವಿದೆ.

ಆದರೆ ಇದೆ ವೇಳೆ ಸ್ವಲ್ಪವೇ ನೀರನ್ನ ಕುಡಿಯುವ ಜನರು ಶೇಕಡಾ 70 ಕ್ಕಿಂತ ಹೆಚ್ಚು ನೀರನ್ನ ವೇಸ್ಟ್ ಮಾಡುತ್ತಾರೆ. ಸ್ವಲ್ಪವೇ ಸಿಪ್ ಮಾಡಿ ಉಳಿದ ನೀರನ್ನ ಆ ಬಾಟಲ್ ಗಳಲ್ಲಿಯೇ ಬಿಟ್ಟು ಬಿಡುತ್ತಾರೆ. ಹಾಗಾಗಿ ಬಾಟಲ್ ಗಳಲ್ಲಿಯೇ ಏನಿಲ್ಲ ಅಂದರೂ ೫೦% ನೀರು ಉಳಿದು ಬಿಟ್ಟಿರುತ್ತದೆ. ಉದಾಹರಣೆಗೆ ಒಂದು ಸಾವಿರ ಜನ ಊಟ ಮಾಡಿದ್ದಾರೆ ಎಂದರೆ, ಅಲ್ಲಿ ಏನಿಲ್ಲ ಅಂದರೂ 250ಲೀ ಗಿಂತ ಹೆಚ್ಚು ಶುದ್ಧವಾದ ನೀರು ಪೋಲಾಗಿ ಹೋಗುತ್ತದೆ. ಇದರಿಂದ ಈ ನೀರಿನಲ್ಲಿರುವ ಮಿನರಲ್ ಗಳು, ತಯಾರಿಕೆಗೆ ಹಾಕಿದ ವೆಚ್ಚ, ಪಟ್ಟ ಪರಿಶ್ರಮ ಎಲ್ಲಾ ಹಾಳಾಗುತ್ತದೆ.

ಇನ್ನು ಈ ಪ್ಲಾಸ್ಟಿಕ್ ಬಾಟಲ್ ಗಳ ಮರುಬಳಕೆಯಾಗದ ಕಾರಣ ಪ್ರಕೃತಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತದೆ. ಇನ್ನು ಗೊತ್ತಿದ್ದೂ ಗೊತ್ತಿದ್ದೂ ನಾವು ನೀವೆಲ್ಲಾ ಇದೇ ತಪ್ಪನ್ನೇ ಮಾಡುತ್ತಿರುತ್ತೇವೆ. ಹಾಗಾಗಿ ನಿಮ್ಮಲ್ಲಿ ನಮ್ಮ ನಿವೇದನೆ ಏನೆಂದರೆ..ನಿಮಗೆ ಕುಡಿಯಲು ಕೊಟ್ಟ ಮಿನರಲ್ ವಾಟರ್ ಬಾಟಲ್ ಗಳಲ್ಲಿ ನೀರು ಉಳಿದ್ರೆ ಅದನ್ನ ದಯವಿಟ್ಟು ಪೋಲಾಗಲು ಬಿಡಬೇಡಿ. ಅದನ್ನ ನಿಮ್ಮ ಮನೆಗೆ ತೆಗೆದುಕೊಂಡು ಹೋಗಿ. ಕೊನೆಗೆ ನಿಮ್ಮ ಮನೆಯಲ್ಲಿರುವ ಗಿಡಕ್ಕಾದರೂ ಹಾಕಿ. ಇನ್ನು ನೀವು ಮದುವೆ ಮನೆಯಿಂದ ಉಳಿದ ನೀರಿನ ಬಾಟಲ್ ನ್ನ ತೆಗೆದುಕೊಂಡು ಬರುವಾಗ ಅಪಹಾಸ್ಯಕ್ಕೂ ಒಳಗಾಗಬಹುದು. ಇದರಿಂದ ನಿಮಗೆ ಮುಜುಗರ ಕೂಡ ಆಗಬಹುದು. ಆದರೆ ಅದನ್ನೆಲ್ಲಾ ಮರೆತು ನೀವು ಮಾಡುತ್ತಿರುವ ಕೆಲಸ ಸರಿಯಾಗಿದೆ ಎಂದು ಮುನ್ನುಗ್ಗಿರಿ.

ಸ್ನೇಹಿತರೆ, ನಮಗೆ ಪ್ರಕೃತಿ ಕೊಟ್ಟಿರುವ ನೀರು ಗಾಳಿಯನ್ನ ಕಾಪಾಡಿಕೊಂಡು ಹೋಗುವುದು ಅವಶ್ಯಕವಾಗಿದೆ. ಒಂದು ವೇಳೆ ನೀರು ಗಾಳಿ ಇಲ್ಲವಾದರೆ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕೈಲಾದಷ್ಟು ನಮ್ಮ ಜೀವಜಲ ನೀರನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ..ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..