Advertisements

ದೇವರ ಹುಂಡಿ ಹಣವನ್ನು ಕದ್ದ ಪೂಜಾರಿಯನ್ನು ಈ ಬಸವ ಏನು ಮಾಡಿದೆ ಗೊತ್ತಾ? ನಡೆಯಿತು ಬಸಪ್ಪನ ಪವಾಡ.

News

ಉಪ್ಪು ತಿಂದವನು ನೀರು ಕುಡಿಯಲೇ ಬೇಕೆನ್ನುವ ಮಾತು ಇದೆ ಅದೇ ರೀತಿ ತಪ್ಪು ಮಾಡಿದವನು ಒಂದಲ್ಲ ಒಂದು ದಿನ ಅವನ ಸತ್ಯ ಬಯಲಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಪೂಜಾರಿ ದೇವರ ಹುಂಡಿಯಲ್ಲಿ ಹಣವನ್ನು ಕಳವು  ಮಾಡಿದ್ದು ಏನು ತಿಳಿಯದಂತೆ ಇದ್ದು ಕೊನೆಗೆ ಬಸಪ್ಪನ ಪವಾಡದಿಂದ ನಿಜವಾದ ಬಣ್ಣ ಬಯಲಾಗಿದೆ.

Advertisements

ತಾಲ್ಲೂಕಿನ ಜುಟ್ಟನಹಳ್ಳಿಯ ಮಾರಮ್ಮನ ದೇಗುಲದಲ್ಲಿ ಈ ಹಿಂದೆ ಹಣದ ಹುಂಡಿ ಕಳವಾಗಿತ್ತು. ಕಳವಾದ ನಂತರ ಗ್ರಾಮಸ್ಥರು ದೇವರ ಮೊರೆ ಹೋದರು.  ಆದರೆ ಮೂರು ತಿಂಗಳಿನಿಂದ ಯಾವುದೇ ಕಳ್ಳನ ಸುಳಿವು ಸಿಗಲೇ ಇಲ್ಲ. ಇದೇ ವೇಳೆ ವೈಯಕ್ತಿಕ ವಿಷಯ ಪರಿಹಾರಕ್ಕಾಗಿ ಗ್ರಾಮದರೊಬ್ಬರು ಮಂಡ್ಯದ ಚಾಮುಂಡೇಶ್ವರಿನಗರ ಜಯನಗರದಿಂದ ಬಸಪ್ಪನನ್ನು ಕರೆಸಿದ್ದಾರೆ. ಈ ಸಂದರ್ಭದಲ್ಲಿ ಬಸವನಿಗೆ ಪೂಜೆಯನ್ನು ಸಲ್ಲಿಸಿ, ದೇವರ ಹುಂಡಿಯ ಹಣವನ್ನು ಕದ್ದವರನ್ನು ಪತ್ತೆ ಹಚ್ಚುವಂತೆ ಬಸಪ್ಪನಲ್ಲಿ ಕೇಳಿಕೊಳ್ಳುತ್ತಾರೆ ಮುಂದೆ ನಡೆದಿದ್ದೆಲ್ಲ ಬಸಪ್ಪನ ಪವಾಡ.

ಹೌದು ಬಸಪ್ಪನಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡನಂತರ, ನೇರವಾಗಿ ಬಸವ ಪೂಜಾರಿ ರಾಜು ಎಂಬುವವರ ಮನೆಯ ವಾಗಿಲ ಹತ್ತಿರ ಹೋಗಿ ನಿಂತ ತಕ್ಷಣ ಗ್ರಾಮಸ್ಥರು ತಬ್ಬಿಬ್ಬಾಗಿದ್ದಾರೆ. ಇನ್ನೂ ಪೂಜಾರಿ ಮನೆಯಿಂದ ಹೊರಬಂದ ನಂತರ ಬಸವ ಕೊಂಬಿನಿಂದ ತಿವಿಯುತ್ತಾ ಅಟ್ಟಾಡಿಸಿದೆ, ದಿಕ್ಕು ತೋಚದ ಪೂಜಾರಿ ಬಸವನ ಕಾಲನ್ನು ಹಿಡಿದು ತಾನು ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳಿ, ಹುಂಡಿಯ ಹಣವನ್ನು ನಾನು ಹಿಂದಿರುಗಿಸುತ್ತೇನೆ ಎಂದು ಗ್ರಾಮಸ್ಥರ ಮುಂದೆ ಕ್ಷಮೆ ಕೋರಿದ ನಂತರ ಬಸವನ ಕೋಪ ಕಡಿಮೆಯಾಗಿದೆ. ಬಸವಪ್ಪನ ಪವಾಡದಿಂದ ಪೂಜಾರಿಯ ನಿಜವಾದ ಬಣ್ಣ ಬಯಲಾಗಿದೆ. ಬಸಪ್ಪನ ಪವಾಡವನ್ನು ನೋಡಿ ಗ್ರಾಮಸ್ಥರೆಲ್ಲರೂ ಮಂತ್ರಮುಗ್ಧರಾಗಿದ್ದಾರೆ. ಈ ಘಟನೆ ಇತ್ತೀಚಿಗೆ ನಡೆದಿದೆ.