ನಮಸ್ತೆ ಸ್ನೇಹಿತರೆ, ಭೂಮಿ ಮತ್ತು ಇತಿಹಾಸ ನಮ್ಮನ್ನು ಕೆಲವೊಮ್ಮೆ ವಿಸ್ಮಯ ಮತ್ತು ಆಶ್ಚರ್ಯ ಚಕಿತರಾಗುವಂತೆ ಮಾಡುತ್ತದೆ.. ಮೊಲದ ಗೂಡುಗಳನ್ನು ಪೊಟೊ ತೆಗೆಯಲು ಹೋದ ಪೊಟೊಗ್ರಾಫರ್ ಹೊಳಗೆ ಇಣಕಿ ನೋಡಿ.. ಒಂದು ಕ್ಷಣ ಬೆರಗಾಗಿ ಹೋದ. ಕಾರಣ ಆ ಗೂಡಿನಲ್ಲಿ ಊಹೆಗೂ ಮೀರಿದ ಒಂದು ಸುರಂಗ ಕಾಣಿಸುತ್ತದೆ. ಅಷ್ಟಕ್ಕೂ ಆತನಿಗೆ ಹೊಳಗೆ ಕಾಣಿಸಿದ್ದು ಏನು ಗೊತ್ತಾ? ನೋಡೊಣ ಬನ್ನಿ.. ಇಂಗ್ಲೆಂಡ್ ದೇಶದ ಶಿಫ್ನಾಲ್ ಎನ್ನುವ ಪ್ರದೇಶದಲ್ಲಿ ಒಬ್ಬ ರೈತ ಸುಮಾರು ನೂರು ಎಕರೆಯಷ್ಟು ಜಮೀನನ್ನು ಖರೀದಿ ಮಾಡಿದ್ದ..

ಆತನ ಜಮೀನಿನಲ್ಲಿ ಮೊಲ ದೊಡ್ಡದಾದ ಹತ್ತಾರು ಗೂಡುಗಳನ್ನು ಮಾಡಿತ್ತು ಅದನ್ನು ನೋಡಿದ ರೈತ ಇದು ವಿಚಿತ್ರವಾಗಿದೆ ಎಂದು ಪೊಟೊಗಳನ್ನು ತೆಗೆದು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ. ಆ ಪೊಟೊಗಳನ್ನು ನೋಡಿದ ಪೊಟೊಗ್ರಾಫರ್ ಮೈಕಲ್ ಸ್ಕಾಟ್ ಎಂಬುವ ವ್ಯಕ್ತಿ ನೋಡುವುದಕ್ಕೆ ಚೆನ್ನಾಗಿದೆ ಒಳ್ಳೆಯ ಕುತೂಹಲ ರೀತಿಯ ಪೊಟೊಗಳು ಸಿಗುತ್ತವೆ ಎಂದು ಜಮೀನಿನಲ್ಲಿ ಪೊಟೊ ತೆಗೆಯಲು ಹೋಗುತ್ತಾನೆ.. ಈಗೆ ಪೊಟೊ ತೆಗೆಯುವಾಗ ಮೈಕಲ್ ಗೆ ಮೊಲದ ಗೂಡಿನಲ್ಲಿ ದೊಡ್ಡ ಸುರಂಗ ಕಾಣಿಸುತ್ತದೆ.

ಆಗ ಆಶ್ಚರ್ಯಗೊಂಡು ಮಣ್ಣನ್ನು ಪಕ್ಕಕ್ಕೆ ಸರಿಸಿ ಹೊಳಗೆ ಹೋದ ಮೈಕಲ್ ಒಂದು ಕ್ಷಣ ಪ್ರಪಂಚವನ್ನೇ ಮರೆತು ಹೋದ.. ಕಾರಣ ಮೈಕಲ್ ಗೆ ಹೊಳಗೊಂದು ಸುಂದರ ಮತ್ತು ಮನಮೋಹಕ ಪ್ರಪಂಚ ಕಾಣಿಸುತ್ತದೆ.. ಎಷ್ಟು ದೂರ ನಡೆದರು ಅಂತ್ಯ ಕಾಣಿಸಲೇ ಇಲ್ಲ. ಆಗ ಅಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿ ಪೊಟೊಗಳನ್ನು ತೆಗೆದ ಮೈಕಲ್ ಈ ಹೊಸ ಲೋಕವನ್ನು ಪ್ರಪಂಚಕ್ಕೆ ಪರಿಚಯಿಸುತ್ತಾರೆ.. ತಕ್ಷಣವೇ ಇತಿಹಾಸ ತಜ್ಞರು ಅಲ್ಲಿಗೆ ಹೋಗಿ ಪರಿಚಯಿಸಿದಾಗ ಇದು 700 ವರ್ಷಗಳ ಹಿಂದಿನ ಗುಹೆಗಳು ಎಂದು ತಿಳಿದು ಬರುತ್ತದೆ.. ಈ ಸುಂದರ ಲೋಕ ಟೆಂಪ್ಲರ್ ಅನ್ನುವ ಪರಿಪಾಲಕನ ಕಾಲದಲ್ಲಿ ನಿರ್ಮಿಸಲಾಗಿದ್ದು ಇಲ್ಲಿ ರಹಸ್ಯ ಸಭೆಗಳು ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಮುನ್ನೂರು ವರ್ಷಗಳ ಹಿಂದೆ ಈ ಗುಹೆಗಳಿಗಾಗಿ ಯು’ದ್ದಗಳೇ ನಡೆದಿತ್ತು ಎನ್ನುವ ವಿಷಯ ಕೂಡ ಇತಿಹಾಸ ತಜ್ಞರು ತಿಳಿಸಿದ್ದಾರೆ.. ಶ’ತ್ರುಗಳಿಗೆ ಹಾಗೂ ಯು’ದ್ಧದ ಸಂದರ್ಭದಲ್ಲಿ ಯಾರಿಗೂ ತಿಳಿಯದಂತೆ ಇರಲಿ ಎಂದು 700 ವರ್ಷಗಳ ಹಿಂದೆ ಈ ರೀತಿ ಭೂಮಿಯ ಹೊಳಗೆ ಮಂದಿರಗಳನ್ನು ನಿರ್ಮಿಸಿ ಸಭೆಗಳನ್ನು ಮಾಡಲಾಗುತಿತ್ತು ಎಂದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ.. ಏನೇ ಆದರೂ ಮೊಲದ ಗೂಡುಗಳ ಪೊಟೊ ತೆಗೆಯಲು ಹೋಗಿ ಒಂದು ವಿಸ್ಮಯವನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಆಶ್ಚರ್ಯವೇ ಸರಿ.. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.