Advertisements

ಕರ್ನಾಟಕದ 82 ವರ್ಷದ ಅಜ್ಜನನ್ನ ಕೊಂಡಾಡಿದ ಪ್ರಧಾನಿ ಮೋದಿ ! ಅಸಲಿಗೆ ಈ ವ್ಯಕ್ತಿ ಯಾರು ಗೊತ್ತಾ ?

Inspire

ಇಂದು ಮನ್ ಕೀ ಬಾತ್ ನಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು ಕರ್ನಾಟಕದ ವ್ಯಕ್ತಿಯೊಬ್ಬರ ಬಗ್ಗೆ ಕೊಂಡಾಡಿದ್ದಾರೆ. ಹೌದು, ಕರುನಾಡಿನ ೮೨ ವರ್ಷ ವಯಸ್ಸಿನ ಕಾಮೇಗೌಡರ ಸಾಧನೆ ಬಗ್ಗೆ ಮಾತನಾಡಿದ್ದು, ಮೋದಿಯವರು ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಸ್ವತಃ ನರೇಂದ್ರ ಮೋದಿಯವರೇ ಕೊಂಡಾಡಿರುವ ಈ ಕಾಮೇಗೌಡರು ಯಾರು ಗೊತ್ತಾ ? ಅಸಲಿಗೆ ಅವರು ಸಾಧನೆಯಾದರು ಏನು ಗೊತ್ತಾ ?

Advertisements

ಯುವಸಮಾಜಕ್ಕೆ ಮಾದರಿಯಾಗಿರುವ ಕ್ಕ್ ಕಾಮೇಗೌಡರು ಮಂಡ್ಯ ಜಿಲ್ಲೆಗೆ ಸೇರಿದ ಮಳವಳ್ಳಿ ತಾಲೂಕಿಗೆ ಸೇರಿದ ದಾಸರದೊಡ್ಡಿ ಹಳ್ಳಿಯವರು. ಅಕ್ಷರ ಜ್ನ್ಯಾನ ಇಲ್ಲದಿದ್ದರೂ, ಓದಿದವರಿಗೂ ಮಾದರಿಯಾಗಿದ್ದಾರೆ ಈ ೮೨ ವರ್ಷದ ಕಾಮೇಗೌಡರು. ಇನ್ನು ತಮ್ಮದೇ ಹಣದಿಂದ ಬಾಯಾರಿದ ಪ್ರಾಣಿಗಳು ಮತ್ತು ಪಕ್ಷಿಗಳಿಗಾಗಿ ೧೪ಕ್ಕೂ ಹೆಚ್ಚು ಕೊಳಗಳನ್ನ ನಿರ್ಮಾಣ ಮಾಡಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕಾಡಿನಲ್ಲಿ ಕುರಿ ಕಾಯುವ ಕೆಲಸ ಮಾಡುತ್ತಿರುವ ೮೨ ವರ್ಷದ ಕಾಮೇಗೌಡರು ಒಂದಷ್ಟು ಕುರಿಗಳು, ಚಿಕ್ಕ ಭೂಮಿ ಹಾಗೂ ಚಿಕ್ಕ ಮನೆ ಇವರ ಆಸ್ತಿಯಾಗಿದೆ. ಇನ್ನು ಪರಿಸರಕ್ಕಾಗಿ ತಮ್ಮ ಸ್ವಂತ ಹಣವನ್ನ ಖರ್ಚು ಮಾಡಿ ಜೀವನ ಪರ್ಯಂತ ದುಡಿಯುತ್ತಿರುವ ಕಾಮೇಗೌಡರು ತಾವು ಹುಟ್ಟಿದಾಗಿನಿಂದಲೂ ಪರಿಸರದ ಜೊತೆ ತಮ್ಮ ತಮ್ಮ ಜೀವನ ನಡೆಸುತ್ತಿದ್ದಾರೆ. ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಇದುವರೆಗೂ ೧೪ಕ್ಕಿಂತ ಹೆಚ್ಚು ಕೊಳಗಳನ್ನ ನಿರ್ಮಿಸಿದ್ದಾರೆ ಕಲಿಯುಗದ ಈ ಭಗೀರಥ.

ಇಷ್ಟೇ ಅಲ್ಲದೆ ಪರಿಸರದ ಮೇಲೆ ಅಪಾರ ಕಾಳಜಿ ಹೊಂದಿರುವ ಕಾಮೇಗೌಡರು ತಾವು ಕುರಿ ಕಾಯುತ್ತಿದ್ದ ಕುಂದೂರು ಬೆಟ್ಟ ಸದಾ ಹಸಿರಾಗಿ ಕಂಗೊಳಿಸಬೇಕೆಂದು ಬೆಟ್ಟದ ಸುತ್ತ ಮುತ್ತ ಎರಡು ಸಾವಿರಕ್ಕೂ ಹೆಚ್ಚು ಗಿಡಗಳನ್ನ ನೆಟ್ಟಿದ್ದು, ಇಂದು ಅವು ಹೆಮ್ಮರವಾಗಿ ಬೆಳೆದಿವೆ. ಜೊತೆಗೆ ಮುಂದಿನ ಜನಾಂಗಕ್ಕೆ ಪರಿಸರ ಉಳಿಸಬೇಕೆಂದು ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಇವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರಕಿದ್ದು, ಇಂದು ಮೋದಿಯವರು ಮನ್ ಕೀ ಬಾತ್ ನಲ್ಲಿ ಕಾಮೇಗೌಡರ ಸಾಧನೆ ಬಗ್ಗೆ ಬಹಳವಾಗಿ ಕೊಂಡಾಡಿದ್ದಾರೆ.