Advertisements

ಲಾಕ್ ಡೌನ್ ಕುರಿತಂತೆ ರಾಹುಲ್ ಗಾಂಧಿ ಹೀಗೆ ಹೇಳಿದ್ದೇಕೆ ! ಆ ಟ್ವೀಟ್ ನಲ್ಲಿ ಏನಿದೆ ? ಇದಕ್ಕೆ ನೀವು ಏನು ಹೇಳುತ್ತೀರಾ?

News

ಕೊರೋನಾ ಸೋಂಕು ಹಬ್ಬುವ ಹಿನ್ನಲೆ ಕೇಂದ್ರ ಸರ್ಕಾರ ದೇಶಾದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿತ್ತು. ಸೋಂಕಿನ ನಿವಾರಣೆಗೆ ಅವಶ್ಯಕವಾದ ಎಲ್ಲಾ ರೀತಿಯ ಕ್ರಮಗಳನ್ನ ಕೈಗೊಂಡಿತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಇನ್ನು ಇದರಿಂದ ಭಾರತದಲ್ಲಿ ಅಷ್ಟಾಗಿ ಸಾವು ನೋವು ಗಳು ಸಂಭವಿಸಿರಲಿಲ್ಲ. ಕೊರೋನಾ ಸೋಂಕು ನಿಯಂತ್ರಣ ಮಾಡುವುದರಲ್ಲಿ ಭಾರತ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ವರ್ಲ್ಡ್ ಹೆಲ್ತ್ ಆರ್ಗನೈಸಷನ್ ಹೊಗಳಿತ್ತು.

Advertisements

ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರ ಕೊರೋನಾ ನಿರ್ವಹಣೆಯಲ್ಲಿ, ಲಾಕ್ ಡೌನ್ ಮಾಡಲಾಗಿದ್ದು, ಬೇರೆ ದೇಶಗಳಿಗೆ ಹೋಲಿಸಿದ್ರೆ ಭಾರತ ಲಾಕ್ ಡೌನ್ ನಲ್ಲಿ ವಿಫಲವಾಗಿದೆ ಎಂದು ಕೇಂದ್ರಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಇದರ ಕುರಿತಂತೆ ಸ್ಪೇನ್‌, ಜರ್ಮನಿ, ಇಟಲಿ, ಯುಕೆ ದೇಶಗಳಿಗೆ ಭಾರತದ ಲಾಕ್ ಡೌನ್ ನ್ನ ಹೋಲಿಸಿರುವ ರಾಹುಲ್ ಗಾಂಧಿ ಹೇಗೆ ಭಾರತದ ಲಾಕ್ ಡೌನ್ ವಿಫಲವಾಗಿದೆ ಎಂದು ಗ್ರಾಫ್ ಮೂಲಕ ತಿಳಿಸಿದ್ದು ಟ್ವೀಟ್ ಮಾಡಿದ್ದಾರೆ.

ಲಾಕ್ ಡೌನ್ ಬಳಿಕ ಈ ನಾಲ್ಕು ದೇಶಗಳಲ್ಲ ಕೊರೋನಾ ಸೋಂಕಿತರ ಸಂಖ್ಯೆ ಇಳಿದಿದ್ದರೆ, ಭಾರತದಲ್ಲಿ ಹೆಚ್ಚಾಗಿದೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ಇನ್ನು ಕೊರೋನಾ ಸೋಂಕು ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೆಲವು ವಾರಗಳಿಂದ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರವನ್ನ ಟೀಕಿಸುತ್ತಲೇ ಬಂದಿದ್ದಾರೆ. ಸ್ನೇಹಿತರೆ, ನಿಮ್ಮ ಪ್ರಕಾರ ಭಾರತದಲ್ಲಿ ಲಾಕ್ ಡೌನ್ವಿಫಲವಾಗಿದೆಯೇ?ಇಲ್ಲವೇ?ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಕಾಮೆಂಟ್ ಮಾಡಿ..