Advertisements

ರಜನೀಕಾಂತ್ ಅವರು ಇವರ ಪಾದ ಮುಟ್ಟಿ ನಮಸ್ಕಾರ ಮಾಡುತ್ತಿದ್ದರಂತೆ ! ವಿಷ್ಣು ಸರ್ ಅವರು ನಿಮ್ಮ ತರ ನಾನು ಅಭಿನಯ ಮಾಡೋಕ್ಕೆ ಆಗಲ್ಲ ಅಂತ ಹೇಳಿದ್ರಂತೆ ! ಈ ಧಿಮಾಕಿನ ಮಾತುಗಳನ್ನ ಹೇಳಿದ್ದ ನಟ ಯಾರು ಗೊತ್ತಾ ?

Cinema

ನಮಸ್ತೇ ಸ್ನೇಹಿತರೇ, ತಮ್ಮ ಸಾ’ವಿನ ಬಳೀಕವೂ ಸಹ ಈ ಭೂಮಿಯಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದ್ದರೆ ಅವರೇ ನಿಜವಾದ ಅಮರರರು. ಅಂದರೆ ಸಾ’ವಿಲ್ಲದವರು. ಇನ್ನು ಈ ಸಾಲಿಗೆ ಕನ್ನಡ ಚಿತ್ರರಂಗದ ಕಂಡ ಮಾಣಿಕ್ಯಗಳಾದ ಡಾ.ರಾಜಣ್ಣ, ಸಾಹಸಸಿಂಹ ವಿಷ್ಣು ವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ರೆಬೆಲ್ ಸ್ಟಾರ್ ಅಂಬರೀಶ್ ರವರು ಸೇರುತ್ತಾರೆ. ಸಿನಿಮಾ ರಂಗ ಇರುವವರೆಗೂ ಇವರ ಹೆಸರು ಅಜರಾಮರವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತದೆ ಎನ್ನುವುದು ಸತ್ಯವೇ ಸರಿ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಅಭಿನವ ಭಾರ್ಗವ ಡಾ.ವಿಷ್ಣು ವರ್ಷನ್ ಅವರು ಹೇಗೋ ಹಾಗೆಯೆ ತಮಿಳಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ರವರು ಸಹ. ಈ ಇಬ್ಬರು ಸ್ಟಾರ್ ನಟರು ಒಂದೇ ಸಮಕಾಲೀನರು ಕೂಡ. ಆದರೆ ವಿಷ್ಣು ವರ್ಧನ್ ರಂತಹ ಮೇರು ನಟ ನನಗೆ ನಿಮ್ಮ ತರಹ ಪಾತ್ರ ಮಾಡೋಕೆ ಆಗಲ್ಲ ಅಂತ ಹೇಳೋದು ಅಂದ್ರೆ ಸಾಮಾನ್ಯನಾ ?

Advertisements

ಇನ್ನು ಭಾರತದ ಸೂಪರ್ ಸ್ಟಾರ್ ನಟ ಅಂತಲೇ ಅನ್ನಿಸಿಕೊಂಡ ರಜನೀಕಾಂತ್ ಅವರು ತಮಗಿಂತ ಒಂದು ವರ್ಷ ಚಿಕ್ಕ ವಯಸ್ಸಿನ ನಟನ ಕಾಲಿಗೆ ನಮಸ್ಕಾರ ಮಾಡುತ್ತಾರೆ ಅಂದ್ರೆ ಇದನ್ನೆಲ್ಲಾ ನಂಬೋಕೆ ಆಗುತ್ತಾ ? ಆದ್ರೆ ಸ್ನೇಹಿತರೇ, ಈ ಮಾತುಗಳನ್ನ ಹೇಳಿರೋದು ರಾಜಣ್ಣ, NTR, MGR ನಂತಹ ಮೇರು ನಟರಲ್ಲ. ಅವರು ಈ ಮಾತುಗಳನ್ನ ಹೇಳಿದ್ದರೆ ಅದಕ್ಕೊಂದು ಅರ್ಥ ಇರುತಿತ್ತು. ಆದರೆ ಇಂತಹ ಧಿಮಾಕಿನ ಮಾತುಗಳನ್ನ ಹೇಳಿರುವುದು ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರು. ಹೌದು, ಹಳೆಯ ಸಂದರ್ಶನವೊಂದರಲ್ಲಿ ಈ ಮಾತುಗಳನ್ನ ನಟ ಮೋಹನ್ ಬಾಬು ಹೇಳಿದ್ದು ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು, ಮೋಹನ್ ಬಾಬು ಅವರ ಮಗಳೇ ನಡೆಸಿಕೊಡುತ್ತಿದ್ದ ಲಕ್ಷ್ಮಿ ಟಾಕ್ ಶೋ ಎಂಬ ಕಾರ್ಯಕ್ರಮದಲ್ಲಿ ತನ್ನ ಇಬ್ಬರು ಪುತ್ರರ ಜೊತೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋಹನ್ ಬಾಬು ಅವರೇ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ಇನ್ನು ಇದೆ ವೇಳೆ ತಮ್ಮ ರಾಯಲಸೀಮ ರಾಮಣ್ಣ ಚೌಧರಿ ಎಂಬ ಸಿನಿಮಾ ಬಗ್ಗೆ ಮಾತನಾಡಿದ್ದು ೧೪ ಸೆಪ್ಟೆಂಬರ್ ೨೦೦೦ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಸಖತ್ ಹಿಟ್ ಆಗಿತ್ತು. ಇನ್ನು ಈ ಚಿತ್ರಕ್ಕೆ ಚಿತ್ರಕತೆ, ಡೈಲಾಗ್ ಗಳನ್ನ ಬರೆದುಕೊಟ್ಟವರು ಸ್ವತಃ ರಜನೀಕಾಂತ್ ಅವರೇ. ಇನ್ನು ಇದೆ ಸಿನಿಮಾವನ್ನ ತಮಿಳಿನ ಅವತರಣಿಕೆಯಲ್ಲಿ ತಾನು ಮಾಡಬೇಕೆಂದು ನಿರ್ಧಾರ ಮಾಡಿದ್ದ ರಜನೀಕಾಂತ್ ರವರು ಚೆನ್ನೈಯಲ್ಲಿ ರಾಯಲಸೀಮ ರಾಮಣ್ಣ ಚೌಧರಿ ಪ್ರೀಮಿಯರ್ ಶೋ ಏರ್ಪಡಿಸಿದ್ದು ಆ ಶೋಗೆ ತಮಿಳಿನ ದೊಡ್ಡ ದೊಡ್ಡ ನಿರ್ದೇಶಕರುಗಳನ್ನ ಕರೆಸಿದ್ದರಂತೆ.

ಇನ್ನು ಮೋಹನ್ ಬಾಬು ಹೇಳಿದ ಹಾಗೆ ಪ್ರೀಮಿಯರ್ ಶೋ ಮುಗಿದ ಬಳಿಕ ಹೊರಬಂದ ರಜನೀಕಾಂತ್, ನಾನು ಈ ಚಿತ್ರವನ್ನ ತಮಿಳಿನಲ್ಲಿ ಮಾಡಬೇಕೆಂದುಕೊಂಡಿದ್ದೆ. ಆದರೆ ನೀವು ಮಾಡಿದ ರೀತಿ ಅಭಿನಯ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿದ ಎಂದು ಮೋಹನ್ ಬಾಬು ಆ ವಿಡಿಯೋದಲ್ಲಿ ಹೇಳಿದ್ದಾರೆ. ಇನ್ನು ಇದೆ ಕಾರ್ಯಕ್ರಮದಲ್ಲಿ ನಮ ವಿಷ್ಣು ಸರ್ ಬಗ್ಗೆ ಕೂಡ ಮಾತನಾಡಿರುವ ಮೋಹನ್ ಬಾಬು, ಕನ್ನಡ ನಟ ವಿಷ್ಣುವರ್ಧನ್ ಕೂಡ ತುಂಬಾ ಚೆನ್ನಾಗಿ ಅಭಿನಯ ಮಾಡುತ್ತಾರೆ. ಅವರು ಕೂಡ ಈ ಸಿನಿಮಾವನ್ನ ಕನ್ನಡದಲ್ಲಿ ಮಾಡಬೇಕೆಂದಿದ್ದರು. ಆದರೆ ನನಗೆ ಭ’ಯವಾಗುತ್ತಿದೆ, ರಾಯಲಸೀಮ ರಾಮಣ್ಣ ಚೌಧರಿ ಸಿನಿಮಾದಲ್ಲಿ ನೀವು ಅಭಿನಯ ಮಾಡಿದಂತೆ ನಾನು ಆ ಪಾತ್ರ ಮಾಡಲು ಸಾಧ್ಯವಿಲ್ಲ. ಆ ಪಾತ್ರ ನಿಮಗೆ ಸರಿ ಎಂದು ವಿಷ್ಣು ವರ್ಧನ್ ಅವರು ಹೇಳಿದ್ದರು ಎಂದು ಮೋಹನ್ ಬಾಬು ಅವರು ಆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಒಂದು ವೇಳೆ ವಿಷ್ಣು ವರ್ಧನ್ ಅವರು ಆ ರೀತಿ ಹೇಳಿದ್ದರೆ ಅದು ಅವರ ದೊಡ್ಡ ಗುಣ. ಅವರ ಸರಳ ಸಜ್ಜನಿಕೆ ಮೆಚ್ಚಬೇಕಾದ ವಿಷಯ. ನಾನು ಏನೇನು ಅಲ್ಲ..ನಾನಿನ್ನು ಕಲಿಯುವುದು ತುಂಬಾನೇ ಇದೆ ಎನ್ನುವವರೇ ಮಹಾತ್ಮರು ಹಾಗೂ ಅವರೇ ನಿಜವಾದ ಸಾಧಕರು.ಇನ್ನು ರಜನೀಕಾಂತ್ ಅವರ ವಿಷಯಕ್ಕೆ ಬಂದರೆ ಮೋಹನ್ ಬಾಬು ಹಾಗೂ ರಜನಿ ಅವರ ನಡುವೆ ಎಷ್ಟೇ ಆತ್ಮವಿಶ್ವಾಸ ಇದ್ದರೂ ಪಬ್ಲಿಕ್ ಕಾರ್ಯಕ್ರಮಗಳಲ್ಲಿ ಒಬ್ಬ ಸ್ಟಾರ್ ನಟ ಹಾಗೂ ತನಗಿಂತ ಹಿರಿಯರಾದವರ ಬಗ್ಗೆ ಏಕವಚನ ಸಂಭೋದಿಸಿ ಮಾತನಾಡುವುದು ಸಹ ಧಿಮಾಕಿನ ವಿಷಯವೇ. ಇದನ್ನೆಲ್ಲಾ ಅರ್ಥ ಮಾಡಿಕೊಳ್ಳದ ನಟ ಮೋಹನ್ ಬಾಬು ತಾನೇ ದೊಡ್ಡವನೆಂಬ ಧಿಮಾಕಿನಿಂದ ದೊಡ್ಡ ನಟರ ಸಣ್ಣ ವಿಷಯಗಳನ್ನ ಹೇಳಿಕೊಂಡು ತಾವೇ ದೊಡ್ಡವರೆನ್ನುವ ಅಹಂಕಾರ ತೋರುತ್ತಾರೆ ಎಂದರೆ ಇವರಿಗೆ ಏನೆನ್ನಬೇಕೋ ಗೊತ್ತಿಲ್ಲ.