ದಕ್ಷಿಣ ಆಫ್ರೀಕಾದಲ್ಲಿ ನಡೆದ ಈ ಅಪರೂಪದ ದೃಶ್ಯ ಬಹುಶಃ ಜಗತ್ತಿನ ಯಾವ ದೇಶದಲ್ಲಿ ಸಹ ಕಂಡುಬಂದಿಲ್ಲ. ಮನುಷ್ಯ ಮಾಡುವ ಕೆಲಸವನ್ನು ಈ ಒಂದು ಪ್ರಾಣಿ ಎಷ್ಟು ಸಲೀಸಾಗಿ ಮಾಡುತ್ತೆ ಗೊತ್ತಾ.. ವಾರೆವ್ಹಾ..! ಭಲೇ ಕೋತಿ ಭಲೇ ಕೋತಿ
ಈ ಫೋಟೋದಲ್ಲಿ ನೀವು ನೋಡ್ತಿದ್ದರಲ್ಲ ಈತನ ಹೆಸರು ಜೇಮ್ಸ್ ಈತ ರೈಲ್ವೆ ಇಲಾಖೆಯಲ್ಲಿ ಸಿಗ್ನಲ್ ಮ್ಯಾನ್ ಆಗಿ ಕೆಲಸ ಮಾಡ್ತಾಯಿದ್ದ, ಜೊತೆಗೆ ರೈಲ್ವೆ ನಿಲ್ದಾಣದಲ್ಲಿ ವಿಭಿನ್ನವಾಗಿ ಸ್ಟಂಟ್ಸ್ ಮಾಡಿ ಜನ ಮನಸಲ್ಲಿದ್ದ. ಹೀಗೆ ಒಂದು ದಿನ ಸ್ಟಂಟ್ ಮಾಡುವಾಗ ರೈಲ್ವೆ ಬೋಗಿ ಮೇಲಿಂದ ಕೆಳಗೆ ಬೀಳುತ್ತಾನೆ. ಸುದೈವವಶಾತ್ ಯಾವುದೇ ರೀತಿಯ ಪ್ರಾ’ಣ’ಹಾನಿ ಸಂಭವಿಸುವುದಿಲ್ಲ, ಆದ್ರೆ ಈತನ ಎರಡು ಕಾಲುಗಳು ಸಹ ಸ್ವಾ’ಧೀ’ನ ರಹಿತವಾಗುತ್ತದೆ.
[widget id=”custom_html-3″]

ಮುಂದೆ ಜೇಮ್ಸ್ ತನ್ನ ಕೆಲಸ ಮಾಡಲು ಪರದಾಡುತ್ತಾನೆ. ಕೃತಕ ಕಾಲುಗಳನ್ನು ಜೋಡಿಸಿಕೊಂಡ್ರು ಸಹ ಜೇಮ್ಸ್ಗೆ ಮೊದಲಿನಂತೆ ಸ್ಟಂಟ್ಸ್ ಮಾಡೋದಾಗಲೀ ಆರಾಮಾಗಿ ತನ್ನ ಕೆಲಸ ಮಾಡಿಕೊಳ್ಳೋದಕ್ಕಾಗಲೀ ಸಾಧ್ಯವಾಗುವುದಿಲ್ಲ. ಈ ಹಿನ್ನಲೆ ಆತ ತನ್ನ ಸಹಾಯಕ್ಕೆ ಯಾರಾದ್ರೂ ಸಿಗಬಹುದಾ ಅಂತ ಯೋಚಿಸ್ತಾಯಿರುತ್ತಾನೆ. ಹೀಗಿರುವಾಗ ಒಂದು ದಿನ ಒಂದು ಎತ್ತಿನಗಾಡಿಯನ್ನುಜೇಮ್ಸ್ ನೋಡ್ತಾನೆ. ವಿಶೇಷ ಅಂದ್ರೆ ಆ ಎತ್ತಿನ ಗಾಡಿಯಲ್ಲಿ ರೈತ ಕುಳಿತು ಕೊಂಡಿರ್ತಾನೆ, ಕೋತಿ ಎತ್ತಿನ ಗಾಡಿ ಓಡಿಸುತ್ತಿರುತ್ತೆ. ಇದನ್ನು ನೋಡಿ ಆಶ್ಚರ್ಯ ಚಕಿತನಾಗಿ, ಜೇಮ್ಸ್ ಆ ಕೋತಿಯನ್ನು ತನಗೆ ಕೊಡುವಂತೆ ರೈತನ ಬಳಿ ಕೇಳಿಕೊಳ್ತಾನೆ..
[widget id=”custom_html-3″]

ಒಂದಷ್ಟು ಹಣ ಕೊಟ್ಟು ರೈತನಿಂದ ಕೋತಿ ಖರೀದಿಸಿ ತನ್ನ ಕೆಲಸವನ್ನು ಕೋತಿಗೆ ಜೇಮ್ಸ್ ಹೇಳಿಕೊಡ್ತಾನೆ. ಮುಂದೆ ಈ ಕೋತಿ ಜೇಮ್ಸ್ ಹೇಳುವ ಮುನ್ನವೇ ಕೋತಿ ಎಲ್ಲಾ ಕೆಲಸವನ್ನುಅಚ್ಚುಕಟ್ಟಾಗಿ ಮಾಡುತ್ತಿತ್ತು. ಈ ವಿಶೇಷ ಕೋತಿಯನ್ನು ನೋಡಲು ಜನ ಸಾಗರೋಪಾದಿಯಲ್ಲಿ ಬರ್ತಾಯಿದ್ರು. ಹಲವರು ಕೋತಿ ಕೆಲಸ ಮೆಚ್ಚುಕೊಂಡ್ರೆ ಕೆಲವರು ರೈಲ್ವೆ ಇಲಾಖೆಗೆ ದೂರು ಕೊಟ್ಟರು. ಅಕಸ್ಮಾತ್ ಸ್ವಲ್ಪ ಯಾಮಾರಿದ್ರು ಸಹ ಸಾವಿರಾರು ಜನ್ರ ಜೀವ ಹೋಗುವ ಸಾಧ್ಯತೆಯಿದೆ ಅಂತ ರೈಲ್ವೆ ಇಲಾಖೆಯವರು ಜೇಮ್ಸ್ಗೆ ಎಚ್ಚರಿಕೆ ಕೊಟ್ರು. ಆಗ ಜೇಮ್ಸ್ ಇಲಾಖೆಯವರಿಗೆ ಒಂದು ಪತ್ರ ಬರೆಯುತ್ತಾನೆ. ತನ್ನ ಕೋತಿ ಕೆಲಸದಲ್ಲಿ ಯಾವುದೇ ರೀತಿ ತಪ್ಪು ಮಾಡುವುದಿಲ್ಲ..
[widget id=”custom_html-3″]

ತಾವೇ ಈ ಬಗ್ಗೆ ಮೇಲ್ವಿಚಾರಣೆ ಮಾಡಬಹುದು ಅಂತ ಪತ್ರದಲ್ಲಿ ಉಲ್ಲೇಖಿಸ್ತಾನೆ. ಈ ಹಿನ್ನಲೆ ಸ್ಥಳಕ್ಕೆ ಬಂದು ಕೋತಿಯನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಕೋತಿಯ ಚಾಕಚಕ್ಯತೆ ಅರ್ಥವಾಗುತ್ತೆ. ಕೋತಿಯ ಕಾರ್ಯಕ್ಷಮತೆಗೆ ಮೆಚ್ಚಿ ಓರ್ವ ಅಧಿಕಾರಿ ಕೋತಿಯನ್ನು ಸರ್ಕಾರಿ ನೌಕರನನ್ನಾಗಿ ನೇಮಿಸಬೇಕು ಅಂತ ಶಿಫಾರಸ್ಸು ಮಾಡ್ತಾನೆ. ಮುಂದೆ ಕೋತಿಯೇ ಸಿಗ್ನಲ್ ಮ್ಯಾನ್ ಕೆಲಸಕ್ಕೆ ನೇಮಕ ಸಹ ಆಗುತ್ತೆ. ಹೀಗೆ 9 ವರ್ಷಗಳ ಕಾಲ ಕೋತಿ ಸುದೀರ್ಘವಾಗಿ ಕೆಲಸ ಮಾಡುತ್ತೆ. ನಂತರ ಅನಾರೋಗ್ಯದ ನಿಮಿತ್ತ ಕೋತಿ ಉ’ಸಿ’ರು ಚೆ’ಲ್ಲು’ತ್ತೆ.