Advertisements

ಈ ಟಾಪ್ ವಿಲನ್ ಗಳ ಹೆಂಡತಿಯರು ಕೂಡ ಸ್ಟಾರ್ ನಟಿಯರು ಎಂದು ನಿಮಗೆ ಗೊತ್ತಾ? ನೋಡಿ..

Cinema

ನಮಸ್ತೆ ಸ್ನೇಹಿತರೆ, ಸಿನಿಮಾದಲ್ಲಿ ಹೀರೋಗಳಿಗೆ ಸರಿ ಸಮಾನವಾದ ಪಾತ್ರ ಯಾವುದು ಎಂದರೆ ಅದು ವಿಲನ್  ಪಾತ್ರ.. ಸಿನಿಮಾಗಳಲ್ಲಿ ವಿಲನ್ ಪಾತ್ರಗಳು ಎಷ್ಟು ಚೆನ್ನಾಗಿದ್ದರೆ ಹೀರೋ ಅಷ್ಟರ ಮಟ್ಟಿಗೆ ಹೈಲೇಟ್ ಆಗ್ತಾರೆ.. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಿರೋಗಳಿಗೆ ಸರಿ ಸಮಾನವಾಗಿ ನಟಿಸಿ ತಮ್ಮದೇ ಆದ ಚಾಪನ್ನು‌ ಮೂಡಿಸಿರುವ ಈ ಟಾಪ್ ವಿಲನ್ ಗಳ ಪತ್ನಿಗಳು ಕೂಡ ಸ್ಟಾರ್ ನಟಿಯರು ಎಂದು ನಿಮಗೆ ಗೊತ್ತಾ? ದಕ್ಷಿಣ ಭಾರತದ ಟಾಪ್ ವಿಲನ್ ಗಳಲ್ಲಿ ಒಬ್ಬರಾಗಿದ್ದ ನಟ ರಘುವರನ್.. ನಟ ರಘುವರನ್ ಅವರು ಒಂದು ಕಾಲದಲ್ಲಿ ಪೇಮಸ್ ವಿಲನ್ ಆಗಿ ಚಿತ್ರರಂಗದಲ್ಲಿ ಮಿಂಚಿದರು.

Advertisements

1982 ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ  ರಘುವರನ್ ಮಲಯಾಳಂ, ತಮಿಳು, ತೆಲುಗು ಚಿತ್ರರಂಗದಲ್ಲಿ ನಟಿಸಿ ತುಂಬಾ ಅವಾರ್ಡ್ ಗಳನ್ನು ಪಡೆದಿದ್ದಾರೆ.. ರಘುವರನ್ ಅವರು ಪ್ರೀತಿಸಿ ಮದುವೆಯಾಗಿದ್ದರು. ಅವರು ಯಾರು ಎಂದರೆ ನಟಿ ರೋಹಿಣಿ.. ಇವರು ಕೂಡ ತಮಿಳು, ತೆಲುಗು ಚಿತ್ರಗಳಲ್ಲಿ  ಸುಮಾರು 75ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.. ಈಗಲೂ ಕೂಡ ಅನೇಕ ಚಿತ್ರಗಳಲ್ಲಿ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ ರೋಹಿಣಿ ಅವರು. ಕನ್ನಡದ ನಟ ಅವಿನಾಶ್.. ಇವರು ಪೋಷಕ ನಟ, ವಿಲನ್ ಆಗಿ ಹಲಾವರು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕೂಡ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ನಟಿಸಿದ್ದಾರೆ. ಅವಿನಾಶ್ ಅವರು ಮಾಡಿದ ವಿಲನ್ ಪಾತ್ರಗಳೆಲ್ಲವೂ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು. ಇನ್ನೂ ನಟ ಅವಿನಾಶ್ ಅವರು ಕನ್ನಡದ ನಟಿ ಮಾಳ್ವಿಕಾ ಅವರನ್ನು ಮದುವೆಯಾಗಿದ್ದಾರೆ..

ಇವರು ಕೂಡ ಅನೇಕ ಕಿರುತೆರೆ ಧಾರವಾಹಿಗಳಲ್ಲಿ ನಟಿಸಿದ್ದಾರೆ. ನಟಿ ಮಾಳ್ವಿಕಾ ಅವರು ಕನ್ನಡ ಸೇರಿಂದತೆ ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ಹೆಸರು ಮಾಡಿದ್ದು ಅನೇಕ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.. ಹಾಗೆ ಕಿರುತೆರೆಗೂ ಎಂಟ್ರಿ ಕೊಟ್ಟಿದ್ದು ರಾಜಕೀಯದಲ್ಲೂ ಸಹ ಒಡನಾಟ ಹೊಂದಿದ್ದಾರೆ.. ಕೇಜಿಎಪ್ ಚಾಪ್ಟರ್ ಒಂದರಲ್ಲೂ ಕೂಡ ಮಾಳ್ವಿಕಾ ಅವರು ಅಭಿನಯಿಸಿದ್ದೂ ಇನ್ನಷ್ಟು ಹೆಸರುವಾಸಿಯಾಗಿದ್ದಾರೆ. ಆಶಿಶ್ ವಿದ್ಯಾರ್ಥಿ.. ಇವರೂ ಕೂಡ ಟಾಪ್ ವಿಲನ್. ಆಶಿಶ್ ಅವರು ಕನ್ನಡ, ತೆಲುಗು, ತಮಿಳು ಮಲಯಾಳಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ..

ಆಶಿಶ್ ವಿದ್ಯಾರ್ಥಿ ಅವರ ಪತ್ನಿ ಕೂಡ ನಟಿ. ಇವರ ಹೆಸರು ರಾಜೋಶಿ ವಿದ್ಯಾರ್ಥಿ.. ಇನ್ನೂ ಅತುಲ್ ಕುಲಕರ್ಣಿ. ಇವರು ಕೂಡ ಕನ್ನಡ, ತೆಲುಗು, ತಮಿಳು, ಮರಾಠಿ, ಹಿಂದಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.. ಅತುಲ್ ಕುಲಕರ್ಣಿ ಪತ್ನಿಯೂ ಕೂಡ ದೊಡ್ಡ ನಟಿ. ಕುಲಕರ್ಣಿಯವರ ಪತ್ನಿಯ ಹೆಸರು ಗೀತಾಂಜಲಿ ಕುಲಕರ್ಣಿ, ಇವರು ಕೂಡ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಮುರುಳಿ ಶರ್ಮಾ.. ಇವರು ಬಾಲಿವುಡ್, ಟಾಲಿವುಡ್ ಚಿತ್ರದಲ್ಲಿ ಟಾಪ್ ವಿಲನ್ ಆಗಿ ಹಾಗೂ ಪೋಷಕ ನಟರಾಗಿ ಮಿಂಚುತ್ತಿದ್ದಾರೆ. ಮುರುಳಿ ಶರ್ಮಾ ಅವರ ಪತ್ನಿ ಅಶ್ವಿನಿಯವರು ಕೂಡ ಪೇಮಸ್ ಆ್ಯಕ್ಟರ್, ಇವರು ಅನೇಕ ಹಿಂದಿ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ..