Advertisements

ತಾಯಿಗೆ ಕಾಯಿಲೆ ಬಂದಿದೆ ಅಂಥ ನಡು ರಸ್ತೆಯಲ್ಲಿ ಬಿಟ್ಟು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ ಮಗ.. ಆದರೆ ಕೊನೆಗೆ ಏನಾಯ್ತು ಗೊತ್ತಾ?

Kannada Mahiti

ಎಷ್ಟು ಓದಿದ್ರೆ ಏನು ಬಂತೂ ಕೊಂಚ ವಿವೇಕ, ಮಾನವೀಯತೆ ನೋವಿಗೆ ಸ್ಪಂಧಿಸುವ ಹೃದಯ ವೈಶಾಲ್ಯತೆ ಇಲ್ಲದಿದ್ದರೆ ಎಲ್ಲವೂ ನೀರಲ್ಲಿ ಹೋಮ ಮಾಡಿದ ಹಾಗೇ.. ಕಲಿತ ವಿದ್ಯೆಗೆ ಕವಡೆ ಕಾಸಷ್ಟು ಕಿಮ್ಮತ್ತು ಇರೋದಿಲ್ಲ. ಓದುಗರೇ, ತಾಯಿ ತಂದೆ ನಿತ್ಯ ನಾವೂ ಪೂಜಿಸಬೇಕಾದ ದೇವರು ಅಂತಹದ್ದರಲ್ಲಿ, ತನ್ನ ತಾಯಿಯನ್ನೇ ನಡುರಸ್ತೆಯಲ್ಲಿ ಅನಾಥವಾಗಿ ಬಿಟ್ಟು ಹೋಗುವ ಎಷ್ಟೋ ಜನ ನಮ್ಮ ಮಧ್ಯೆ ಇದ್ದಾರೆ ಅಂದ್ರೆ ಮನುಕುಲವೇ ನಾಚುವಂತಹ ವಿಷಯ.. ಈ ಫೋಟೋದಲ್ಲಿದ್ದಾನಲ್ಲ ಈ ಪುಣ್ಯಾತ್ಮನ ಹೆಸರು ಶ್ರೀಧರ ಆರ್ ಸೋಳಸಿ. ಬೆಳಗಾವಿಯ ಅಥಣಿಯ ನಿವಾಸಿ.. ಈತನಿಗೆ ತಂದೆ ಇಲ್ಲ ತನ್ನ ತಾಯಿಯೇ ಈತನನ್ನು ಸಾಕುತ್ತಿದ್ದಳು. ಹೊಟ್ಟೆ ಬಟ್ಟೆ ಕಟ್ಟಿ ಮಗನನ್ನು ಅತ್ಯಂತ ಪ್ರೀತಿಯಿಂದ ತಾಯಿ ಸಾಕಿದ್ಲು, ಆದ್ರೆ ಈತ ಮಾಡೊದ ಕೆಲಸ ನೋಡಿದ್ರೆ ನಿಜಕ್ಕೂ ಛೀ ಅನಿಸುತ್ತೆ.

Advertisements

ಈತ ಮಹರಾಷ್ಟ್ರದ ಪುಣೆಯಲ್ಲಿ ಕಾನೂನು ಪದವಿ ವಿಧ್ಯಾಭ್ಯಾಸ ಮಾಡುತ್ತಿದ್ದ.‌ ತಾಯಿ ಹಾಗೂ ಮಗ ಪುಣೆಯಲ್ಲಿಯೇ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಇವರು ಅಥಣಿಗೆ ಬಂದು ನೆಲೆಸಿದ್ದರು.. ಶ್ರೀಧರನ ತಾಯಿಗೆ ಇತ್ತೀಚೆಗೆ ಮಾನಸಿಕ ಆ’ರೋ’ಗ್ಯ ಹ’ದ’ಗೆಟ್ಟಿತ್ತು.. ಇದೇ ಕಾರಣಕ್ಕೆ ಈತ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ದಾನೆ. ಶ್ರೀಧರ ಹೆತ್ತ ತಾಯಿಯನ್ನೇ ಅಥಣಿಯ ಸಾರ್ವಜನಿಕ ಆಸ್ಪತ್ರೆಯ ಮುಂದೆ ಬಿಟ್ಟು ಹೋಗಲು ನಿರ್ಧಾರ ಮಾಡಿದ್ದ, ಇದಕ್ಕೆ ಅಂತಾನೇ ಹಾಸಿಗೆ ಹಾಗೂ ಕೆಲ ಸಾಮಾನುಗಳನ್ನು ಕಟ್ಟಿ ತನ್ನ ತಾಯಿಯನ್ನು ಕರೆತಂದು ಆಸ್ಪತ್ರೆ ಮುಂದೆ ಆ ಸಾಮಾಗ್ರಿಗಳು ಹಾಗೂ ತಾಯಿಯನ್ನು ನಡುರಸ್ತೆಯಲ್ಲಿಯೇ ಬಿಟ್ಟು ಹೋಗಲು ನೋಡಿದ್ದಾನೆ..

ಮಗ ಎಂಬ ಮಹಾಶಯನ ಈ ವ’ರ್ತ’ನೆ ಕಂಡ ಸ್ಥ’ಳೀ’ಯರಿಗೆ ಅ’ನು’ಮಾನ ಮೂಡಿದೆ. ಯಾಕೋ ಇವನ ವ’ರ್ತ’ನೆ ನಾರ್ಮಲ್ ಆಗಿಲ್ಲ ಅಂತ ಅರ್ಥ ಮಾಡಿಕೊಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸ್ತಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಶ್ರೀಧರ್​ಗೆ ಬುದ್ದಿವಾದ ಹೇಳ್ತಾರೆ, ಅಷ್ಟರಲ್ಲಾಗಲೇ ಅಲ್ಲೇ ಇದ್ದ ಸ್ಥಳೀಯರು, ಹೆತ್ತ ತಾಯಿಯನ್ನ ರೋಡಲ್ಲಿ ಬಿಟ್ಟು ಹೋಗುವ ಕೆಲಸ ಮಾಡ್ತ್ಯಾ ಅಂತ ಥ’ಳಿ’ಸಿದ್ದಾರೆ. ಸರಿಯಾದ ಸಮಯಕ್ಕೆ ಬಂದ ಪೊಲೀಸರು ಶ್ರೀಧರ್ ಬಳಿನ ಒಂದು ಲೆಟರ್ ಬರೆಸಿಕೊಂಡು ಆಟೋದಲ್ಲಿ ತಾಯಿ ಮಗ ಇಬ್ಬರನ್ನು ಕಳಿಸಿಕೊಡ್ತಾರೆ. ಆದ್ರೆ ಹೆತ್ತ ತಾಯಿಯನ್ನೇ ಬೀದಿಯಲ್ಲಿ ಬಿಡೋ ಮನಸ್ಸು ಮಾಡಿದ ಈತನಿಗೆ ಏನನ್ನಬೇಕೋ..