Advertisements

ಮರಿಯನ್ನು ಬಾಯಿಯಲ್ಲಿ ಹಿಡಿದುಕೊಂಡು ಆಸ್ವತ್ರೆಯ ಎಮರ್ಜೆನ್ಸಿ ವಾರ್ಡ್ ಗೆ ಕರೆತಂದ ಬೆಕ್ಕು.. ಯಾಕೆ ಗೊತ್ತಾ? ವೈದ್ಯರೆಲ್ಲ ಶಾಕ್.

Kannada Mahiti

ನಮಸ್ತೆ ಸ್ನೇಹಿತರೆ, ಈ ಜಗತ್ತಿನಲ್ಲಿ ತಾಯಿ ಪ್ರೀತಿಗಿಂತ ಮಿಗಿಲಾದ ಪ್ರೀತಿ ಇನ್ನೆಲ್ಲೂ ಇಲ್ಲ. ಆ ಜನ್ಮ ಕೊಟ್ಟ ತಾಯಿಯ ಮಮತೆಗೆ ಬೆಲೆ ಕಟ್ಟಲಾಗದು.. ಇದು ಮಾತಿ‌ನಲ್ಲಿ ವರ್ಣಿಸಲಾಗದಂತಹ ಬಾಂಧವ್ಯ. ತಾಯಿಯ ಪ್ರೀತಿಯ ಈ ಕಥೆ ನಿಜಕ್ಕೂ ಕಣ್ಣಿನಲ್ಲಿ ನೀರು ತರಿಸುತ್ತದೆ. ಮಮತೆಯ ಮಡಿಲೇ ಅಮ್ಮ. ಬೆಲೆಕಟ್ಟಲಾಗದಂತಹ ಪದವಿದು.. ನಾವು ದೇವರನ್ನು ನೋಡಿಲ್ಲ ಆದರೆ ದೇವತೆಯ ರೂಪದಲ್ಲಿ ತಾಯಿ ಇದ್ದಾಳೆ. ಜೀವಕ್ಕೆ ಉಸಿರುಕೊಡುವಂತಹ ಶಕ್ತಿ ಇದು, ತಾಯಿಯೇ ಪ್ರತ್ಯಕ್ಷ ದೇವರು.. ತಾಯಿ ಎಂಬ ಪದದಲ್ಲಿ ಅದೆನೋ ಶಕ್ತಿ ಇದೆ, ಸೆಳೆತವಿದೆ.

Advertisements

ಎಲ್ಲಾ ನೋವನ್ನು ಮರೆಸುವ ಔಷದಿ ತಾಯಿಯಲ್ಲಿ ಅಡಗಿದೆ.. ಮತ್ತೆ ಜೀವವನ್ನು ತುಂಬಿದ ಸಂಜೀವಿನಿಯಂತಹ ಸತ್ವವಿದೆ. ತಾಯಿಯ ಬಗ್ಗೆ ಎಷ್ಟು ವರ್ಣಿಸಿದರು ಅದು ಮುಗಿಯುವುದಿಲ್ಲ. ಈ ಲೋಕದಲ್ಲಿ  ಮನುಷ್ಯನಿಗೆ ಮಾತ್ರವಲ್ಲದೇ ಸಖಲ ಜೀವಿಗಳಲ್ಲೂ ಸಹ ಮಾತೃತ್ವದ ಶಕ್ತಿ ಇದೆ. ಅದೂ ಅಲ್ಲದೇ ಯಾವ ಜೀವಿ ರಾಶಿಯಲ್ಲಿ ತಾಯಿಯ ಪ್ರೀತಿ ವ್ಯತ್ಯಾಸ ಕಾಣಲು ಆಗುವುದಿಲ್ಲ. ಇನ್ನೂ ಈ ತಾಯಿಯ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ತರಿಸುತ್ತದೆ.. ಬೆಕ್ಕು ಎಲ್ಲರ ಮುದ್ದಿನ ಸಾಕು ಪ್ರಾಣಿ.. ಮನೆಯ ಸದಸ್ಯರಲ್ಲಿ ಈ ಬೆಕ್ಕು ಕೂಡ ಒಂದು. ಮನೆಯವರ ಪ್ರೀತಿಯ ಆರೈಕೆಯಲ್ಲಿ ಆಟವಾಡುತ್ತಾ ಬೆಕ್ಕುಗಳು ಬೆಳೆಯುತ್ತವೆ.

ಈಗೆ ಪ್ರೀತಿಯಿಂದ ಬೆಳೆಯುವ ಬೆಕ್ಕುಗಳು ತಾಯಿಯಾದರೆ ಅವುಗಳ ಬದುಕು ಬದಲಾಗುತ್ತದೆ.. ಮರಿಗಳು ಪಕ್ಕದಲ್ಲಿ ಇದ್ದಾಗ ಆಟವಾಡುತ್ತಿದ್ದ ಬೆಕ್ಕಿನಲ್ಲಿ ಕೊಂಚ ಗಂಭೀರತೆ ಕಾಣಲಾರಂಭಿಸುತ್ತದೆ. ತನ್ನ ಕಂದನಿಗೆ ಯಾವುದೇ ರೀತಿ ಅ’ಪಾಯ ಆಗಬಾರದೆಂದು ಕಣ್ಣಲ್ಲಿ ಕಣ್ಣಿಟ್ಟು ಜಾಗರೂಕತೆಯಿಂದ ನೋಡಿಕೊಳ್ಳುತ್ತವೆ ಈ ಬೆಕ್ಕುಗಳು. ಈ ತಾಯಿ ತನ್ನ ಕರುಳ ಬಳ್ಳಿಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ..    ಆದರೆ ನಿಮಗೆ ಇಲ್ಲಿ ಇನ್ನೊಂದು ಆಶ್ಚರ್ಯಕರ ಸಂಗತಿ ಇದೆ. ಅದೇನೆಂದರೆ ಈ ಬೆಕ್ಕಿಗೆ ಆಸ್ವತ್ರೆಗೆ ಹೋದರೆ ಚಿಕಿತ್ಸೆ ಪಡೆಯಬಹುದು ಎಂಬ ಜ್ಞಾನ ಅದೇಗೆ ಬಂತು‌ ಗೊತ್ತಿಲ್ಲ.. ಆದರೆ ಈ ತಾಯಿಯ ಬುದ್ದಿವಂತಿಕೆ ಮಾತ್ರ ಎಲ್ಲರ ಗಮನ ಸೆಳೆಯುತ್ತದೆ.

ಹೃದಯಕ್ಕೆ ಹತ್ತಿರವಾಗುತ್ತದೆ. ಅದೇನೆಂದರೆ ಈ ತಾಯಿ ಬೆಕ್ಕು ಕಂದನಿಗೆ ಆರೋಗ್ಯ ಪೀ’ಡಿತವಾಗಿದೆ ಎಂದು ತಿಳಿದ ತಕ್ಷಣ ಮರಿಯನ್ನು ಬಾಯಿಯಲ್ಲಿ‌ ಕ’ಚ್ಚಿಕೊಂಡು ತಾನೆ ಸ್ವತಃ ಆಸ್ವತ್ರೆಗೆ ಓಡಿ ಬಂದಿದೆ. ಹೃದಯಕ್ಕೆ ಸ್ಪರ್ಶಿಸುವಂತಹ ಈ ಘಟನೆ ನಡೆದದ್ದು ಇಸ್ತಾಂಬುಲ್ ನ  ಆಸ್ವತ್ರೆಯೊಂದರಲ್ಲಿ.. ಈ ಬೆಕ್ಕು ತನ್ನ ಮರಿಯನ್ನು ಹಿಡಿದುಕೊಂಡು ಅಸ್ವತ್ರೆಯಲ್ಲಿ ಓಡಾಡುವ ಪೊಟೊಗಳು ಸಾಮಾಜಿಕ ಮಾಧ್ಯಮಗಲ್ಲಿ ತುಂಬಾ ಸುದ್ದಿಯಾಗಿದೆ. ಈ ಪೊಟೊಗಳನ್ನು ಕಂಡಾಗ ತಾಯಿ ಬೆಕ್ಕಿನ ಮೇಲೆ ಪ್ರೀತಿ ಉಕ್ಕಿ ಬರುತ್ತದೆ. ಇನ್ನೂ ಈ ತಾಯಿ ಬೆಕ್ಕು ತನ್ನ ಮರಿಯನ್ನು ಹಿಡಿದು ಎಮರ್ಜೆನ್ಸಿ ವಾರ್ಡ್ ಗೆ ಹೋಗಿತ್ತು. ಈ ಬೆಕ್ಕಿನ ಮನಸ್ಥಿತಿಯನ್ನು ತಿಳಿದುಕೊಳ್ಳಲು ವೈದ್ಯರಿಗೆ ತುಂಬಾ ಸಮಯ ಹಿಡಿಯಲಿಲ್ಲ..

ಮರಿಗೆ ಆರೋಗ್ಯ ಸರಿಯಿಲ್ಲ ಅದಕ್ಕಾಗಿ ತಾಯಿ ಹಿಡಿದುಕೊಂಡು ಬಂದಿದೆ ಎಂದು ವೈದ್ಯರಿಗೆ ತಿಳಿಯುತ್ತದೆ. ಅಷ್ಟೇ ಅಲ್ಲ ವೈದ್ಯರು ಕೂಡ ಮಾನವೀಯತೆಯನ್ನು ತೋರಿದ್ದರು.. ಇದು ಸಹಜ ಕೂಡ. ಯಾಕೆಂದರೆ ಬೆಕ್ಕು ತನ್ನ ಮಗುವನ್ನು ಹಿಡಿದುಕೊಂಡು ಆಕಡೆಯಿಂದ ಈ ಕಡೆಗೆ ಹೊಡಾಡುವ ದೃಶ್ಯವೇ ಮನುಕುಲಕುವಂತಿತ್ತು. ಬಂಡೆಯಂತಹ ಹೃದಯವನ್ನೆ ಕರಗಿಸುವಂತಹ ಈ ದೃಶ್ಯ ಕಂಡು ವೈದ್ಯರು  ಆಶ್ಚರ್ಯ ಚಕಿತರಾಗಿದ್ದರು.. ಒಟ್ಟಿನಲ್ಲಿ ಇದು ಬೆಕ್ಕಿನ ಜ್ಞಾನವೋ ಅಥವೊ ಕಾಕತಾಳೀಯ ಸನ್ನಿವೇಶವೊ ಯಾರಿಗು ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಈ ತಾಯಿಗೆ ತನ್ನ ಮಗುವಿನ ಮೇಲೆ‌ ಇರುವ ಕಾಳಜಿ, ಪ್ರೀತಿ ಎಲ್ಲರಿಗೂ ತಿಳಿಯುತ್ತದೆ.