ನಮಸ್ತೆ ಸ್ನೇಹಿತರೆ, ತಾಯಿಯ ಪ್ರೀತಿ ವಾತ್ಸಲ್ಯಕ್ಕೆ ಮಿಗಿಲಾದದ್ದು ಈ ಜಗತ್ತಿನಲ್ಲಿ ಬೇರೊಂದಿಲ್ಲ.. ಮಾತೃ ವಾತ್ಸಲ್ಯವನ್ನು ದೇವ ದೇವತೆಗಳು ಗೌರವಿಸಿ ಆರಾಧಿಸಿರುವ ಅದೆಷ್ಟೋ ಉದಾಹರಣೆಗಳಿವೆ.. ಈಗ ಒಂದು ಘಟನೆಯಲ್ಲಿ ಅದನ್ನ ತಾಯಿ ಪ್ರೀತಿ ಅಂತ ಹೇಳಬಹುದು.. ಆಕೆಯ ಪ್ರೀತಿಯಿಂದ ಆದ ಚಮತ್ಕಾರ ಕೂಡ ಹೌದು.. ಪವಾಡ ಸದೃಶ್ಯ ರೂಪದ ಘಟನೆ ಇಲ್ಲಿ ನಡೆದಿದೆ. ನಮ್ಮ ನೆರೆಯ ರಾಜ್ಯ ತೆಲಂಗಾಣದಲ್ಲಿ 18 ವಯಸ್ಸಿನ ಗಂಧಮ್ ಕಿರಣ್ ಯುವಕನು ಜಾಂ’ಡಿಸ್, ಡೆಂ’ಗ್ಯೂ ಹಾಗೂ ಹೆಪಟೈಟಿಸ್ ಬಿ ಪಾಸಿಟಿವ್ ಪತ್ತೆಯಾಗಿ ಆತನ ಪರಿಸ್ಥಿತಿ ತೀ’ವ್ರವಾಗಿ ಹದಗೆಟ್ಟು ಖಾಸಗಿ ಆಸ್ವತ್ರೆಗೆ ದಾಖಲು ಮಾಡಿದ್ರೂ..

ಆಸ್ವತ್ರೆಗೆ ದಾಖಲಿಸಿದರು ಕೂಡ ಆರೋಗ್ಯದ ಸ್ಥಿತಿ ಸುಧಾರಿಸಿರಲಿಲ್ಲ. ಇನ್ನೂ ವೈದ್ಯರು ಯುವಕನ ಮೆದುಳು ನಿಷ್ಕ್ರಿಯವಾಗಿದೆ ಬದುಕುಳಿಯುವುದು ಅಸಾಧ್ಯ ಎಂದು ಹೇಳುತ್ತಾರೆ.. ನಂತರ ಮಗನನ್ನ ಆಸ್ವತ್ರೆಯಿಂದ ಹಳ್ಳಿಗೆ ತಂದ ಆಕೆ ಕೃತಕ ಉಸಿರಾಟವನ್ನ ತೆಗೆಸಲು ಒಪ್ಪುವುದಿಲ್ಲ. ವೈದ್ಯರೆಲ್ಲ ಕೈಚೆಲ್ಲಿಯಾಗಿತ್ತು.. ಇನ್ನೂ ಯುವಕನನ್ನು ಆರಾಮಾಗಿ ಸಾ’ಯಲು ಅವಕಾಶ ಮಾಡಿಕೊಡುವಂತೆ ಹೇಳಿದ್ದಾರೆ.. ಆದರೆ ಒಪ್ಪದ ತಾಯಿ ಸಿದ್ದಮ್ಮ ತನ್ನ ಮಗನ ಪ್ರಾ’ಣ ಉಳಿಯುತ್ತದೆ ಎಂದು ವಿಶ್ವಾಸವನ್ನು ಇಟ್ಟುಕೊಂಡಿದ್ದರು.

ಆತನ ಪ್ರಾ’ಣ ಉಳಿಯಲೆಂದು ಕಣ್ಣೀರು ಸುರಿಸಿ ದೇವರಲ್ಲಿ ಬೇಡಿಕೊಂಡಳು ಮಹಾತಾಯಿ.. ಕೊನೆಗೂ ಆ ತಾಯಿಯ ಆಸೆ ನಿರಾಸೆಯಾಗಲಿಲ್ಲ ಹೌದು ಕಳೆದ ರಾತ್ರಿ ಆ ತಾಯಿಯ ಕಣ್ಣೀರಿಗೆ ಉತ್ತರ ಸಿಕ್ಕಿದೆ ರಾತ್ರಿ ಕಿರಣ್ ಕಣ್ಣಿನಿಂದ ಬಂದ ಕಣ್ಣೀರು ಆತನ ಕೆನ್ನೆಮೇಲೆ ಹರಿದು ಬರುವುದನ್ನು ನೋಡಿದ ಸಿದ್ದಮ್ಮ ಕೂಡಲೇ ಹತ್ತಿರವಿದ್ದ ರಾಜಬಾಬು ರೆಡ್ಡಿ ಎಂಬ ಮೆಡಿಕಲ್ ಪ್ರ್ಯಾಕ್ಟೀಸ್ ಮಾಡುವ ವ್ಯಕ್ತಿಗೆ ಆ ತಾಯಿ ಕರೆ ಮಾಡಿದಾಗ ಆತ ಬಂದು ನೋಡಿದ್ದಾನೆ..

ನಂತರ ಅವರು ವೈದ್ಯರಿಗೆ ಕರೆ ಮಾಡಿದಾಗ ವೈದ್ಯರು ನಾಲ್ಕು ಇಂ’ಜೆಕ್ಷನ್ ಕೊಡಲು ತಿಳಿಸಿದ್ದಾರೆ. ಅದರಂತೆ ಕೊಟ್ಟ ಚಿಕಿ’ತ್ಸೆ ನಂತರ ದಿನೇ ದಿನೆ ಕಿರಣ್ ಆರೋಗ್ಯ ಸುಧಾರಿಸುತ್ತ ಬಂದಿದೆ.. ಈ ಸುದ್ದಿಯಲ್ಲಿ ಬಹುಬೇಗ ಹರಡಿದ್ದು ತಾಯಿಯ ಪ್ರೀತಿಯ ಪ್ರಾರ್ಥನೆ. ಕಿರಣ್ ಅವರನ್ನು ಸಾ’ವಿನ ಅಂಚಿನಲ್ಲಿ ಕರೆತಂದಿದೆ ಎಂದು ಹೇಳುತ್ತಿದ್ದಾರೆ.. ಇನ್ನೂ ತಾಯಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನ ತಿಳಿಸಿ.