ನಮಸ್ತೇ ಸ್ನೇಹಿತರೇ, ಕೇಂದ್ರ ಸರ್ಕಾರ ಮೋಟಾರು ಮೋಟಾರು ನಿಯಮಗಳಲ್ಲಿ ಬದ್ಲಾವಣೆ ತಂದಿದ್ದು ಅಕ್ಟೊಬರ್ 1ರಿಂದ ವಾಹನ ನಿಯಮಗಳಲ್ಲಿ ಬದಲಾವಣೆ ಆಗಲಿದ್ದು ದೇಶದಾದ್ಯಂತ ಹೊಸ ಟ್ರಾಫಿಕ್ ನಿಯಮಗಳು ಜಾರಿಯಾಗಲಿವೆ. ದೇಶದಾದ್ಯಂತ ವಾಹನ ಚಾಲನ ಪರವಾನಗಿ (DL), ವಾಹನಗಳ RCಗಳನ್ನ ಏಕರೂಪದಲ್ಲಿ ವಿತರಿಸುವ ಹೊಸ ನಿಯಮ ಅಕ್ಟೊಬರ್ ಒಂದರಿಂದ ಜಾರಿಗೆ ಬಂದಿದೆ. ಇನ್ನು ಪೊಲೀಸರು ನಿಮ್ಮನ್ನ ತಪಾಸಣೆ ಮಾಡಿದಾಗ ಹಾರ್ಡ್ ಕಾಫಿ ದಾಖಲಾತಿಗಳನ್ನ ನೀಡುವ ಅವಶ್ಯಕತೆ ಇರುವುದಿಲ್ಲ. ಡಿಜಿಟಲ್ ಮಾದರಿಯ ದಾಖಲೆಗಳನ್ನೇ ನೀಡಬಹುದಾಗಿದೆ. ನಿಮ್ಮ ವಾಹನಗಳ ದಾಖಲೆಗಳನ್ನ ಆನ್ಲೈನ್ ಅಪ್ಲಿಕೇಶನ್ DGಲಾಕರ್ ನಲ್ಲಿ ಅಪ್ಲೋಡ್ ಮಾಡಿ ಅದನ್ನೇ ದಾಖಲೆಯಾಗಿ ಬಳಸಬಹುದಾಗಿದೆ.
ನಿಮ್ಮ ವಾಹನ ದಾಖಲೆಗಳಾದ ಡಿಎಲ್, ಆರ್ ಸಿ, ಇನ್ಸೂರೆನ್ಸ್ ಸೇರಿದಂತೆ ಎಲ್ಲಾ ದಾಖಾಲಾತಿಗಳನ್ನ ನಿಮ್ಮ ವಾಹನದಲ್ಲೇ ಇಟ್ಟುಕೊಳ್ಳವ ಅವಶ್ಯಕತೆ ಇಲ್ಲ. ಡಿಜಿ ಲಾಕರ್ ನಲ್ಲಿ ಅಪ್ಲೋಡ್ ಮಾಡಿ ಎಲೆಕ್ರಾನಿಕ್ ರೂಪದಲ್ಲಿ ತೋರಿಸಬಹುದಾಗಿದೆ. ಇನ್ನು ಹೊಸದಾಗಿ ಬರುವ ಡ್ರೈವಿಂಗ್ ಲೈಸೆನ್ಸ್ ಮತ್ತು ಆರ್.ಸಿ ಗಳು ಸ್ಮಾರ್ಟ್ ತಂತ್ರಜ್ನ್ಯಾನವನ್ನ ಹೊಂದಿದ್ದು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಬರಲಿದ್ದು ಅದರಲ್ಲಿ ಮೈಕ್ರೋಚಿಪ್ ಇರಲಿದ್ದು ಕ್ಯೂಆರ್ ಕೋಡ್ ತಂತ್ರಜ್ನ್ಯಾನವನ್ನ ಹೊಂದಿರಲಿದೆ.

ಇನ್ನು ನೀವೇನಾದರೂ ಅಡ್ಡಾ ದಿಡ್ಡಿ ಓಡಾಡಿ ವಾಹನ ನಿಯಮಗಳನ್ನ ಉಲ್ಲಂಘನೆ ಮಾಡಿದಲ್ಲಿ ಚಾಲಕರ ಮಾಹಿತಿಯನ್ನ ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆಯವರು ಸುಲಭವಾಗಿ ಪಡೆಯಬಹುದಾಗಿದೆ. ಸ್ನೇಹಿತರೇ, ನೀವು ಅವಶ್ಯವಾಗಿ ತಿಳಿಯಬೇಕಾದದ್ದು ಏನೆಂದರೆ, ವಾಹನ ಡ್ರೈವ್ ಮಾಡುವಾಗ ನೀವು ಮೊಬೈಲ್ ಫೋನ್ ಬಳಸಿದಲ್ಲಿ ಒಂದು ಸಾವಿರದಿಂದ 5 ಸಾವಿರದವರೆಗೆ ದಂಡ ಬೀಳಲಿದ್ದು ಈ ಹೊಸ ನಿಯಮ ಕೂಡ ಇದೇ ಅಕ್ಟೊಬರ್ ಒಂದರಿಂದ ಜಾರಿಯಾಗಿದೆ.