Advertisements

ಅದ್ಬುತ ನಟ ಎಂಪಿ ಶಂಕರ್ ಪತ್ನಿ ನಿಧನ.! ನಿಜಕ್ಕೂ ಏನಾಯ್ತು ಗೊತ್ತಾ?

Cinema

ಕನ್ನಡ ಚಿತ್ರರಂಗದ ಹಿರಿಯ ನಟ ನಿರ್ದೇಶಕ ನಿರ್ಮಾಪಕ ದಿವಗಂತ ಎಂಪಿ ಶಂಕರ್ ಅವರ ಪತ್ನಿ ಮಂಜುಳ ಶಂಕರ್ ಹೃದಯಘಾತದಿಂದ ಇನ್ನಿಲ್ಲವಾಗಿದ್ದಾರೆ.. ಕೆಲ ದಿನಗಳ ಹಿಂದೆ ಮಂಜುಳ ಶಂಕರ್ ಅವರಿಗೆ ಹೃದಯಘಾತವಾಗಿತ್ತು ಆ ವೇಳೆ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆಗಳನ್ನು ಮಾಡಿಸಲಾಗಿತ್ತು.. ಆದರೆ ಮೈಸೂರಿನ ನಿವಾಸದಲ್ಲಿ ಮಂಜುಳ ಅವರು ಈಗ ಕೊನೆ ಉಸಿರು ಎಳೆದಿದ್ದಾರೆ.

Advertisements

ಮಂಜುಳ ಅವರ ಅಂತ್ಯಕ್ರಿಯೆಯನ್ನ ವಿದ್ಯಾಪುರಂನಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಎಂಪಿ ಶಂಕರ್ ಕನ್ನಡ ಚಿತ್ರರಂಗದ ದಿಗ್ಜಜರಲ್ಲಿ ಒಬ್ಬರು.. ಇವರು ಅನೇಕ ಖಳನಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯ ಹರಿಶ್ಚಂದ್ರ, ಶನಿ ಪ್ರಭಾವ, ಬಂಗಾರದ ಮನುಷ್ಯ, ಗಂಧದ ಗುಡಿ, ಬೂತಯ್ಯನ ಮಗ ಅಯ್ಯ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಇವರಿಗಿತ್ತು..

ಸತ್ಯ ಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡಿನ ಮನೋಜ್ಞ ಅಭಿನಯದಿಂದ ಹೆಚ್ಚು ನೆನಪಾಗುವ ಎಂಪಿ ಶಂಕರ್ ಅವರು ಡಾ.ರಾಜ್ ಕುಮಾರ್, ನರಸಿಂಜರಾಜು, ದ್ವಾರಕೀಶ್, ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚಿತ್ರರಂಗದ ಅಗ್ರಜರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಎಂಪಿ ಶಂಕರ್ ಅವರು 2008 ರಲ್ಲಿ ನಿಧನರಾಗಿದ್ರು..