ಧೋನಿ ಎಂದ ತಕ್ಷಣ ಅಂತಾರಾಷ್ಟ್ರಿಯ ಕ್ರಿಕೆಟ್ ನಲ್ಲಿ ಹೆಸರು ಮಾಡಿದವರು ಭಾರತದ ಮಾಜಿ ಕ್ರಿಕೆಟ್ ನಾಯಕ ಎಂ ಸ್ ಧೋನಿ ಕೂಲ್ ಕ್ಯಾಪ್ಟನ್ ಎಂಬ ಹೆಸರು ಗಳಿಸಿದವರು.
ತಮ್ಮ ನಾಯಕತ್ವದಲ್ಲಿ 2011ರಲ್ಲಿ ವಿಶ್ವಕಪ್ ನೇತೃತ್ವ ವಹಿಸಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ ಹೋದ ವರ್ಷ ಜುಲೈ 25ರಂದು ಭಾರತೀಯ ಸೇನೆಗೆ ಸೇರಿ 15ದಿನಗಳ ಕಾಲ ಕಾಶ್ಮೀರ ಕಣಿವೆಯಲ್ಲಿ ಗುಸ್ತು ತಿರುಗುವ ಮತ್ತು ಕಾವಲು ಕಾಯುವ ಕೆಲಸದಲ್ಲಿ ತೊಡಗುವ ಮೂಲಕ ಅಭಿಮಾನಿಗಳ ಗಮನ ಸೆಳೆದ್ದಿದರು.
ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕುತ್ತಿರುವ ಧೋನಿ ದಿರ್ಘವದಿ ವಿಶ್ರಾಂತಿಯ ನಂತರ ಈಗ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ತಮ್ಮ ತವರೂರಾದ ರಾಂಚಿಯಲ್ಲಿ ಹತ್ತಾರು ಎಕರೆ ಭೂಮಿಯನ್ನು ಖರೀದಿಸಿರುವ ಧೋನಿ ದೊಡ್ಡಮಟ್ಟದ ಕೃಷಿ ನೆಡೆಸಲು ಯೋಜನೆ ರೂಪಿಸಿಕೊಂಡಿದ್ದರೆ. ಈ ಬಗ್ಗೆ ಧೋನಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ನಾನು ಕಲ್ಲಂಗಡಿ ಹಣ್ಣಿನ ಬೆಳೆಯ ಮೂಲಕ ಸಾವಯವ ಕೃಷಿ ಆರಂಬಿಸುತಿದ್ದೇನೆ ಮುಂದಿನ 20 ದಿನಗಳಲ್ಲಿ ಪರಂಗಿ ಗಿಡಗಳನ್ನು ನೆಡಲಿದ್ದು ಹೊಸ ಪ್ರಯತ್ನ ನನ್ನನ್ನು ಉತ್ಸಕಗೊಳಿಸಿದೆ ಎಂದು ಧೋನಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರೆ.
ಮಾರ್ಚ್ 1ರಿಂದ ಐಪಿಎಲ್ ಟೂರ್ನಿಗಾಗಿ ಅಭ್ಯಾಸ ನಡೆಸಲಿದ್ದು ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನೆಡೆಸಲಿದ್ದಾರೆ ಧೋನಿಯು ಐಪಿಎಲ್ ಪ್ರದರ್ಶನವನ್ನು ನೋಡಿ ಅವರನ್ನು ಟಿ-20 ವಿಶ್ವ ಕಪ್ ತಂಡಕ್ಕೆ ಆಯ್ಕೆ ಮಾಡುವುದರ ಬಗ್ಗೆ ಯೋಚಿಸುತ್ತೆವೆ ಎಂದು ಭಾರತದ ಕ್ರಿಕೆಟ್ ಕೋಚ್ ರವಿಶಾಸ್ತ್ರಿ ಕೆಲ ತಿಂಗಳುಗಳ ಹಿಂದೆ ಹೇಳಿದ್ದರು. ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಾಪಸಾಗುತ್ತಾರೆ ಎನ್ನುವ ಬಗ್ಗೆ ಸಾವಿರಾರು ಅಭಿಮಾನಿಗಳಲ್ಲಿ ಕುತೂಹಲವಿದೆ.