Advertisements

ಮುಖೇಶ್ ಅಂಬಾನಿ ಮನೆಯಲ್ಲಿ ಕೆಲಸ ಮಾಡುವ ಅಡುಗೆಯವರು ಪಡೆಯುವ ಸಂಬಳವೆಷ್ಟು ಗೊತ್ತಾ ? ಕೆಲಸದವರ ಮಕ್ಕಳು ಓದುವದೆಲ್ಲಿ ಗೊತ್ತಾ !

Kannada Mahiti

ನಮಸ್ತೇ ಸ್ನೇಹಿತರೇ, ಜಗತ್ತಿನ ಟಾಪ್ ಟೆನ್ ಸಿರಿವಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿಯವರ ಬಗೆಗಿನ ರೋಚಕರವಾದ ಸುದ್ದಿಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲಿಗರಾಗಿದ್ದಾರೆ. ಇವರು ವಾಸ ಮಾಡುವ ದುಬಾರಿ ಮನೆಗಳು, ವೈಭೋವಪೇತ ಜೀವನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಇನ್ನು ಮುಖೇಶ್ ಅಂಬಾನಿ ವಾಸ ಮಾಡುತ್ತಿರುವ ಮುಂಬೈನ ಆ್ಯಂಟಿಲಿಯಾ ಹೆಸರಿನ ಮನೆಯ ಬೆಳಿಗ್ಗೆ ಹೇಳುವ ಹಾಗೆ ಇಲ್ಲ. ಇನ್ನು ಈ ಮನೆಯಲ್ಲಿ ಸ್ವರ್ಗವನ್ನೇ ನಾಚಿಸುವಂತ ವಸ್ತುಗಳಿವೆ ಎಂದು ಹೇಳಲಾಗಿದೆ. ಇಷ್ಟೆಲ್ಲದರ ನಡುವೆ ಅಂಬಾನಿಯ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರ ಬಗ್ಗೆ ಸದಾ ಚರ್ಚೆಗಳು ಆಗುತ್ತಲೇ ಇರುತ್ತವೆ. ಭಾರತ ಸೇರಿದಂತೆ ಏಷ್ಯಾ ಖಂಡಕ್ಕೆ ಅತಿ ಶ್ರೀಮಂತರೆನಿಸಿರುವ ಮುಖೇಶ್ ಅಂಬಾನಿಯ ಮನೆಯಲ್ಲಿ ಕೆಲಸ ಮಾಡುವ ಅಡುಗೆಯವರಿಗೆ ಎಷ್ಟು ಸಂಬಳ ಕೊಡುತ್ತಾರೆ ಎನ್ನುವ ಬಗ್ಗೆ ತಿಳಿಯುವ ಕುತೂಹಲ ಇದ್ದೆ ಇರುತ್ತದೆ.

ಹೌದು, ಮುಖೇಶ್ ಅಂಬಾನಿ ವಾಸ ಮಾಡುವ ಮುಂಬೈನ ಆ್ಯಂಟಿಲಿಯಾ ಮನೆಯಲ್ಲಿ ೫೦೦ಕ್ಕೂ ಹೆಚ್ಚು ನೌಕರರು ಕೆಲಸ ಹೇಳಲಾಗಿದೆ. ಇನ್ನು ಮುಖೇಶ್ ಅಂಬಾನಿ ಕೂಡ ತಮ್ಮಂತಯೇ ತಮ್ಮ ಕೆಲಸಗಾರರನ್ನು ಕೂಡ ಅದೇ ರೀತಿ ನೋಡಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಮತ್ತೊಂದು ನೀವು ಅಚ್ಚರಿಗೊಳ್ಳುವ ವಿಷಯ ಏನೆಂದರೆ ಅದೇ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರೊಬ್ಬರ ಇಬ್ಬರು ಮಕ್ಕಳು ಅಮೆರಿಕಾದಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದಾರಂತೆ. ಇನ್ನು ಲೈವ್ ಮಿರರ್ ಎಂಬ ಮೀಡಿಯಾ ವೆಬ್ಸೈಟ್ ನ ಮಾಹಿತಿಯ ಪ್ರಕಾರ ಆ್ಯಂಟಿಲಿಯಾ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಲಕ್ಷಕ್ಕಿಂತ ಹೆಚ್ಚು ಸಂಬಳ ಕೊಡಲಾಗುತ್ತಿದೆ ಎಂದು ಹೇಳಲಾಗಿದೆ.

ಇನ್ನು ಮುಖೇಶ್ ಅಂಬಾನಿಯ ಇದೆ ಮನೆಯಲ್ಲಿ ಅಡುಗೆ ಕೆಲಸ ಮಾಡುವವರಿಗೂ ಕೂಡ ಎರಡು ಲಕ್ಷ ಸಂಬಳ ಇದೆ ಎಂದು ಹೇಳಲಾಗಿದೆ. ಇನ್ನು ಇಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಕೇವಲ ಸಂಬಳ ಮಾತ್ರವಲ್ಲದೆ ಇದ್ರ ಜೊತೆಗೆ ಇನ್ಸೂರೆನ್ಸ್ ಸೇರಿದಂತೆ ಹಲವಾರು ಸೌಲಭ್ಯಗಳನ್ನ ಕೊಡಲಾಗುತ್ತಿದೆಯಂತೆ. ಇನ್ನು ಮುಖೇಶ್ ಅಂಬಾನಿ ಮನೆಯಲ್ಲಿ ಜಗತ್ತಿನಾದ್ಯಂತ ವಿಶೇಷವಾದ ಅಡುಗೆಗಳನ್ನ ತಯಾರು ಮಾಡುವ ಕುಕ್ ಇದ್ದರೂ ಸಹ ಮುಖೇಶ್ ಅಂಬಾನಿಯವರು ಅತೀ ಸರಳವಾದ ಊಟವನ್ನೇ ಇಷ್ಟಪಡುತ್ತಾರಂತೆ. ಇನ್ನು ಮುಖೇಶ್ ಅವರು ಗುಜರಾತ್ ನ ಸಾಂಪ್ರದಾಯಿಕವಾದ ಅಡುಗೆ ಜೊತೆಗೆ ಇಡ್ಲಿ ಸಾಂಬಾರ್ ಕೂಡ ಇಷ್ಟಪಡುತ್ತಾರಂತೆ.