Advertisements

ಮೈಸೂರು ದಸರಾ ಅಂಬಾರಿ ಯನ್ನು ಹುತ್ತ ದಲ್ಲಿ ಬಚ್ಚಿಟ್ಟ ರೋಚಕ ರಹಸ್ಯ.. ಎಲ್ಲಿಂದ ಎಲ್ಲಿಗೆ ಬಂದಿದೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ವಿಶ್ವ ವಿಖ್ಯಾತ ಮೈಸೂರು ದಸರಾ ಒಂದು ಕಾಲದಲ್ಲಿ ಅರಸರ ಹಬ್ಬವಾಗಿತ್ತು.. ಇದೀಗ ದಸರಾ ನಾಡ ಹಬ್ಬವಾಗಿ ಬದಲಾಗಿದ್ದು. ಈ ದಸರಾ ಮಹೋತ್ಸವಕ್ಕೆ ಬರೋಬ್ಬರಿ 400 ವರ್ಷ ಇತಿಹಾಸವಿದೆ.. ಅದರಲ್ಲೂ ಇಡೀ ದಸರಾದ ಕೇಂದ್ರ ಬಿಂದು ಕೊನೆಯ ದಿನ ನಡೆಯುವ ಜಂಬೂ ಸವಾರಿ. ಅಂದರೆ ಅರ್ಜುನ ಆನೆ ಮೇಲೆ ಇರುವ 750 ಕೇಜಿ ತೂಕದ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಆ ದಿನ ಲಕ್ಷಾಂತರ ಜನರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಷ್ಟಕ್ಕೂ ಈ ದಸರಾ ಹಾಗೂ ಜಂಬೂ ಸವಾರಿ ಇತಿಹಾಸವೇನು.. ಹಾಗೂ ಈ ಚಿನ್ನದ ಅಂಬಾರಿಯ ರೋ’ಚಕ ರಹಸ್ಯ ಬಗ್ಗೆ ತಿಳಿಯೋಣ ಬನ್ನಿ.

Advertisements

ಸ್ನೇಹಿತರೆ ಮೊದಲನೆಯದಾಗಿ ಈ ದಸರಾ ಆರಂಭವಾಗಿದ್ದು ಭಾರತದ ಸ್ವರ್ಣಕಾಲ ಎಂದೇ ಖ್ಯಾತಿಯಾಗಿದ್ದ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ. ಅಂದ್ರೆ ತಮ್ಮ ರಾಜ್ಯದ ಶಕ್ತಿ, ಸಾಮರ್ಥ್ಯ , ವೀರತ್ವ, ದೀರತ್ವ, ಹಾಗೂ ಕಲೆ ಸಾಹಿತ್ಯಗಳನ್ನು ಇಡೀ ಜಗತ್ತಿಗೆ ತೋರ್ಪಡಿಸುವ ಸಲುವಾಗಿ ವಿಜಯನಗರದ ಅರಸರು ಈ ವಿಜಯದಶಮಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡ್ತಾಯಿದ್ದರು.. ಆದರೆ ವಿಜಯನಗರ ಸಾಮ್ರಾಜ್ಯದ ಪಥಗಳ ನಂತರ ನಮ್ಮ ಮೈಸೂರಿ‌ನ ಯದುವಂಶಿಯರು ಈ ವಿಜಯ ದಶಮಿಯ ದಸರಾವನ್ನು ಆಚರಿಸಿಕೊಂಡು ಬರುತ್ತಾರೆ. ಆದರೆ ಟಿಪ್ಪು ಮತ್ತು ಹೈದರಾಲಿಯ ಕಾಲಘಟ್ಟದಲ್ಲಿ ಸ್ವಲ್ಪ ಸಮಯದ ಕಾಲ ಈ ದಸರಾ ಆಚರಣೆ ನಿಂತು ಹೋಗುತ್ತದೆ.

ನಂತರ ಮತ್ತೆ ಅಧಿಕಾರಕ್ಕೆ ಬಂದ.. ಅಂದರೆ 1800 ರ ಕಾಲಘಟ್ಟದಲ್ಲಿ ಅಧಿಕಾರಕ್ಕೆ ಬಂದ ಯದುಕುಳತಿಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಮತ್ತೆ ಮೈಸೂರಿನಲ್ಲಿ ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಸ್ನೇಹಿತರೆ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಲ್ಲರ ಕಣ್ಮನ ಸೆಳೆಯುವುದು ಅಂದರೆ 750 ಕೇಜಿ ತೂಕದ ಸ್ವರ್ಣದ ಅಂಬಾರಿ. ಇದು ಕೇವಲ ಚಿನ್ನದ ಅಂಬಾರಿ ಮಾತ್ರವಲ್ಲ ನಮ್ಮ ಭಾರತದ ಸಂಸ್ಕ್ರತಿ ಹಾಗೂ ಪರಂಪರೆಯ ದ್ಯೋ’ತಕವಾಗಿದೆ.. ಅಂದರೆ ಅದು ಅತಿಶಯೋಕ್ತಿ ಆಗುವುದಿಲ್ಲ. ಯಾಕೆಂದರೆ ಈ ಅಂಬಾರಿಯ ಇತಿಹಾಸವೇ ಬಲು ರೋ’ಚಕ.. ಸ್ನೇಹಿತರೆ ಮೊದಲನೆಯದಾಗಿ ಈ ಅಂಬಾರಿಯ ನಂಟು ನಮ್ಮ ಕೊಪ್ಪಳದ ಕಮ್ಮಟ ದುರ್ಗಕ್ಕೂ ಇದೆ.

ಅಂದರೆ ಈ ರತ್ನ ಖಚಿತ ಅಂಬಾರಿ 14 ನೆಯ ಶತಮಾನದ ಪ್ರಾರಂಭದಲ್ಲಿ ಕಂಪಿಲರಾಯನ ಆಡಳಿತದ ಕಮ್ಮಟ ದುರ್ಗದಲ್ಲಿತ್ತು ಎಂಬುವ ವಿಚಾರ ಇತಿಹಾಸ ಪುಸ್ತಕದಲ್ಲಿ ದಾಖಲಾಗಿದೆ. ಇನ್ನೂ ಮೂಲತಃ ಮಹಾರಾಷ್ಟ್ರದ ದೇವಗಿಯಲ್ಲಿ ಈ ರತ್ನ ಖಚಿತ ಅಂಬಾರಿ ಆರಂಭದಲ್ಲಿ ಇರುತ್ತದೆ.. ಆ ಬಳಿಕ ದೇವಗಿರಿ ಸಂಸ್ಥಾನ ನಾಶವಾದ ವೇಳೆ. ಈ ಅಂಬಾರಿಯನ್ನು ದೇವಗಿರಿಯ ರಾಜ ಕಂಪಿಲದ ಮೊಮ್ಮಡಿ ಸಿಂಗ್ ನಾಯಕನಿಗೆ ಹಸ್ತಾಂತರ ಮಾಡಿ ಅದನ್ನು ಕಾಪಾಡಿಕೊಂಡು ಬರುವಂತೆ ಮನವಿ ಮಾಡುತ್ತಾನೆ. ಹಾಗಾಗಿ ಮೊಮ್ಮಡಿ ಸಿಂಗ್ ನಾಯಕ ವಿದೇಶಿಯರ ದಾ’ಳಿ’ಗೆ ಹೆದರಿ ಈ ಅಂಬಾರಿಯನ್ನು ಬಳ್ಳಾರಿ ಬಳಿಯ ರಾಮದುರ್ಗದ ಕೋಟೆಯಲ್ಲಿ ಮುಚ್ಚಿಟ್ಟಿರುತ್ತಾನೆ.

ನಂತರ ಮುಮ್ಮಡಿ ಸಿಂಗ್ ಪುತ್ರ ಕಂಪಿಲರಾಯ ತನ್ನ ರಾಜ್ಯವನ್ನು ವಿಸ್ತರಿಸಿದ ಸಮಯದಲ್ಲಿ ಕೊಪ್ಪಳದ ಕಮ್ಮಟ ದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು ದುರ್ಗಾದೇವಿಯನ್ನು ಸ್ಥಾಪಿಸಿ ಆ ಅಂಬಾರಿಗೆ ಪೂಜೆಯನ್ನು ಮಾಡ್ತಾ ಇರುತ್ತಾನೆ. ಆದರೆ 1327 ರಲ್ಲಿ ದೆಹಲಿಯ ಸುಲ್ತಾನರ ದಾ’ಳಿ’ಗೆ ಸಿಕ್ಕ ಈ ಕಂಪಿಲ ರಾಜ್ಯ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ. ಕಂಪಿಲರಾಯ ಈ ದಾ’ರು,ಣ ಯು’ದ್ದದ’ಲ್ಲಿ ಕೊನೆಗೊಳ್ಳುತ್ತಾನೆ. ಆ ಸಮಯದಲ್ಲಿ ಕಂಪಿಲದ ಬಂಡಾರ ರಕ್ಷಣೆ ಮಾಡುತ್ತಿದ್ದ ಅಕ್ಕ ಬುಕ್ಕರು ಆ ಅಂಬಾರಿಯನ್ನು ಹುತ್ತದಲ್ಲಿ ಮುಚ್ಚಿಟ್ಟು ಅಲ್ಲಿಂದ ಕಣ್ಮರೆಯಾಗುತ್ತಾರೆ. ಇನ್ನೂ 1336 ರ ವೇಳೆಗೆ ದೆಹಲಿ ಸುಲ್ತಾನರು ನಾ’ಶವಾ’ದ ಸಮಯದಲ್ಲಿ ಪುನಃ ರಾಜ್ಯವನ್ನು ಸ್ಥಾಪಿಸುವುದಕ್ಕೆ ಅಕ್ಕ ಬುಕ್ಕರು ಮುಂದಾಗುತ್ತಾರೆ. ಹಾಗಾಗಿ ಅಕ್ಕ ಆನೆಗುಂದಿಯಲ್ಲಿ ವಿಜಯನಗರದ ಸಾಮ್ರಾಜ್ಯ ಸ್ಥಾಪನೆ ಮಾಡುತ್ತಾನೆ.

ಇದು ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾಗುತ್ತದೆ. ನಂತರ ಬುಕ್ಕನು ಹಂಪಿಯಲ್ಲಿ ವಿಜಯನಗರದ ಸಾಮ್ರಾಜ್ಯದ ಎರಡನೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾನೆ. ಆ ಬಳಿಕ ಈ ಚಿನ್ನದ ಅಂಬಾರಿಯನ್ನು ಸ್ಥಳಾಂತರ ಮಾಡಲಾಗುತ್ತೆ.. ನಂತರ ಸಂಗಮ, ಸಾಳವ, ತೌಳವ ಹಾಗೂ ಅರವೀಡು ಎಂಬ ನಾಲ್ಕು ವಂಶಗಳು ವಿಜಯನಗರ ಸಾಮ್ರಾಜ್ಯವನ್ನು ಆಳ್ವಿಕೆ ಮಾಡಿ ಈ ಅಂಬಾರಿಯನ್ನು ಪೋಷಿಸಿಕೊಂಡು ಬರುತ್ತಾರೆ. ವಿಜಯನಗರ ಸಾಮ್ರಾಜ್ಯದ ಅಳಿವಿನ ನಂತರ ಈ ಅಂಬಾರಿಯನ್ನು ಸಂರಕ್ಷಣೆಗಾಗಿ ಅಂದರೆ ವಿದೇಶಿಗರ ದಾ’ಳಿಯಿಂ’ದ ರಕ್ಷಣೆ ಮಾಡಲು ಆಂದ್ರದ ಪೆನಂಗುಟ್ಟಕ್ಕೆ ಸ್ಥಳಾಂತರ ಮಾಡಲಾಗುತ್ತದೆ.

ಬಳಿಕ ಕೆಲವು ವರ್ಷದ ನಂತರ ಈ ಅಂಬಾರಿಯನ್ನು ಶ್ರೀರಂಗಪಟ್ಟಣಕ್ಕೆ ತರಲಾಗುತ್ತದೆ. ಇದಾದ ನಂತರ ಕೊನೆಯದಾಗಿ ಈ ಬಂಗಾರದ ಅಂಬಾರಿ ಮೈಸೂರಿಗೆ ಬರುತ್ತದೆ. ಈಗೆ ಹಲವು ರೋ’ಚಕ ಕಥೆಯ ಪಯಣದ ನಂತರ ಆ ಸುವರ್ಣ ಖಚಿತ ಅಂಬಾರಿ ಸ್ಥಿರವಾಗಿ ಈಗ ಮೈಸೂರಿನಲ್ಲಿ ನೆಲೆಯೂರಿದ್ದು ಇದೀಗ ಮೈಸೂರಿನ ಯದುವಂಶದವರು ಆ ಅಂಬಾರಿಯನ್ನು ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಇನ್ನೂ ಆರಂಭದಲ್ಲಿ ಈ ಚಿನ್ನದ ಅಂಬಾರಿಯಲ್ಲಿ ಮೈಸೂರಿನ ರಾಜರು ಕೂತು ಪ್ರಜೆಗಳಿಗೆ ದರ್ಶನ ಕೊಡುತ್ತಿದ್ದರು.

ಆದರೆ 1974 ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ ನಿ’ಧನದ ನಂತರ ಈ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಕೂರಿಸಿ ಜಂಬೂ ಸವಾರಿಯನ್ನು ನಡೆಸಲಾಗುತ್ತಿದೆ.. ಸ್ನೇಹಿತರೆ ಸಾಮಾನ್ಯವಾಗಿ ಮೈಸೂರಿನಲ್ಲಿ ಈ ಚಿನ್ನದ ಅಂಬಾರಿ ಇದೆ ಅಂತ ಎಲ್ಲರಿಗೂ ಗೊತ್ತಿತ್ತು ಆದರೆ ಈ ಮೈಸೂರಿಗೆ ಅಂಬಾರಿ ಎಲ್ಲಿಂದ ಬಂತು.. ಇದರ ಇತಿಹಾಸವೇನು ಅನ್ನುವ ಬಗ್ಗೆ ಸಾಕಷ್ಟು ಯಕ್ಷ ಪ್ರಶ್ನೆಗಳು ಎಲ್ಲರನ್ನೂ ಕಾಡ್ತಾಯಿತ್ತು ಹಾಗಾಗಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ.. ಈ ರೋಚಕ ಕಥೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ.