ನಮಸ್ತೆ ಸ್ನೇಹಿತರೆ, ಮೈಸೂರು ಮೂಲದವರಾದ ಪ್ರಸಾದ್ ಎನ್ನುವವರು.. ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದರು. ಅವರಿಗೆ ಮುದ್ದಾದ ಮಗ ಹುಟ್ಟಿದ ಆ ಮಗುವಿಗೆ ನಾಲ್ಕು ವರ್ಷ ವಯಸ್ಸಿದ್ದಾಗ ಕಾರಣಾಂತರಗಳಿಂದ ಒಂದು ವರ್ಷ ತಮ್ಮ ಸಂಬಂಧಿಕರ ಮನೆಯಲ್ಲಿ ಮಗುವನ್ನು ಇರಿಸಿದರು ಪ್ರಸಾದ್. ಆ ಮಗುವನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡವರು ಮನೆ ಕೆಲಸದವರಾದ ಶಾಂತಿ, ಆನಂದ್, ಮಮತಾ ಹಾಗೂ ಸಂತೋಷ್.. ಹನ್ನೊಂದು ತಿಂಗಳ ನಂತರ ಮೈಸೂರಿಗೆ ಬಂದ ಪ್ರಸಾದ್ ಅವರು ತನ್ನ ಮಗನನ್ನು ವಾಪಸ್ ಅಮೇರಿಕಾಗೆ ಕರೆದುಕೊಂಡು ಹೋದರು.

ಆದರೆ 11 ತಿಂಗಳು ಆತ್ಮೀಯತೆಯಿಂದ, ತುಂಬಾ ಪ್ರೀತಿಯಿಂದ ನೋಡಿಕೊಂಡ ಶಾಂತಿ ಹಾಗೂ ಇನ್ನೂ ಇತರನ್ನು ಆ ಮಗು ಯಾವತ್ತೂ ಮರೆಯಲಿಲ್ಲ.. ನಿಷ್ಕಲ್ಮಶ ಪ್ರೀತಿಯನ್ನು ಯಾವಾಗಲೂ ನೆನಪು ಮಾಡಿಕೊಳ್ಳುತ್ತಿದ್ದ. ಈಗೆ ಪ್ರಸಾದ್ ಅವರ ಮಗ ಕಾಲೇಜಿನಲ್ಲಿ ಓದುತ್ತಿದ್ದಾನೆ.. ಸುಮಾರು 10, 15 ವರ್ಷ ಕಳೆದರೂ ಈ ಹುಡುಗ ಮಾತ್ರ 11 ತಿಂಗಳು ತನ್ನನ್ನು ಪ್ರೀತಿಯಿಂದ ಸಾಕಿದ ಶಾಂತಿ ಮತ್ತು ಇತರರನ್ನು ಮರೆಯಲಿಲ್ಲ. ಅಷ್ಟೇ ಅಲ್ಲದೇ ಆ ನಾಲ್ವರಿಗೆ ಏನಾದರೂ ಸಹಾಯ ಮಾಡುವಂತೆ ತನ್ನ ತಂದೆ ಪ್ರಸಾದ್ ಅವರ ಬಳಿ ಕೇಳಿಕೊಂಡ..

ಇಷ್ಟು ವರ್ಷ ಆದರೂ ಮಗ ಅವರನ್ನು ಮರೆತಿಲ್ಲ ಅಂದರೆ. ಅವರು ನನ್ನ ಮಗನನ್ನು ಎಷ್ಟು ಪ್ರೀತಿಯಿಂದ ನೋಡಿಕೊಂಡಿರಬಹುದು ಎಂದು ಭಾವಿಸಿದ ಪ್ರಸಾದ್.. ಶಾಂತಿ ಹಾಗೂ ಇತರರಿಗೆ ಸುಮಾರು ಒಂದು ಕೋಟಿ ಆರ್ಥಿಕ ನೆರವು ನೀಡಲು ಮುಂದಾಗಿದ್ದು.. ಅವರನ್ನು ಹುಡುಕುತ್ತಿದ್ದಾನೆ. ಆದರೆ ಅವರು ಎಲ್ಲಿದ್ದಾರೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಶಾಂತಿ ಹಾಗೂ ಇತರರು ಈಗಲೂ ಕಷ್ಟದಲ್ಲೇ ಇರಬಹುದು.. ಮಗನ ಅಪೇಕ್ಷೆಯಂತೆ ಅವರ ಕುಟುಂಬಕ್ಕೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಬಯಸಿದ್ದೇನೆ ಎಂದು ಹೇಳಿರುವ ಪ್ರಸಾದ್ ಅವರು..

ಎಷ್ಟೇ ಹುಡುಕಿದರು ಸಿಗದಿದ್ದ ಕಾರಣ ಪತ್ರಿಕಾ ಪ್ರಕಟಣೆ ಕೊಟ್ಟು ಅವರನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.. ಆರ್ಥಿಕ ನೆರವು ಒಂದು ಕಡೆಯಾದರೆ 11 ತಿಂಗಳು ತಮ್ಮ ಮಡಿಲಲ್ಲಿ ಮಲಗಿ ನಲಿದಾಡಿದ ಪ್ರಸಾದ್ ಅವರ ಮಗನನ್ನು ನೋಡಿದರೆ ಶಾಂತಿ ಹಾಗೂ ಇನ್ನೂ ಇತರರು ಇನ್ನೆಷ್ಟು ಸಂತೋಷ ಪಡಬಹುದು ಅಲ್ಲವೇ. ಆ ಕ್ಷಣ ಮಾತ್ರ ತುಂಬಾ ಅದ್ಬುತವಾಗಿರುತ್ತದೆ.. ದುಡ್ಡೇ ಪ್ರಪಂಚ ಎಂದುಕೊಳ್ಳುವ ಈ ಸಮಯದಲ್ಲಿ. ದುಡ್ಡಿಗಿಂತ ಮಾನವೀಯತೆ ಮೌಲ್ಯಗಳು, ಪ್ರೀತಿ ದೊಡ್ಡದು ಎಂದು ಸಾರಲು ಹೊರಟಿರುವ ಪ್ರಸಾದ್ ಮತ್ತು ಮಗನ ಒಳ್ಳೆಯತನ ನಿಜಕ್ಕೂ ಗ್ರೇಟ್.