Advertisements

ನೂರು ವರ್ಷ ಇತಿಹಾಸವಿರೋ ಮೈಸೂರ್ ಸ್ಯಾಂಡಲ್ ಸೋಪ್ ಬಗ್ಗೆ ನಿಮಗೆ ಗೊತ್ತಾ? ಕರ್ನಾಟಕದ ಹೆಮ್ಮೆ ಈ ಸೋಪ್..

Kannada Mahiti

ನಮಸ್ಕಾರ ಬಂಧುಗಳೇ.. ನಾವೇಲ್ಲ ವಿದೇಶದ ಸೋಪ್, ಶ್ಯಾಂಪೂ, ಸೆಂಟ್ ಅದು ಇದು ಅಂತ ಬೇರೆ ದೇಶದ ಉತ್ಪನ್ನಗಳನ್ನು ಬಳಸ್ತೆವೆ.. ನಮ್ಮ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್ ಬಗ್ಗೆ ಸ್ವಲ್ಪವೂ ತಿಳಿದುಕೊಂಡಿಲ್ಲ..‌ ಅದೆಷ್ಟೋ ವಿದೇಶಿಯರು ಭಾರತ ಪ್ರವಾಸ ಕೈಗೊಂಡ್ರೆ, ಕರ್ನಾಟಕಕ್ಕೆ ಬರೋಕೆ ಬಹು‌ಮುಖ್ಯ ಕಾರಣ ಅಂದ್ರೆ ಅದು ಮೈಸೂರ್ ಸ್ಯಾಂಡಲ್ ಸೋಪ್ ಗಾಗಿ.. ಮೈಸೂರು ಸ್ಯಾಂಡಲ್ ಸೋಪ್ ತನ್ನದೆ ಪರಿಮಳದಿಂದ ವಿದೇಶದಲ್ಲಿ ಸಾಕಷ್ಟೂ ಹೆಸರು ಮಾಡಿದೆ.. ಮೈಸೂರ್ ಸ್ಯಾಂಡಲ್ ಸೋಪ್ 1916 ರಲ್ಲಿ ಹುಟ್ಟಲು ಕಾರಣ ಹೇಗೆ ಗೊತ್ತಾ? ರೋಡ್ ನಲ್ಲಿ ಇರುವ ಅರಣ್ಯ ಇಲಾಖೆಯಲ್ಲಿ ಸಂಗ್ರಹಿಸಿಟ್ಟ ಗಂಧದ ಕಟ್ಟಿಗೆ ಮೈಸೂರು ಮಹಾರಾಜ ನಾಲ್ವಡಿ‌ ಕೃಷ್ಣರಾಜ್ ಒಡೆಯರ್ ನೋಡ್ತಾರೆ..

Advertisements

ಅವರಿಗೆ ಆ ಮರಗಳ ತುಂಡುಗಳಿಂದ ಗಂಧದ ಎಣ್ಣೆ ಯಾಕೆ ತೇಗೆಯಬಾದ್ರು ಅನ್ನೊ ಆಲೋಚನೆ ಹುಟ್ಟಿತ್ತದೆ..‌ ಆಗ ದಿವಾನ್ ಆಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರ ಜೊತೆ ಚರ್ಚೆ ಮಾಡಿ ಯೋಜನೆ ಒಂದನ್ನು ರೂಪಿಸುತ್ತಾರೆ.. ಅದಾದ ಬಳಿಕ 1918 ವಿದೇಶದಿಂದ ಬಂದ ಅತಿಥಿಗಳು ಅಪರೂಪದ ಕಾಣಿಕೆ ಕೊಡ್ತಾರೆ..‌ ಅದು ಸಾಬುನಾಗಿತ್ತು.. ಭಾರತದ ಶ್ರೀಗಂಧ ಬಳಸಿ ಆ ಸಾಬೂನು ತಯಾರಿ ಮಾಡಲಾಗಿತ್ತು.. ಆಗ ಮಹರಾಜರು ನಾವು ಯಾಕೆ ಸಾಬೂನು ತಯಾರಿ ಮಾಡ್ಬಾದ್ರು ಅಂತ ಯೋಚನೆ ಮಾಡ್ತಾರೆ.. ‌ ಅದರ ಫಲವೇ ಮೈಸೂರ್ ಸ್ಯಾಂಡಲ್ ಸೋಪ್ ಹುಟ್ಟಿಕೊಂಡಿತು..

1917 ರಲ್ಲಿ ಮೈಸೂರಿನ ಇಗೀನ ಅಶೋಕಪುರಂ ನಲ್ಲಿ ಸುಮಾರು 32 ಎಕರೆ ಜಾಗದಲ್ಲಿ ಶ್ರೀಗಂಧದ ಎಣ್ಣೆ ಕಾರ್ಖಾನೆ ಪ್ರಾರಂಭಿಸುತ್ತಾರೆ.. ಹೀಗೆ ಬಹಳ ಮುತರ್ಜಿ ವಹಿಸಿ ತಯಾರಿಸಿದ ಸಾಬೂನು 1918 ರಲ್ಲಿ ಮಾರ್ಕೇಟ್ ಗೆ ಬಂತು.. ಮೈಸೂರ್ ಸ್ಯಾಂಡಲ್ ಸೋಪ್ ಸುಮಾರು 101 ವರ್ಷದ ಇತಿಹಾಸ ಹೊಂದಿದೆ.. ಇಲ್ಲಿ ಕೆವಲ ಸೋಪ್ ಮಾತ್ರವಲ್ಲ..‌ ಅಗರಬತ್ತಿ, ಸೋಪ್ ಪೌಡರ್, ಕ್ಲಿನಿಂಗ್ ಆಯಲ್ ಹೀಗೆ ಹಲವಾರು ಉತ್ಪನ್ನಗಳನ್ನು ತಯಾರಿಸಿದ ಅತೀ ಹೆಚ್ಚು ಮಾರಾಟವಾಗುವುದು.. ಮೈಸೂರ್ ಸ್ಯಾಂಡಲ್ ಸೋಪ್.. ಶೇ.40% ಲಾಭವನ್ನು ಸೋಪ್ ನಿಂದ ಬರುತ್ತೆ..‌ ಭಾರತದ ಬೇರೆ ರಾಜ್ಯದಲ್ಲಿ ಈ ಸೋಪ್‌ ಮಾರಾಟವಾಗುತ್ತೆ.. ಭಾರತಕ್ಕಿ‌ತ ಹೊರ ದೇಶದಲ್ಲಿ ಈ ಸೋಪ್ ಸೇಲ್ ಆಗುತ್ತೆ..‌ ಒಟ್ನಲ್ಲಿ ನೂರು ವರ್ಷಗಳಿಂದ ಈ ಸೋಪ್ ತನ್ನ ಬೇಡಿಕೆಯನ್ನು ಕಾಯಿದಿರಿಸಿದೆ..