Advertisements

ಹಾವುಗಳಲ್ಲಿ ನಿಜಕ್ಕೂ ನಾಗಮಣಿ ಇದಿಯಾ! ನಾಗಮಣಿ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯ..

Uncategorized

ನಮಸ್ತೇ ಸ್ನೇಹಿತರೆ, ಹಾವು ಅಂದ ತಕ್ಷಣ ನಾವೇಲ್ಲಾ ಬೆಚ್ಚಿ ಬೀಳ್ತೇವೆ.. ಎಲ್ಲಾ ವಿ’,ಷ ಅಲ್ಲದಿದ್ರೂ ಕೂಡ ಅದನ್ನ ನೋಡಿ ಭಯ ಪಡ್ತೇವೆ‌‌‌. ಇನ್ನೂ ಹಾವಿನ ಬಗ್ಗೆ ಕೆಲವು ಸುಳ್ಳು ವದಂತಿಗಳನ್ನು ನಂಬಿದ್ದೇವೆ.. ಹೌದು ನಾಗರ ಹಾವಿನ ತಲೆಯಲ್ಲಿ ನಾಗಮಣಿ ಇದೆ ಎಂಬುದನ್ನು ಈಗಲೂ ಸಹ ಕೆಲವರು ನಂಬಿದ್ದೀರಿ. ಇದು ಅನಾದಿಕಾಲದಿಂದಲೂ ನಂಬಿಕೊಂಡು ಬಂದಿದ್ದಾರೆ.. ಸ್ವಾತಿ ಮಳೆ ಹನಿ ಆಕಾಶದಿಂದ ನಾಗರ ಹಾವಿ‌ನ ತಲೆ ಅಥವಾ ಬಾಯಿಯ ಒಳಗೆ ಬಿ’ದ್ದಾ’ಗ ಆ ಹನಿಯೇ ನಾಗಮಣಿಯಾಗಿ ಬದಲಾಗುತ್ತೆ ಎಂಬುದನ್ನು ನಮ್ಮ ಪೂರ್ವಜರು ನಂಬಿದ್ರು. ಇನ್ನೂ ಕೆಲವರು ಹೇಳುವ ಪ್ರಕಾರ ವಿ’ಷ’ಕಾರವಾದ ನಾಗರ ಹಾವಿನ ಹ’ಲ್ಲಿ ವಿ’ಷ’ದ ಹನಿಯೇ ಮಣಿಯಾಗಿ ಬದಲಾಗುತ್ತೆ ಎಂಬುದು.. ಇನ್ನೂ ನಮ್ಮ ಪುರಾಣ ಕಥೆಗಳಲ್ಲಿ ಕೆಲವು ಹಾವಿನ ಬಗ್ಗೆ ವಿವರಣೆ ಇದೆ. ಪುರಾಣಗಳಲ್ಲಿ ಪಾರಸ ಮಣಿ, ನೀಲ ಮಣಿ, ಕೌಸ್ತುಬ ಮಣಿ, ಚಂದ್ರಕಾಂತ ಮಣಿ, ಶಮಂತಕ ಮಣಿ, ಸ್ಫಟಿಕ ಮಣಿ, ಲಾರ್ಜಾವಾತ ಮಣಿ, ಗೃತ ಮಣಿ..

Advertisements

ತೈಲ ಮಣಿ, ಪೇಶ್ವಕ ಮಣಿ, ಉಲಕ ಮಣಿ, ಮಾಸರ ಮಣಿ, ಉಪಲಕ ಮಣಿ ಸೇರಿದಂತೆ ಇನ್ನೂ ಸಾಕಷ್ಟು ಮಣಿಗಳ ಕುರಿತು ಉಲ್ಲೇಖ ಮಾಡಲಾಗಿದೆ.. ಈ ಮಣಿಯನ್ನ ಹಾವಿನ ತಲೆಯಿಂದ ತಗೆದರೆ ಆ ಹಾವು ಸಾ’ವಿ’ಗಿಡಾಗುತ್ತೆ ಎಂದು ನಾಗಮಣಿ ಹೊಂದಿದ ಹಾವು ರಾತ್ರಿ ವೇಳೆ ಅದರಲ್ಲೂ ಹುಣ್ಣಿಮೆ ರಾತ್ರಿಯಲ್ಲಿ ಮಣಿಯನ್ನ ಪಕ್ಕದಲ್ಲಿ ಇರಿಸಿ ಆ ಮಣಿಯಿಂದ ಹೊಳೆಯುವ ಬೆಳಕಿನ ಪ್ರಭೆಯಲ್ಲಿ ಮಲಗುತ್ತದೆ ಎಂಬ ನಂಬಿಕೆ ಇದೆ.. ಈ ನಾಗಮಣಿಗಳು ಅನೇಕ ಬಣ್ಣಗಳಿಂದ ಕೂಡಿರುತ್ತೆಯಾದ್ರು, ಸಾಮಾನ್ಯವಾಗಿ ಕರಿ ಬಣ್ಣದ ನಾಗಣಮಣಿ ಪ್ರಸಿದ್ಧಿಯಾಗಿದೆ. ಅನೇಕ ಬಾರಿ ಇಂತಹ ನಾಗರ ಹಾವುಗಳು ಇಡಿದು ತಂದು ಅವುಗಳ ತಲೆಯಿಂದ ಕರಿ ಮಣಿಗಳನ್ನ ಚಾ’ಕು’ವಿನಿಂದ ಹೊರತಂದು ಪ್ರದರ್ಶಿಸಿ ಈ ಕರಿ ಮಣಿಗೆ ವಿಶೇಷವಾದ ಶಕ್ತಿ ಇದೆ ಅಂಥ, ಇದನ್ನು ಖರೀದಿ ಮಾಡಿದ್ರೆ ಶೀಮಂತರಾಗ್ತಾರೆ ಎಂದು ನಂಬಿಸ್ತಾರೆ..

ಇಂತಹ ಕರಿಮಣಿಗಳನ್ನ ಕೋಟಿಗಳ ಬೆಲೆಗೆ ಮಾರಾಟ ಮಾಡಿ ಮೋಸ ಮಾಡ್ತಾರೆ. ವಿಜ್ಞಾನಿಕವಾಗಿ ನೋಡುವುದಾದ್ರೆ ಇಂತಹ ಮಣಿಗಳು ನಿಜವಾಗಿ ಇಲ್ಲಾ.. ನಾಗರ ಹಾವಿನ ತಲೆಯಿಂದ ತಗೆಯುವ ಈ ಮಣಿಯೂ ಬೆಂಜೈನ್ ಕಾರ್ಬೋನೇಟ್ ಎಂಬ ಲೋಹದ ವಸ್ತು ಅಷ್ಟೇ. ಇದನ್ನೇ ರೂಪ ಮಾಡಿ ನಾಗರ ಹಾವನ್ನು ತಂದು ನಾಗರ ಹಾವಿನ ತಲೆಯ ಮೇಲ್ಬಾಗದ ಚರ್ಮ ತೆಗೆದು ಆ ಮಣಿಯನ್ನು ಮೊದಲೇ ಇಟ್ಟಿರ್ತಾರೆ.. ಕೆಲವು ದಿನಗಳ ಬಳಿಕ ಅದನ್ನು ತೆಗೆಯುವ ಸಂದರ್ಭದಲ್ಲಿ ಹಾವಿನ ಚರ್ಮ ಕವರ್ ಆಗಿರುತ್ತೆ.. ನಂತರ ಅದೇ ಹಾವನ್ನು ತಂದು ಜನರ ಎದುರು ಆ ಮಣಿಯನ್ನು ತೆಗೆದು ಇದೇ ನೋಡಿ ನಾಗಮಣಿ ಅಂಥ ನಂಬಿಸ್ತಾರೆ. ಇದರ ಸತ್ಯ ತಿಳಿಯದ ಕೆಲವರು ಇದೇ ನಿಜವಾದ ನಾಗಮಣಿ ಅಂಥ ನಂಬಿ ಕೋಟಿಗಟ್ಟಲೆ ಹಣ ಕೊಟ್ಟು ಖರೀದಿ ಮಾಡೋಕೆ ಹೋಗ್ತಾರೆ..