Advertisements

300 ವರ್ಷ ಆಳಿದ ರಾಜಮನೆತನದ ಕೊನೆಯ ರಾಣಿ ಈಗ ಏನ್ ಕೆಲಸ ಮಾಡ್ತಿದ್ದಾರೆ ಗೊತ್ತಾ?

Kannada Mahiti

ನಮ್ಮ ದೇಶವನ್ನು ಮೂನ್ನೂರು ವರ್ಷ ಆಳಿದ ರಾಜವಂಶಸ್ಥರ ಕೊನೆಯ ರಾಣಿ ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಗೊತ್ತಾ?
ನಮ್ಮ ಭರತಖಂಡವನ್ನು ಅದೆಷ್ಟೋ ರಾಜರ ಮನೆತನ ಆಳಿ ಹೋಗಿವೆ, ಮೊಘಲರಿಂದ ಹಿಡಿದು ಅಕ್ಬರ್ ಔರಂಗಜೇಬ್ ಸಹ ನಮ್ಮ ದೇಶವನ್ನು ಆಳಿದ್ದಾರೆ. ಆದ್ರೆ ನಮ್ಮ ದೇಶವನ್ನು ಸುದೀರ್ಘ ಮೂನ್ನೂರು ವರ್ಷಗಳ ಕಾಲ ಆಳಿದ ಮೊಘಲರ ಸಾಮ್ರಾಜ್ಯ ಪತನದ ನಂತರ ಆ ಸಾಮ್ರಾಜ್ಯದ ಕೊನೆಯ ಮಹಾರಾಣಿ ಎಲ್ಲಿದ್ದಾರೆ ಅಂತ ಕೇಳಿದ್ರೆ ಆಶ್ಚರ್ಯ ಆಗುತ್ತೆ. ಹೌದು ಮೊಘಲ ರಾಜಮನೆತನೆಯ ಕೊನೆಯ ರಾಣಿಯ ಹೆಸರು ಸುಲ್ತಾನ್ ಬೇಗಂ, ಈಕೆ ಪ್ರಿನ್ಸ್ ಮಿರ್ಜಾ ಅವರ ಪಟ್ಟದರಸಿ. ಪ್ರಿನ್ಸ್ ಮಿರ್ಜಾ ಅವರ ನಿಧನದ ನಂತರ ಈ ರಾಣಿ ಭವ್ಯ ಅರಮನೆಯ ವೈಭೋವೋಪೇತ ಜೀವನವನ್ನು ತೊರೆದು ದೂರು ಹೋದರು.

[widget id=”custom_html-3″]

Advertisements

ಹೀಗೆ ದೂರ ಹೋದವರು ನೆಲೆಸಿದ್ದು ಇನ್ಯಾವುದೋ ಐಶಾರಾಮಿ ಬಂಗಲೆಯಲ್ಲಲ್ಲ. ಬದಲಾಗಿ ನೆಲೆಸಿದ್ದು ಕೋಲ್ಕತ್ತದ ಸ್ಲಂವೊಂದರಲ್ಲಿ. ಬದುಕಿಗಾಗಿ ಈಕೆ ಮುಂದೆ ಸಿಕ್ಕಾಪಟ್ಟೆ ಕಷ್ಟಪಟ್ಟರಂತೆ, ಸುಲ್ತಾನ್ ಬೇಗಂ ಅವರಿಗೆ ಐವರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡುಮಗನಿದ್ದಾನಂತೆ, ಈ ಸಂಸಾರವನ್ನು ಸಾಗಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ, ಹೀಗಾಗಿ ಟೀ ಶಾಪ್‌ನ್ನು ಇಟ್ಟರಂತೆ, ಆದರೆ ಅದು ನಷ್ಟ ತಂದುಕೊಟ್ಟ ಪರಿಣಾಮ ಟೈಲೆರಿಂಗ್ ಮಾಡಿ ಬದುಕು ಸಾಗಿಸುತ್ತಿದ್ದಾರಂತೆ. ಈ ಹಿನ್ನಲೆ ತನಗೆ ಸ್ವಲ್ಪ ನೆರವು ಬೇಕು ಅಂತ ಸರ್ಕಾರದ ನೆರವಿಗಾಗಿ ಸುಲ್ತಾನ್ ಬೇಗಂ ಅವರು ನಿರಂತರ ಹೋರಾಟ ನಡೆಸುತ್ತಿದ್ದರು..

[widget id=”custom_html-3″]

ಈ ಹೋರಾಟದ ಫಲವಾಗಿ ಸುಲ್ತಾನ್ ಬೇಗಂ ಅವರ ಮನವಿಗೆ ಮಣಿದು ಸರ್ಕಾರದ ವತಿಯಿಂದ ಪ್ರತಿ ತಿಂಗಳು ಆರು ಸಾವಿರ ನೆರವನ್ನು ನೀಡಲಾಗುತ್ತಿದೆ.. ಜೊತೆಗೆ ಇವರ ಓರ್ವ ಮೊಮ್ಮಗಳಿಗೆ ಸರ್ಕಾರಿ ಉದ್ಯೋಗವನ್ನು ಸಹ ಕಲ್ಪಿಸಿಕೊಡಲಾಗಿದೆ.
ಓದಿದ್ರಲ್ಲಾ ಸ್ನೇಹಿತರೆ ನೋಡಿ ಮನುಷ್ಯನ ಬದುಕು ಈಗ ಇದ್ದಹಾಗೇ ಇನ್ನೊಂದು ದಿನ ಇರಬೇಕು ಎಂಬ ಯಾವ ನಿಯಮವು ಇಲ್ಲ, ಹಾಗೇ ಬಹುತೇಕ ಸಲ ಇರುವುದಿಲ್ಲ ಕೂಡ, ಇಲ್ಲಿ ನಾವು ಗಳಿಸಿದ ಐಶ್ವರ್ಯ, ಹಣ, ಸಂಪತ್ತು, ವಜ್ರ ವೈಢೂರ್ಯ ಇದ್ಯಾವುದು ಪರಿಗಣನೆಗೆ ಬರುವುದೇ ಇಲ್ಲ, ಆದಷ್ಟು ದಿನ ಖುಷಿಯಿಂದ ಇದ್ದು ಸಂತಸವ ಇತರರಿಗೂ ಉಣಬಡಿಸುವ.