Advertisements

ನಮ್ಮ ಮೆಟ್ರೋ ರೈಲಿನಲ್ಲಿ ಬರುವ ಧ್ವನಿ ಈ ಖ್ಯಾತ ನಟಿಯದು ಎಂದರೆ ನಂಬುವಿರಾ? ಅಚ್ಚರಿಯ ಸತ್ಯ ಬಯಲು !

Cinema

ನೀವೆಲ್ಲ ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಒಮ್ಮೆಯಾದರೂ ಒಡಾಡಿದ್ದರೆ ತಿಳಿದಿರುತ್ತದೆ, ಅದರಲ್ಲೂ ಬೆಂಗಳೂರಿನವರಾಗಿದ್ದರೆ ಇನ್ನೂ ಚೆನ್ನಾಗಿ ಗೊತ್ತಿರುತ್ತದೆ, ಅದೇನೆಂದರೆ ಮೆಟ್ರೋ ರೈಲಿನಲ್ಲಿ ಸಂಚರಿಸುವಾಗ..ಮುಂದಿನ ನಿಲ್ದಾಣ ಮೆಜೆಸ್ಟಿಕ್, ರೈಲು ಹತ್ತಿ ಇಳಿಯುವಾಗ ಅಂತರ ಕಾಯ್ದುಕೊಳ್ಳಿ, ರೈಲಿನಲ್ಲಿ ನೀರು ಮತ್ತು ಆಹಾರ ಸೇವಿಸುವಂತಿಲ್ಲ, ರೈಲು ಈಗ ಬೈಯಪ್ಪನ ಹಳ್ಳಿ ನಿಲ್ದಾಣಕ್ಕೆ ಬರಲಿದೆ..ಹೀಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಧ್ವನಿ ಕೇಳಿ ಬರುತ್ತದೆ. ಎಂದಾದರೂ ಯೋಚಿಸಿದ್ದೀರಾ, ಈ ಧ್ವನಿ ಯಾರದು ಇರಬಹುದೆಂದು? ಕಂಪ್ಯೂಟರ ಅಳವಡಿಸಲಾದ ಈ ಧ್ವನಿ ಒಬ್ಬ ಖ್ಯಾತ ನಟಿ ಹಾಗೂ ನಿರೂಪಕಿಯದು ಎಂದು ನೀವು ಬಹುಶಃ ಎಂದೂ ಯೋಚಿಸಿರುವುದಿಲ್ಲ ಅಲ್ಲವೇ!

Advertisements

ಹೌದು, ಮೆಟ್ರೋ ರೈಲಿನಲ್ಲಿ ಕೇಳಿ ಬರುವ ಧ್ವನಿ ಕರ್ನಾಟಕದ ಖ್ಯಾತ ನಿರೂಪಕಿ ಹಾಗೂ ನಟಿಯೂ ಆಗಿರುವ ಶ್ರೀಮತಿ ಅಪರ್ಣಾ ವಸ್ತಾರೆ ಅವರದು. ಅಲ್ಲದೇ ಸ್ವತಃ ಅವರೇ ಅದರ ಸ್ಕ್ರಿಪ್ಟ್ ಬರೆದು ರೂಪಿಸಿದವರು. ಸದ್ಯ ಇವರು ಮಜಾ ಟಾಕೀಸ್ ನ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಆಗಿ ಮಿಂಚುತಿದ್ದಾರೆ. ಅಪರ್ಣಾ ಅವರ ಬಗ್ಗೆ ಹೇಳುವುದಾದರೆ ಅವರು ಒಬ್ಬ ಖ್ಯಾತ ಪತ್ರಕರ್ತರ ಮಗಳು. ಓದಿದ್ದು ಇಂಗ್ಲಿಷ್ ಕಾನ್ವೆಂಟ್ ನಲ್ಲಿ ಆದರೂ ಕನ್ನಡಲ್ಲಿ ನಿಪುಣೆ. ಅಪ್ಪಟ ಕನ್ನಡ ಪ್ರೇಮಿ. ನಿಜಕ್ಕೂ ಇದು ಕನ್ನಡಿಗರು ಅವರ ಬಗ್ಗೆ ಹೆಮ್ಮೆ ಪಡಬೇಕಾದ ವಿಷಯ. ಚಿಕ್ಕಂದಿನಿಂದಲೇ ನಿರೂಪಣಾ ಪ್ರತಿಭೆ ಹೊಂದಿದ್ದ ಅವರು ನಟಿಯಾಗಿಯೂ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮ’ಸಣದ ಹೂ ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಅದ್ಭುತ ನಿರೂಪಕಿಯಾಗಿ ಕೆಲಸ ಮಾಡಿದರು.

ಈಗಲೂ ತಮ್ಮ ನಿರೂಪಕಿ ವೃತ್ತಿಯನ್ನು ನಿಲ್ಲಿಸಿಲ್ಲ. ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಇಂದಿಗೂ ಕಾರ್ಯ ನಿರ್ವಹಿಸುತ್ತಾರೆ. ಅವರ ಪ್ರತಿಭೆ ಎಂತದ್ದು ಎಂದರೆ, ಅವರ ನಿರೂಪಣೆ ನೋಡಿದವರಿಗೆ ಮಾತ್ರವೇ ಗೊತ್ತು. ಇತ್ತೀಚಿಗೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಹಾಸ್ಯ ಪಾತ್ರ ನಿರ್ವಹಿಸುತ್ತಾ ಕನ್ನಡಿಗರ ಹೃದಯ ಗೆದ್ದರೂ ತಮ್ಮ ಘನತೆ ಗಾಂಭೀರ್ಯ ಬಿಟಿಲ್ಲ. ಅದೇ ಸೊಗಸಾದ ಕನ್ನಡವನ್ನು ಮಾತನಾಡುತ್ತಾರೆ ಮತ್ತು ನಿರೂಪಕಿ ಕೆಲಸವನ್ನು ಮುಂದುವರೆಸಿದ್ದಾರೆ. ಕೇವಲ ಟೀವಿ ಚಾನಲ್ ಗಳಲ್ಲಿ ಬರುವ ನಿರೂಪಕಿ, ನಿರೂಪಕರನ್ನೇ ಸ್ಟಾರ್ ನಿರೂಪಕರು ಎಂದೂ ತಿಳಿದಿರುತ್ತೇವೆ ಆದರೆ ಅದರ ಆಚೆಗೂ ಇಂತಹ ಅದ್ಭುತ ಸಾಧಕರು ಕನ್ನಡವನ್ನು ಬೆಳೆಸುವವರು ಇದ್ದಾರೆ ಎಂದರೆ ನಿಜಕ್ಕೂ ಸಂತೋಷದ ವಿಷಯ.