Advertisements

ಎಂಟನೇ ವರ್ಷಕ್ಕೆ ಸಾಯಬೇಕಿದ್ದ ನಂದಿ ಬದುಕಿದ್ದು ಹೇಗೆ ಗೊತ್ತಾ? ನಂದಿಯ ಜೊತೆ ಶಿವ ಇರುವುದು ಇದೇ ಕಾರಣಕ್ಕೆ!

Adyathma

ಹಿಂದೂ ಧರ್ಮದಲ್ಲಿ ಪ್ರಕೃತಿಯೇ ದೇವರು ಎಂದು ಪೂಜಿಸಲಾಗುವುದು ಪ್ರಕೃತಿಯಲ್ಲಿರುವ ಮೂಕ ಪ್ರಾಣಿ ಪಕ್ಷಿಗಳು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತವೆ. ಅವುಗಳಲ್ಲೂ ದೈವಶಕ್ತಿ ಇದೆ ಎನ್ನುವ ನಂಬಿಕೆ ಇದೆ. ಈ ನಿಟ್ಟಿನಲ್ಲಿಯೇ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಆರಾಧಿಸಲಾಗುವುದು. ಹಿಂದೂ ಧರ್ಮದ ದೇವತೆಗಳ ವಾಹನಗಳು ವಿಶೇಷ ಶಕ್ತಿಯನ್ನು ಹೊಂದಿರುವ ಪ್ರಾಣಿಪಕ್ಷಿಗಳೆ ಎನ್ನುವುದು ನಾವು ನೆನಪಿಡಬೇಕು ದೇವಾನುದೇವತೆಗಳು ತಮ್ಮ ವಾಹನಗಳಾದ ಪ್ರಾಣಿಗಳಿಂದಲೆ ಪ್ರಪಂಚವನ್ನು ಸುತ್ತುತ್ತಿದ್ದರು ಎನ್ನುವ ವಿಚಾರವನ್ನು ಇತಿಹಾಸದ ಪುರಾಣಗಳಲ್ಲಿ ಕಾಣಬಹುದು. ತ್ರಿಮೂರ್ತಿಗಳಲ್ಲಿ ಒಬ್ಬರಾದ ಶಿವ ಸೃಷ್ಟಿಯ ಲಯಕಾರಕ. ಶಿವನ ಮಹಿಮೆ ಹಾಗೂ ಶಕ್ತಿಯು ಅದ್ಭುತವಾದದ್ದು. ಮನುಕುಲದ ಏಳಿಗೆ ಹಾಗೂ ಉದ್ದಾರಕ್ಕೆ ಇವರೆ ಕಾರಣಕರ್ತ ಎನ್ನಲಾಗುವುದು. ಶಿವನು ತನ್ನ ವಾಹನವನ್ನಾಗಿ ಹಾಗೂ ಅತ್ಯಂತ ಪ್ರಿಯ ಪ್ರಾಣಿಯನ್ನಾಗಿ ನಂದಿಯನ್ನು ಹೊಂದಿರುತ್ತಾರೆ. ಹಾಗಾಗಿಯೆ ಶಿವನ ದೇವಸ್ಥಾನ ನಿರ್ಮಾಣ ಮಾಡುವಾಗ ಶಿವನ ವಿಗ್ರಹಕ್ಕೆ ನೇರವಾಗಿ ನಂದಿಯ ವಿಗ್ರಹವನ್ನು ಇಡಲಾಗುವುದು. ನಂದಿ ಇಲ್ಲದ ಶಿವನ ದೇವಸ್ಥಾನ ಇರುವುದು ಅಪರೂಪ.

[widget id=”custom_html-3″]

Advertisements

ಶಿವನ ಮುಂದೆ ಕಾಲುಗಳನ್ನು ಮಡಚಿ ಕುಳಿತಿರುವಂತಹ ನಂದಿಯು ವಿಶೇಷ ಶಕ್ತಿಯನ್ನು ಪಡೆದು ಕೊಂಡಿರುತ್ತದೆ. ಅದ್ಭುತ ದೈವ ಶಕ್ತಿಯನ್ನು ಹೊಂದಿರುವಂತಹ ಶಿವ ಮತ್ತು ನಂದಿಯ ನಡುವೆ ಹೇಗೆ ಸ್ನೇಹ ಬೆಳೆಯಿತು ನಂದಿಯೆ ಶಿವನ ವಾಹನ ಹೇಗಾಯಿತು ನಂದಿಯ ಹುಟ್ಟು ಹಾಗೂ ಕುತೂಹಲಕಾರಿ ಸಂಗತಿಗಳ ಬಗ್ಗೆ ನೋಡಿ.ವಾಯು ಪುರಾಣದ ಪ್ರಕಾರ ಋಷಿ ಕಶ್ಯಪನಿಗೆ ಮಕ್ಕಳಿರಲಿಲ್ಲ ಕಶ್ಯಪ ಮುನಿಗಳು ಮತ್ತು ಅವರ ಮಡದಿ ಸುರಭಿಯು ಮಕ್ಕಳನ್ನು ಪಡೆಯಬೇಕೆಂದು ಬಹಳ ನಿರೀಕ್ಷಿಸುತ್ತಿದ್ದರು. ತಮಗೆ ಹುಟ್ಟಿದ ಮಗುವಿಗೆ ಕುಲದ ಹೆಸರನ್ನು ಇಡಬೇಕೆಂದು ಇವರು ಆಸೆ ಪಡುತ್ತಾರೆ. ಅದೇ ಕಾರಣಕ್ಕಾಗಿ ಪತಿ, ಪತ್ನಿ ಇಬ್ಬರು ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಅವರ ಭಕ್ತಿಗೆ ಮೆಚ್ಚಿದ ಶಿವ ಕಶ್ಯಪ ದಂಪತಿಗಳಿಗೆ ಮಕ್ಕಳಾಗಲಿ ಎಂದು ಹರಸುತ್ತಾರೆ. ಶಿವನ ಆಶೀರ್ವಾದದಂತೆ ಶೀಘ್ರದಲ್ಲಿ ಅವರಿಗೆ ಗಂಡು ಸಂತಾನವಾಗುತ್ತದೆ ಆ ಮಗುವಿಗೆ ನಂದಿ ಎಂದು ಹೆಸರಿಡುತ್ತಾರೆ. ಕೆಲವು ಪುರಾಣಗಳ ಪ್ರಕಾರ ಶಿಲಾ ದೃಷಿಯು ಇಂದ್ರ ದೇವನಲ್ಲಿ ತನಗೆ ಬಲವಾದ ಶಕ್ತಿಯುತವಾದ ಮಗುವನ್ನು ಕರುಣಿಸು ಎಂದು ಕೇಳುತ್ತಾನೆ.

[widget id=”custom_html-3″]

ಇದಕ್ಕೆ ನೀನು ಶಿವನನ್ನೇ ಪ್ರಾರ್ಥಿಸಬೇಕು ಎಂದು ಇಂದ್ರ ದೇವರು ಸಲಹೆ ಕೊಡುತ್ತಾರೆ. ಅದೇ ಪ್ರಕಾರ ಶಿಲಾ ದೃಷಿ ಶಿವನನ್ನು ಆರಾಧಿಸಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ ಶಿವನ ಆಶೀರ್ವಾದದಂತೆ ಶಿಲಾ ದೃಶಿ ಬಲಶಾಲಿಯಾಗಿರುವ ಅಂತಹ ಒಬ್ಬ ಮಗನನ್ನು ಪಡೆಯುತ್ತಾರೆ. ಕೆಲವು ವರ್ಷಗಳ ನಂತರ ಇಂದ್ರ ಮತ್ತು ಮಿತ್ರದೇವ ಶಿಲಾ ಮುನಿಗಳಿಗೆ ಸುದೀರ್ಘ ಜೀವನವನ್ನು ಅರಸಿ ನಿಮ್ಮ ಮಗ ನಂದಿ ತನ್ನ ಎಂಟನೇ ವರ್ಷದಲ್ಲಿ ಸಾ’ವ’ನ್ನಪ್ಪುತ್ತಾನೆ ಎಂದು ಆ’ಘಾ’ತಕಾರ ಸುದ್ದಿಯೊಂದನ್ನು ಹೇಳುತ್ತಾರೆ.. ಆಗ ನಂದಿಗೆ ಏಳು ವರ್ಷ ವಯಸ್ಸಾಗಿತ್ತು ವಿಷಯ ತಿಳಿದ ತಂದೆ ದುಃಖಿತನಾಗಿರುವುದು ನಂದಿಗೆ ನೋಡಲು ಸಾಧ್ಯವಾಗುತ್ತಿರಲಿಲ್ಲ. ಆಗ ನಂದಿಯು ಶಿವನನ್ನು ಮೆಚ್ಚಿಸಲು ತಪಸ್ಸನ್ನು ಪ್ರಾರಂಭಿಸುತ್ತಾನೆ. ಆತನ ತಪಸ್ಸನ್ನು ಮೆಚ್ಚಿ ಪ್ರತ್ಯಕ್ಷನಾದ ಶಿವ ನಂದಿಗೆ ಗಂಟೆಯ ಹಾರವನ್ನು ಪ್ರಸಾದಿಸುತ್ತಾರೆ. ನಂತರ ನಂದಿಯು ಅರ್ಧ ಮನುಷ್ಯನಾಗಿ ಹಾಗೂ ಅರ್ಧ ಗೂಳಿ ಯಾಗಿರುವಂತೆ ಆಶೀರ್ವಾದ ನೀಡುತ್ತಾರೆ..

[widget id=”custom_html-3″]

ಇದಾದ ಬಳಿಕ ಶಿಲಾ ಮುನಿ ಹಾಗೂ ನಂದಿ ಶಿವನ ಕೈಲಾಸಪರ್ವತಕ್ಕೆ ಹೋಗಿ ಅಲ್ಲಿ ಅವರ ಗಣಗಳಲ್ಲಿ ಒಬ್ಬರಾಗಿ ಜೀವಿಸುತ್ತಾರೆ ಅದಾದ ಬಳಿಕ ಶಿವನ ಮೆಚ್ಚಿನ ವಾಹನ ಹಾಗೂ ಮೆಚ್ಚಿನ ಪ್ರಾಣಿಯಾಗಿ ನಂದಿ ಉಳಿಯುತ್ತಾನೆ. ನಂದಿಯನ್ನು ಸಹ ದೇವಾಲಯದಲ್ಲಿ ದೈವ ರೂಪವೆಂದು ಪೂಜಿಸಲಾಗುವುದು. ಕರ್ನೂಲ್ ನಲ್ಲಿರುವ ಮಹಾ ನಂದಿಶ್ವರ ದೇವಾಲಯದಲ್ಲಿ ನಂದಿ ದೇವರ ವಿಶೇಷ ವಿಗ್ರಹ ಇರುವುದನ್ನು ಕಾಣಬಹುದು. ಅದಲ್ಲದೆ ಇದು ನಂದಿಯ ಅತ್ಯಂತ ದೊಡ್ಡ ಪ್ರತಿಮೆ ಎಂದು ಸಹ ಹೇಳಲಾಗುತ್ತದೆ. ನಂದಿ ನ್ಯಾಯ ನಂಬಿಕೆ ಗೌರವ ಬುದ್ಧಿವಂತಿಕೆ ಮತ್ತು ಬಲಶಾಲಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಈ ಗುಣವನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳು ಸಹ ಶಿವನಿಗೆ ಪ್ರಿಯವಾದ ಭಕ್ತರಾಗುತ್ತಾರೆ. ಶಿವನು ತಾಂಡವ ನೃತ್ಯಮಾಡುವಾಗ ನಂದಿಯು ಸಂಗೀತವನ್ನು ನುಡಿಸುತ್ತಾ ನಂತೆ. ಇದೇ ಸ್ನೇಹಿತರೆ ನಂದಿ ಹಾಗೂ ಶಿವನ ನಡುವೆ ಇರುವಂತಹ ಬಾಂಧವ್ಯ..

[widget id=”custom_html-3″]