ಈ ಹಾಲು ಒಕ್ಕೂಟ ರಾಷ್ಟ್ರದ ಎರಡನೇ ಅತೀ ದೊಡ್ಡ ಹಾಲು ಉತ್ಪಾದಕ ಒಕ್ಕೂಟ ಆಗಿದೆ. ಇದು ನಮ್ಮ ರಾಜ್ಯದ ರೈತರ ಹೈನುಗಾರಿಕೆಗೆ ಬಹಳ ಪ್ರೋತ್ಸಾಹವನ್ನ ಕೊಡುತ್ತಿದೆ. ಇದುವೇ KMF ನಂದಿನಿ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ. ಇದು 1974ರಲ್ಲಿ ವಿಶ್ವಬ್ಯಾಂಕ್, ಕರ್ನಾಟಕ ಸರ್ಕಾರ ಸೇರಿದಂತೆ ಹಲವಾರು ಸಂಘಟನೆಗಳ ಸಹಕಾರದಿಂದ ಆರಂಭವಾಯಿತು. ಆರಂಭದಲ್ಲಿ ಇದು ಡೈರಿ ಡೆವಲಪ್ ಮೆಂಟ್ ಕೋಪರೇಷನ್ (KDDC). ಬಳಿಕ ಇದು 1984ರಲ್ಲಿ ಕರ್ನಾಟಕ ಫೆಡರೇಷನ್ ಎಂದು ಮರು ನಾಮಕರಣಗೊಂಡಿತ್ತು.

ಈ KMF ರಾಜ್ಯದ ಮೂಲೆ ಮೂಲೆಗಳಿಂದ ರೈತರಿಂದ ಹಾಲನ್ನ ಸಂಗ್ರಹಣೆ ಮಾಡಿ ತನ್ನ ಫ್ಯಾಕ್ಟರಿಗೆ ತೆಗೆದುಕೊಂಡು ಹೋಗುತ್ತದೆ. ಅಲ್ಲಿ ಹಾಲನ್ನು ಸಂಸ್ಕರಿಸಿದ ವಿವಿಧ ರೀತಿಯ ಹಾಲುಗಳು ಮೊಸರು, ಮಜ್ಜಿಗೆ, ಪನ್ನೀರ್, ಪೇಡ ಸೇರಿದಂತೆ ಹಲವು ವಿವಿಧ ಬಗೆಯ ಹಾಲಿನ ಉತ್ಪನ್ನಗಳನ್ನ ತಯಾರು ಮಾಡಲಾಗುತ್ತೆ. ಇದಲ್ಲದೆ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಕೊಡುವ ಕ್ಷೀರ ಭಾಗ್ಯದ ಉಚಿತ ಹಾಲು ಕೂಡ ಇಲ್ಲಿಂದಲೇ ಪೂರೈಕೆ ಆಗುತ್ತದೆ. ಸ್ಯಾಂಡಲ್ವುಡ್ ಖ್ಯಾತ ಸ್ಟಾರ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಂದಿನಿ ಬ್ರಾಂಡ್ ನ ರಾಯಭಾರಿ ಆಗಿದ್ದಾರೆ.

ಇನ್ನು ಈ ಹಾಲಿನ ‘ನಂದಿನಿ’ ಬ್ರಾಂಡ್ ಸಿಹಿ ತಿಂಡಿಗಳು ದೇಶದಾದ್ಯಂತ ಫೇಮಸ್ ಆಗಿದೆ. ಹಾಲಿನಿಂದ ತಯಾರಿಸಲಾಗುವ ಮೈಸೂರು ಪಾಕ್, ಪೇಡ, ಖೋವ, ಪ್ರೀಮಿಯಂ ಬಾದಾಮಿ ಬರ್ಫಿ, ಪ್ರೀಮಿಯಂ ಕ್ಯಾಶ್ಯು ಬರ್ಫಿ, ಡ್ರೈ ಫ್ರೂಟ್ಸ್ ಬರ್ಫಿ, ಕೊಕೊನಟ್ ಬರ್ಫಿ, ಚಾಕೊಲೆಟ್ ಬರ್ಫಿ, ಕೇಸರ್ ಪೇಡ, ಎಲೈಚಿ ಪೇಡ, Ready to Eat ಖೋವ ಜಾಮೂನ್ ಹಾಗೂ ರಸಗುಲ್ಲ, ನಂದಿನಿ ಬೈಟ್, ಜಾಮೂನ್ ಮಿಕ್ಸ್ ಮತ್ತು ಬಾದಾಮಿ ಪುಡಿ, ಇವೇ ಮುಂತಾದ ಜನಪ್ರಿಯ ಸಿಹಿತಿಂಡಿಗಳ ತಯಾರಿಕೆಯ ಪ್ರಾವೀಣ್ಯತೆಯನ್ನು ಪಡೆದಿದೆ. ನಮ್ಮ ಕರ್ನಾಟಕದ ಈ ಕಂಪೆನಿ ಕನ್ನಡಿಗರ ಹೆಮ್ಮೆ.