ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಧ್ಯಕ್ಕೆ ಅತಿ ಹೆಚ್ಚು ಟಿಆರ್ ಪಿ ಪಡೆಯುತ್ತಿರುವ ನನ್ನರಸಿ ರಾಧೆ ಧಾರವಾಹಿಯಲ್ಲಿ ಮಗುವಿನಂತೆ ಮುಗ್ದವಾಗಿ ನಟಿಸಿ ಇಂಚರ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದಿರುವ ನಟಿ ಕೌಸ್ತುಬ ಮಣಿ ಅವರು ನಟನೆಗೂ ಮುನ್ನ ಏನ್ ಮಾಡ್ತಿದ್ರು ಗೊತ್ತಾ? ನನ್ನರಸಿ ರಾಧೆ ಧಾರವಾಹಿಯಲ್ಲಿ ತುಂಟಾಟ, ಕೀಟಲೇ ತರ್ಲೆ ಹಾಗು ಮುಗ್ದ ನಗುವಿನ ಮೂಲಕ ಎಲ್ಲರ ಮುಖದಲ್ಲೂ ನಗು ಮೂಡಿಸುವ ನಟಿ ಕೌಸ್ತುಬ ಮಣಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.. ಅದರಲ್ಲೂ ಇಂಚರ, ಅಗಸ್ತ್ಯ ಪಾತ್ರ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದು ಕಿರುತೆರೆ ಪ್ರೇಕ್ಷಕರ ನೆಚ್ಚಿನ ಅಚ್ಚುಮೆಚ್ಚಿನ ಜೋಡಿಯಾಗಿದ್ದಾರೆ..
[widget id=”custom_html-3″]

ಇನ್ನೂ ಮೂಲತಃ ಬೆಂಗಳೂರಿನ ಬಸವನಗುಡಿ ಆಗಿರುವ ಕೌಸ್ತುಬ ಮಣಿ ಅವರ ಪೋಟೋ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗ್ತಾಯಿದ್ದವು. ಇವರ ಪೋಟೋ ನೋಡಿ ನೆಟ್ಟಿಗರು ಮತ್ತು ಅಭಿಮಾನಿಗಳು ಫುಲ್ ಖುಷಿಯಾಗಿ ಮೆಚ್ಚಿಗೆ ಸೂಚಿಸಿದ್ದಾರೆ.. ಅಲ್ಲದೇ ವಿದೇಶದಲ್ಲೂ ಕೂಡ ಅಭಿಮಾನಿಗಳು ಮೆಸೆಜ್ ಮಾಡ್ತಾ ಇರ್ತಾರೆ. ಇಷ್ಟು ಕಡಿಮೆ ಸಮಯದಲ್ಲಿ ಹೆಚ್ಚು ಅಭಿಮಾನಿಗಳನ್ನು ಗೆದ್ದಿರುವ ನಟಿ ಕೌಸ್ತುಬ ಅವರು..
[widget id=”custom_html-3″]

ನಟನಾ ಕ್ಷೇತ್ರಕ್ಕೆ ಬರುವುದಕ್ಕೂ ಮುನ್ನ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದರಂತೆ.. ಪದವಿದಾರರಾಗಿದ್ದ ಕಾರಣ ಬ್ಯಾಂಕ್ ನಲ್ಲಿ ಒಂದೂವರೆ ವರ್ಷ ಕೆಲಸ ಮಾಡಿ ನಂತರ ನಟಿ ಮಾನ್ವಿತಾ ಮೂಲಕ ಧಾರವಾಹಿಯಲ್ಲಿ ನಟಿಸುವ ಅವಾಕಶ ಪಡೆದುಕೊಂಡಿದ್ದಾರೆ.. ಯಾವುದೇ ನಟನೆಯ ತರಬೇತಿ ಇಲ್ಲದಿದ್ದರೂ ಸಹ ಮುಗ್ದಾವಾಗಿ ಇಷ್ಟು ಅಚ್ಚುಕಟ್ಟಾಗಿ ನಟಿಸುವ ನಟಿ ಕೌಸ್ತುಬ ಅವರ ಬಗ್ಗೆ ನಿವೇನ್ ಹೇಳಲು ಇಷ್ಟ ಪಡುತ್ತೀರಾ..