Advertisements

ವಿದೇಶದಲ್ಲಿ 3 ಲಕ್ಷ ಸಂಬಳ ಕೆಲಸ ಬಿಟ್ಟು ಬಂದ ಈ ವ್ಯಕ್ತಿ ಈಗ ಮಾಡ್ತಿರೋದೇನು ಗೊತ್ತಾ? ಧಾರವಾಡದ ಈ ರೈತನ ಐಡಿಯಾ ಸಿಕ್ಕಾಪಟ್ಟೆ ವೈರಲ್..

Inspire Kannada Mahiti

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಯುವ ಜನರು ಕೃಷಿಯ ಕಡೆಗೆ ವಾಲುತ್ತಿದ್ದು ಏನಾದ್ರೂ ಕೂಡ ಕೃಷಿಯಲ್ಲೇ ಸಾಧನೆ ಮಾಡ್ಲೇಬೆಕು ಎಂದು ದುಬಾರಿ ಸಂಬಳ ಬರುತ್ತಿದ್ದರು ಆ ಕಂಪನಿಯ ಕೆಲಸವನ್ನು ಬಿಟ್ಟು ಹಳ್ಳಿಗಳಿಗೆ ಬರುತ್ತಿದ್ದಾರೆ.. ಸ್ವಂತ ಊರಿನಲ್ಲಿ ಸ್ವಂತ ಜಮೀನಿನಲ್ಲಿ ಕೃಷಿಯನ್ನು ಮಾಡಿ ಬದುಕನ್ನು ಕಟ್ಟಿಕೊಂಡು ಯಶಸ್ವಿಯಾಗಿರುವುದನ್ನ ನಾವು ಹಲವರನ್ನು ನೋಡಿರುತ್ತೇವೆ ಹಾಗೂ ಅವರ ಬಗ್ಗೆ ಕೇಳಿರುತ್ತೇವೆ. ಆದರೆ ತಾನೆ ಬೆಳೆದ ಬೆಳೆಗೆ ತಾನೇ ಮಾರುಕಟ್ಟೆಯನ್ನ ಸೃಷ್ಟಿ ಮಾಡಿಕೊಂಡು ಡಿಜಿಟಲ್ ನಿಂದ ತಾವು ಕೂತಲ್ಲಿಯೇ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.. ಆ ರೈತ ಇವರೇ ನೋಡಿ.

Advertisements

ದೊಡ್ಡ ಕಂಪನಿಯಲ್ಲಿ ಲಕ್ಷಗಟ್ಟಲೆ ದುಡಿಯುತ್ತಿದ್ದ ಇವರು ಆ ಕೆಲಸಕ್ಕೆ ಗುಡ್ ಬಾಯ್ ಹೇಳಿ ಬಳ್ಳಾರಿಯ ಸಂಡೂರಿನ ನರಸನಗೌಡ ವೀರಾಪುರ ಅವರು ಧಾರವಾಡದ ಕ್ಯಾರಕುಪ್ಪದಲ್ಲಿ 5 ಎಕರೆ ಜಮೀನನ್ನು ಖರೀದಿ ಮಾಡಿ ಆ ಜಮೀನಿನಲ್ಲೇ ಸಾವಯುವ ಕೃಷಿ ಮಾಡಿ ಒಳ್ಳೆಯ ಆದಾಯವನ್ನು ಗಳಿಸಿ ಕುಷಿ ಕಾಣುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಇವರು ಲಂಡನ್ ನಲ್ಲಿ ಮೂರುವರೆ ಲಕ್ಷ ಸಂಬಳ ಪಡೆಯುತ್ತಿದ್ದರು..ಆದರೆ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಇವರು ತವರಿಗೆ ಮರಳಿ ನಂತರ ಜಮೀನು ಖರೀದಿ ಮಾಡಿ ರಾಸಾಯನಿಕ ಗೊಬ್ಬರಗಳನ್ನ ಬಳಸದೇ ತರಕಾರಿ ಬೆಳೆದಿದ್ದಾರೆ.. ಆದರೆ ಇಳುವರಿ ಅಂದುಕೊಂಡಂತೆ ಆಗಲಿಲ್ಲ.

ಈಗಾಗಿ ಸಾವಯುವ ಕೃಷಿ ಕಡೆ ಮುಖ ಮಾಡುತ್ತಾರೆ.. ನಂತರ ಇವರು 12 ಬಗೆಯ ಸೊಪ್ಪುಗಳು ವಿವಿಧ ರೀತಿಯ ಹೂವು ಇತರೆ ರೀತಿಯ ತರಕಾರಿಗಳ ಜೊತೆಗೆ ಅಣಬೆಯನ್ನ ಕೂಡ ಬೆಳೆಯುತ್ತಿದ್ದಾರೆ. ಇದೆಲ್ಲದಕ್ಕಿಂತ ವಿಶೇಷ ಅಂದರೆ ಸ್ವತಃ ಇವರೇ ಮೊಬೈಲ್ ಆ್ಯಪ್ ಅನ್ನ ಆವಿಷ್ಕಾರ ಮಾಡಿದ್ರೂ.. ಆ್ಯಪ್ ಮೂಲಕವೇ ತಮ್ಮ ಬೆಳೆಗಳನ್ನ ಮಾರಟ ಮಾಡುತ್ತಿದ್ದಾರೆ. ನರಸನಗೌಡ ಅವರು ವೀಕೆಎಪ್ ಅಗ್ರಿ ಫಾರ್ಮ್ ಎಂಬ ಮೋಬೈಲ್ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದು.. ಈಗಾಗಲೇ ಧಾರವಾಡದ ಸುತ್ತಮುತ್ತಲಿನ 350 ಹೆಚ್ಚು ಗ್ರಾಮಗಳ ಗ್ರಾಹಕರನ್ನ ಹೊಂದಿದ್ದಾರೆ.

ಹೌದು ವಾಟ್ಸಪ್ ಮತ್ತು ಆ್ಯಪ್ ಮೂಲಕ ಪ್ರತೀ ಗುರುವಾರ ತನ್ನ ಗ್ರಾಹಕರಿಗೆ ಬೇಕಾದ ತರಕಾರಿ, ಹೂವು ಹಣ್ಣನ್ನ ತಮ್ಮ ಸಿಬ್ಬಂದಿಗಳ ಮೂಲಕ ಗ್ರಾಹಕರ ಮನೆಗಳಿಗೆ ತಲುಪಿಸುತ್ತಾರೆ‌.. ಅಲ್ಲದೇ ಮೋರ್ ಗಳಿಗೂ ನರಸನ ಗೌಡ ಅವರು ತಮ್ಮ ಸಾವಯುವ ತರಕಾರಿಗಳನ್ನ ಪೂರೈಸುತ್ತಿದ್ದಾರೆ. ನೋಡಿದ್ರಲ್ವಾ, ದುಡಿಮೆಗಾಗಿ ತವರು ಬಿಟ್ಟು ವಿದೇಶ ಸೇರುವ ಮಂದಿ ಮಧ್ಯೆ ನರನಸಗೌಡ ಅವರು ಹಾಗೂ ತವರು ಹಾಗೂ ಕೃಷಿ ಮೇಲಿನ ಪ್ರೀತಿ ಹಾಗೂ ಗೌರವ ಜೊತೆಗೆ ಕೃಷಿ ಮೇಲಿನ ಹೊಸತನ ಬಗ್ಗೆ ನಿಮಗೆ ಏನನಿಸುತ್ತಿದೆ.