Advertisements

ಮತ್ತೊಮ್ಮೆ ಚೀನಾಗೆ ಖಡಕ್ ವಾರ್ನಿಂಗ್ ಕೊಟ್ಟ ಭಾರತ : ಈ ಸಲ ಹೇಳಿದ್ದೆ ಬೇರೆ ?

News

ಸ್ನೇಹಿತರೆ, ಭಾರತದ ಗಾಡಿಯಲ್ಲಿ ಕುತಂತ್ರಿ ಚೀನಾ ಪದೇ ಪದೇ ಕಿರಿಕ್ ಮಾಡುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಇನ್ನು ಗಡಿರೇಖೆಗೆ ಸಂಬಂಧಿಸಿದಂತೆ ಭಾರತದ ಜೊತೆ ಸಂಘರ್ಷಕ್ಕೆ ಇಳಿದಿರುವ ಚೀನಾ ನಮ್ಮ ಭಾರತೀಯ ಯೋಧರ ಜೊತೆ ರಾಕ್ಷಸಿಯವಾಗಿ ನಡೆದುಕೊಂಡಿದ್ದನ್ನ ಇಡೀ ಜಗತ್ತೇ ನೋಡಿದೆ. ಇದೆಲ್ಲಾ ಸಾಲದೆಂಬಂತೆ ಗಡಿ ಭಾಗಗಳಲ್ಲಿ ತನ್ನ ಸೇನಾ ಪಡೆಗಳನ್ನ ನಿಯೋಜಿಸಿ ತನ್ನ ಶಕ್ತಿಯನ್ನ ಪ್ರದರ್ಶನ ಮಾಡುವ ದುಸ್ಸಾಹಸ ಮಾಡುತ್ತಿದೆ. ಎರಡು ದೇಶಗಳ ನಡುವಿರುವ ಬಾಂದವ್ಯವನ್ನ ಶಾಂತಿಯನ್ನ ಕದಡುವ ಕೆಲಸ ಮಾಡುತ್ತಿದೆ.

Advertisements

ಇನ್ನು ಭಾರತವೇನು ಇದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಕುಳಿತಿಲ್ಲ. ಭಾರತ ಕೂಡ ಗಡಿಭಾಗಗಲ್ಲಿ ನಮ್ಮ ಸೇನೆಯನ್ನ ನಿಯೋಜನೆಯನ್ನ ಮಾಡಿ ಚಿನ್ನಗೆ ಠಕ್ಕರ್ ಕೊಡುತ್ತಿದೆ. ಇದರೆಲ್ಲದರ ನಡುವೆಯೇ ಚೀನಾಗೆ ಖಡಕ್ ಸಂದೇಶ ರವಾನೆ ಮಾಡಿರುವ ಭಾರತ ಪೂರ್ವ ಲಡಾಖ್ ನಲ್ಲಿ ಚೀನಾ ಸೇನೆ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳನ್ನ ತಕ್ಷಣವೇ ನಿಲ್ಲಿಸಬೇಕು..ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಚೀನಾಗೆ ಭಾರತ ನೇರವಾಗಿಯೇ ಖಡಕ್ ಆಗಿ ವಾರ್ನಿಂಗ್ ಮಾಡಿದೆ.

ಇನ್ನು ಲಡಾಖ್ ಪೂರ್ವ ಲಡಾಖ್ ನಲ್ಲಿ ಸೇನೆ ನಿಯೋಜನೆ ಮಾಡಿರುವ ಚೀನಾಗೆ ಅದು ತಪ್ಪು ಎಂದು ಮನವರಿಕೆಯಾದಲ್ಲಿ ಮಾತ್ರ ಎರಡು ದೇಶಗಳ ನಡುವೆ ಇರುವ ಬಿಕ್ಕಟ್ಟು ಶಮನ ಆಗಿ, ಭಾಂದವ್ಯ ವೃದ್ಧಿಸಲು ಸಧ್ಯ ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ವಿಕ್ರಂ ಮಿಸ್ರಿಯವರು ಹೇಳಿದ್ದಾರೆ. ಜೊತೆಗೆ ಲಡಾಕ್ ನಲ್ಲಿರುವ ಗಾಲ್ವನ್ ಕಣಿವೆ ನನ್ನದೆನ್ನುತ್ತಿರುವ ಚೀನಾದ ಮಾತನ್ನ ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.