Advertisements

ಈ ವ್ಯಕ್ತಿ ತನ್ನ ಮಗಳ ಮದುವೆಯನ್ನ ಯಾವ ರೀತಿ ಮಾಡಿದ್ದಾರೆ ಗೊತ್ತಾ? ಇದುವರೆಗೂ ಯಾರು ಈ ರೀತಿ ಮಾಡಿಲ್ಲ..

Kannada Mahiti

ನಮಸ್ತೆ ಸ್ನೇಹಿತರೆ.. ತಾಯಿ ಒಂಬತ್ತು ತಿಂಗಳು ಮಗುವನ್ನು ಹೊತ್ತಿಕೊಂಡು ತಿರುಗಾಡಿದರೆ ತಂದೆ ಎನ್ನುವ ತ್ಯಾಗಿ.. ಮಗು, ಮಗುವಿ‌ನ ಕಷ್ಟಗಳನ್ನು ಜೀವನಪೂರ್ತಿ ತನ್ನ ಬುಜದ ಮೇಲೆ ಒತ್ತುಕೊಂಡು ತಿರುಗಾಡುತ್ತಾನೆ.. ನಮ್ಮ ನೋವು, ಕಷ್ಟಗಳು ಬರದಂತೆ ನೋಡಿಕೊಂಡು ತನ್ನ ನೋವುಗಳನ್ನೇಲಾ ಮರೆಮಾಚುವ ತ್ಯಾಗಿ..  ಮಗು ಹುಟ್ಟಿದ ದಿನದಿಂದ ಕೊನೆವರೆಗೂ ಕಾಪಾಡಿಕೊಂಡು ಹೋಗುವ ಸೂಪರ್ ಹೀರೊ ಅಂದರೆ ಅದು ತಂದೆ ಮಾತ್ರ.. ಅಪ್ಪ ಎಂಬ ಭಾವನೆ ಬಂದರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ದೈರ್ಯ ಇರುತ್ತದೆ..

Advertisements

ಕಾರಣ ಎಂತಹ ಕಷ್ಟದ ಸಮಯದಲ್ಲೂ ಕೂಡ ನಮ್ಮ ತಂದೆ ಬೆನ್ನೆಲುಬಾಗಿ ನಿಂತಿರುತ್ತಾರೆ ಎಂದು.. ಇನ್ನೂ ನಾವು ತಿಳಿಸುವ ಇಲ್ಲೊಬ್ಬ ವ್ಯಕ್ತಿಯೂ ಕೂಡ ಸೂಪರ್ ಹೀರೋ.. ಆಂದ್ರಪ್ರದೇಶಕ್ಕೆ ಸೇರಿದ ನರಸಿಂಹ ಆಚಾರಿ ಎಂಬ ವ್ಯಕ್ತಿಗೆ ಒಬ್ಬ ಹೆಣ್ಣು ಮಗಳು.. ಇನ್ನೂ ಈ ವ್ಯಕ್ತಿಗೆ ಹೆಣ್ಣು ಮಗು ಜನಿಸಿದಾಗ ಇವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ.. ಪ್ರತಿ ಕ್ಷಣ, ಪ್ರತಿದಿನ ಮಗಳಿಗೆ ಏನಾದರೂ ಒಂದು ಹೊಸದಾದ ಉಡುಗೊರೆ ಕೊಟ್ಟು ಆಕೆಯನ್ನು ಸಂತೋಷದಲ್ಲಿ ಮುಳುಗಿಸುತ್ತಿದ್ದರು.. ಮಗಳನ್ನು ಮದುವೆಯ ವಯಸ್ಸಿನವರೆಗೂ ಚೆನ್ನಾಗಿ ನೋಡಿಕೊಂಡು ಕೊನೆಗೆ ಮದುವೆಯ ಜವಾಬ್ದಾರಿಯನ್ನು ಹೊರುತ್ತಾರೆ..

ಪ್ರತಿಕ್ಷಣ ಮಗಳ ಬಗ್ಗೆ ಯೋಚಿಸುವ ಈ ತಂದೆ ಮಗಳ ಲಗ್ನ ಪತ್ರಿಕೆಯನ್ನು ವಿಶೇಷವಾಗಿ ಮಾಡಿಸಿದ್ದಾರೆ..  ಸಾಮಾನ್ಯವಾಗಿ ಎಲ್ಲರೂ ಲಗ್ನ ಪತ್ರಿಕೆಯಲ್ಲಿ ಕುಟುಂಬದ ಹೆಸರುಗಳು ಹಾಗೂ ಮದುವೆಯ ದಿನಾಂಕ ಸ್ಥಳ ವನ್ನು ಹಾಕಿ ಮದುವೆಗೆ ಆಮಂತ್ರಣ ಮಾಡುತ್ತಾರೆ‌‌.. ಆದರೆ ನರಸಿಂಹ ಆಚಾರಿ ಲಗ್ನ ಪತ್ರಿಕೆಯ ಒಂದು ಪೇಜ್ ನಲ್ಲಿ ಹೆತ್ತರೆ ಹೆಣ್ಣುಮಗುವನ್ನು ಹೆರಬೇಕು ಎಂದು ಮುದ್ರಿಸಿ.. ಆ ಪೇಜ್ ಪೂರ್ತಿಯಾಗಿ ಮಗಳ ಬಾಲ್ಯದಿಂದ ಮದುವೆ ವಯಸ್ಸಿನವರೆಗಿನ ಸಂತೋಷದ ಕ್ಷಣಗಳ ಪೋಟೊಗಳನ್ನು ಹಾಕಿಸಿದ್ದಾರೆ..

ಅಷ್ಟು ಮಾತ್ರವಲ್ಲದೇ ಮಗಳ ಬಗ್ಗೆ ಕವಿತೆಯ ಸಾಲಗಳನ್ನು ಬರೆದು ಇನ್ನೊಂದು ಪೇಜ್ ನಲ್ಲಿ ಮುದ್ರಣ ಮಾಡಿಸಿದ್ದಾರೆ.‌. ಸ್ನೇಹಿತರೆ ಇದರಿಂದಾನೆ ತಿಳಿಯುತ್ತದೆ ಅಲ್ಲವೇ ಈ ತಂದೆ ತನ್ನ ಮಗಳ ಮೇಲೆ ಎಷ್ಟೊಂದು ಪ್ರೀತಿ ಇಟ್ಟಿದ್ದರು ಎಂದು.. ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.. ತಂದೆಯು ಮಾಡಿಸಿದ ಈ ಲಗ್ನ ಪತ್ರಿಕೆಯನ್ನು ನೋಡಿದ ಮಗಳು ಸಂತೋಷದ ಕಣ್ಣೀರಿನಲ್ಲಿ ಮುಳುಗಿ ತಂದೆಯನ್ನು ಅಪ್ಪಿಕೊಳ್ಳುತ್ತಾರೆ.. ಎಳೇಳು ಜನಮದಲ್ಲೂ ನೀವೆ ನನ್ನ ತಂದೆಯಾಗಬೆಕೆಂದು ಹೇಳುತ್ತಾರೆ..

ನಾವು ತಂದೆಯ ಬಗ್ಗೆ ಎಷ್ಟು ಬಾರಿ ಯೋಚನೆ ಮಾಡುತ್ತೆವೋ ಗೊತ್ತಿಲ್ಲ ಆದರೆ ಅವರು ನಮ್ಮ ಬಗ್ಗೆ ಪ್ರತಿಕ್ಷಣ ಆಲೋಚನೆ ಮಾಡುತ್ತಿರುತ್ತಾರೆ.. ನಮ್ಮ ಬದುಕಿಗಾಗಿ ಬೇರೆಯವರಲ್ಲಿ ಕೈ ಮುಗಿಯಲು ಸಹ ಸಿದ್ದವಾಗಿರುತ್ತಾರೆ.. ಇನ್ನೂ ತಂದೆ ಮಗಳನ್ನು ಬೇರೆಯ ಮನೆಗೆ ಕಳೆಸಿಕೊಡುವ ಸಮಯದಲ್ಲಿ ಆತನಿಗೆ ಎಲ್ಲವನ್ನು ಕಳೆದುಕೊಳ್ಳವಂತಾಗುತ್ತದೆ.. ಏಕೆಂದರೆ ಮಗಳೇ ಅವರಿಗೆ ನೆಮ್ಮದಿ, ಜೀವ ಆಗಿರುತ್ತದೆ.. ಇನ್ನೂ ಕೆಲವರು ಹೆಣ್ಣು ಮಕ್ಕಳೇ ಬೇಡ ಎಂದು ಮಾಡಬರಾದನ್ನೆಲ್ಲಾ ಮಾಡುತ್ತಿರುತ್ತಾರೆ.. ಅಂತಹವರು ನರಸಿಂಹ ಆಚಾರಿವರನ್ನು ನೋಡಿ ಕಲಿಯಬೇಕು..