ನಮಸ್ತೆ ಸ್ನೇಹಿತರೆ, ಚೈತ್ರದ ಪ್ರೇಮಾಂಜಲಿ ಶೃಂಗಾರ ಕಾವ್ಯ ಎಂಬ ಚಿತ್ರಗಳ ಮೂಲಕ ರಘುವೀರ್ ಎಂಬ ನಾಯಕ ಗಾಂಧಿ ನಗರದಲ್ಲಿ ಸಂಚಲನ ಮೂಡಿಸಿದ್ದು ಈಗ ಇತಿಹಾಸ, ಘಟಾನು ಘಟಿ ಹೀರೋಗಳು ಮಿಂಚುತ್ತಿದ್ದ ಸಮಯದಲ್ಲಿ ಚಿತ್ರರಂಗ ಪ್ರವೇಶಿಸಿದ ರಘುವೀರ್ ಯಾರು ನಿರೀಕ್ಷೆ ಮಾಡದ ರೀತಿ ಗೆದ್ದು ಬೀಗಿದ್ದರು.. ಹೀಯಾಳಿಸಿದವರ ಮುಂದೆ ದೊಡ್ಡ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡು ಅಚ್ಚರಿಯಾಗಿ ನಿಂತರು. ಶ್ರೀಮಂತ ಮನೆತನದಲ್ಲಿ ಹುಟ್ಟಿದರು ಎಲ್ಲರಿಂದ ದೂರ ಉಳಿದು ಬದುಕಿದರು. ಸ್ನೇಹಿತರು ತನ್ನವರು ಎನಿಸಿಕೊಂಡವರು ಹಣಕ್ಕಾಗಿ ಮೋಜು ಮಸ್ತಿಗಾಗಿ ತನ್ನೊಂದಿಗೆ ಬಂದ್ರು..

ಆದರೆ ಕಷ್ಟದ ಸಮಯದಲ್ಲಿ ಯಾರು ನನ್ನ ಜೊತೆ ನಿಲ್ಲಲಿಲ್ಲ ಎಂದು ರಘುವೀರ್ ಹೇಳಿಕೊಂಡಿದ್ದರು.. ರಘುವೀರ್ ಅಗಲಿ 7 ವರ್ಷಗಳೇ ಕಳೆದಿವೆ. ರಘುವೀರ್ ಅವರ ಮೊದಲ ಪತ್ನಿ ಸಿಂಧೂ ಅವರಿಗೆ ಒಬ್ಬ ಮಗಳಿದ್ದಾಳೆ, ತಂದೆ ತಾಯಿಯನ್ನ ಕಳೆದುಕೊಂಡ ಇವರ ಮಗಳು ಈಗ ಹೇಗಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಗೊತ್ತಾ? ರಘುವೀರ್ ಅವರ ಜೀವನದಲ್ಲಿ ನಡೆದ ಕೆಲವು ಘ’ಟನೆಗಳಿಂದ ದು’ರಂತ ನಾಯಕನಾಗಿ ಉಳಿದು ಬಿಟ್ರು.. ನಟಿ ಸಿಂಧೂ ಜೊತೆ ಮದುವೆ, ತಂದೆ ಜೊತೆ ಭಿನ್ನಾಭಿಪ್ರಾಯ, ಸಿಂಧೂ ಸಾ’ವು..

ಸಿನಿಮಾಗಳ ಸೋಲಿನಿಂದ ಬಹಳ ನೋವು ಅನುಭವಿಸಿದರು. ಇಂತಹ ಸಂದರ್ಭದಲ್ಲಿ ರಘುವೀರ್ ಅವರ ಕೈ ಹಿಡಿದಿದ್ದು ಗೌರಿ.. ಹೌದು ಮೊದಲ ಪತ್ನಿ ನಿ’ಧನದ ಬಳಿಕ ಗೌರಿ ಜೊತೆ ಮದುವೆಯಾದ ರಘುವೀರ್ ಗೆ ಮಗಳು ಸಹ ಇದ್ದಾರೆ. ಈ ಮಗಳೆ ಹೇಳಿದಂತೆ ರಘುವೀರ್ ಹಾಗು ಸಿಂಧೂ ದಂಪತಿಗೆ ಒಬ್ಬ ಹೆಣ್ಣು ಮಗಳಿದ್ದಳು.. ಮೂಲಗಳ ಪ್ರಕಾರ ಇವರು ಚೈನ್ನೈನಲ್ಲಿ ಸಿಂಧೂ ಅವರ ತಂದೆ ತಾಯಿ ಕುಟುಂಬದ ಜೊತೆ ಇದ್ದಾರೆ. ಸಿಂಧೂ ಅವರ ಮಗಳ ಪೊಟೊ ಗೌಪ್ಯವಾಗಿದ್ದು ಹೆಚ್ಚಿನ ಮಾಹಿತಿ ತಿಳಿದಿಲ್ಲ.. ಇನ್ನೂ ಗೌರಿ ಅವರ ಮಗಳ ಹೆಸರು ಮೋಕ್ಷ, ಮೋಕ್ಷ ಈಗ ತಾಯಿಯ ಜೊತೆ ಬೆಂಗಳೂರಿನ ಬಿಬಿಎಮ್ ಲೇಔಟ್ ನಲ್ಲಿ ಇದ್ದಾರೆ. ಮೋಕ್ಷ ಈಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ.. ಇನ್ನೂ ದು’ರಂತ ನಾಯಕ ರಘುವೀರ್ ಬಗ್ಗೆ ನೀವು ಏನು ಹೇಳಲು ಇಷ್ಟಪಡುತ್ತೀರಾ.