Advertisements

ಕನ್ನಡದ ಈ ನಟಿಗೆ ಮಾತು ಬರಲ್ಲ, ಕಿವಿ ಕೇಳಿಸಲ್ಲ.. ಈ ನಟಿ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಮ್ಮ ಭಾವನೆಗಳನ್ನು ಹೇಳಬೇಕು ಅಂದರೆ ಮಾತು ಬರಬೇಕು.. ಬೇರೆಯವರ ಭಾವನೆಗಳನ್ನು ಕೇಳಬೇಕು ಅಂದರೆ ನಮಗೆ ಕಿವಿ ಕೇಳಿಸಬೇಕು. ಇವು ಎರಡು ಇಲ್ಲಾ ಅಂದರೆ ಜೀವನ ಹೇಗಿರುತ್ತೆ ಎಂದು ಊಹೆ ಮಾಡಿಕೊಳ್ಳಲು ಕಷ್ಟ ಆಗುತ್ತದೆ.. ಆದರೆ ಈ ಹುಡುಗಿ ತನಗೆ ಮಾತು ಬರದಿದ್ದರೂ, ಕಿವಿ ಕೇಳಿಸದಿದ್ದರೂ ನಟಿಯಾಗುವ ಕನಸನ್ನು ಕಂಡರು. ನಂತರ ಆಗಿದ್ದೇನು? ಆ ನಟಿ ಯಾರು ಎಂದು ನೋಡೊಣ ಬನ್ನಿ.. ಮಾತು ಬರದಿದ್ದರು ಕಿವಿ ಕೇಳಿಸದಿದ್ದರು ಜೀವನವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ಈ ನಟಿಯ ಹೆಸರು ಅಭಿನಯ. ಕನ್ನಡದ ಹುಡುಗರು ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ತಂಗಿಯಾಗಿ, ಶ್ರೀನಗರ ಕಿಟ್ಟಿಗೆ ಪ್ರೇಯಸಿಯಾಗಿ ಕಾಣಿಸಿಕೊಂಡು ತಮ್ಮ ಅದ್ಬುತ ನಟನೆಯ ಮೂಲಕ ಎಲ್ಲರನ್ನು ಮೂಖ ವಿಸ್ಮಿತರನ್ನಾಗಿ ಮಾಡಿದ ನಟಿ..

Advertisements

ನಟಿ ಅಭಿನಯ ಹುಟ್ಟಿದ ಮೂರು ತಿಂಗಳಿಗೆ ಕೇಳುವ ಹಾಗೂ ಮಾತನಾಡುವ ಶಕ್ತಿಯನ್ನು ಕಳೆದುಕೊಂಡರು. ಆನಂತರ ಪ್ರತಿದಿನ ಅಭಿನಯ ಜೀವನ ಕಷ್ಟವಾಗಿ ಮಾರ್ಪಟ್ಟಿತು.. ಟೀವಿಯಲ್ಲಿ ಸಿನಿಮಾ ನೋಡುತ್ತಿದ್ದ ಅಭಿನಯ ಏನು ಅರ್ಥವಾಗದೇ ನೊಂದುಕೊಳ್ಳುತ್ತಿದ್ದರು. ಹಾಗ ಮಾತುಗಳು ಮಗಳಿಗೆ ಅರ್ಥವಾಗುವ ರೀತಿ ಪ್ರತಿದಿನ ಟ್ರೈನಿಂಗ್ ಕೊಟ್ಟ ತಂದೆ ಆನಂದ್ ವರ್ಮಾ ಅವರು ಕೊನೆಗೆ ಅದರಲ್ಲಿ ಸಕ್ಸಸ್ ಆದರು.. ಬೆಳೆಯುತ್ತಿದ್ದಂತೆ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅಭಿನಯ ಅವರನ್ನು ನೋಡಿ ಮಗಳನ್ನು ನಟಿ ಮಾಡಬೇಕು ಎಂದು ಮೊದಲು ಮಾಡೆಲಿಂಗ್ ಗೆ ಕಳುಹಿಸಿದರು ತಂದೆ ಆನಂದ್ ವರ್ಮ.

ಆನಂತರ ಅಭಿನಯ ಸ್ಥಿತಿಯನ್ನು ಕಂಡು ಯಾರು ಕೂಡ ಸಿನಿಮಾಗಳಲ್ಲಿ ಅವಕಾಶ ಕೊಡಲು ಮುಂದೆ ಬರಲಿಲ್ಲ.. ಕೊನೆಗೆ ಅಭಿನಯ ಅವರ ನಟನಾ ಕಲೆಯನ್ನು ನೋಡಿದ ನಿರ್ದೇಶಕ ನಾಡೊಡಿಗಲ್ ಎಂಬ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಆ ಸಿನಿಮಾ ಕನ್ನಡದಲ್ಲಿ ಹುಡುಗರು, ತೆಲುಗಿನಲ್ಲಿ ಶಂಬೋ ಶಿವ ಶಂಬೋ ರಿಮೇಕ್ ಆಯಿರು.. ಈ ಸಿನಿಮಾ ನಟಿ ಅಭಿನಯ ಅವರಿಗೆ ಒಳ್ಳೆಯ ಹೆಸರಿನ ಜೊತೆ ಅವಕಾಶಗಳನ್ನು, ಅವಾರ್ಡ್ ಗಳನ್ನು ತಂದು ಕೊಟ್ಟಿತು.

ಈಗ ಸುಮಾರು 30 ಚಿತ್ರಗಳಲ್ಲಿ ನಟಿಸಿದ್ದಾರೆ ನಟಿ ಅಭಿನಯ.. ಮಾತು ಬರದ ಮಗಳ ಬಗ್ಗೆ ಪ್ರತೀ ಕ್ಷಣ ಅಲೋಚನೆ ಮಾಡುತ್ತಿದ್ದ ತಂದೆ ಆನಂದ ವರ್ಮಾ ಅವರು ಕತ್ತಲಾಗಿದ್ದ ಅಭಿನಯ ಜೀವನದಲ್ಲಿ ಹೊಸ ಬೆಳಕನ್ನು ಮೂಡಿಸಿದರು. ಮಗಳಿಗೆ ಹೊಸ ಪ್ರಪಂಚವನ್ನು ಸೃಷ್ಟಿಸಿದರು.. ಅಷ್ಟೇ ಅಲ್ಲದೇ ನಟಿಯಾಗುವಂತೆ ಮಾಡಿದರು. ಜೀವನವನ್ನು‌ ಚಾಲೆಂಜಿಂಗ್ ಆಗಿ ತೆಗೆದುಕೊಂಡ ಅಭಿನಯ, ಮಗಳಿಗೆ ಬದುಕನ್ನು ರೂಪಿಸಿದ ತಂದೆಯ ಪ್ರೀತಿಯ ಬಗ್ಗೆ ನೀವೇನ್ ಹೇಳ್ತೀರಾ..