Advertisements

ಎರಡು ರಾಜ್ಯಗಳ ಗಡಿಯ ನಡುವೆ ಇದೆ ಈ ವಿಚಿತ್ರ ರೈಲ್ವೆ ಸ್ಟೇಷನ್ !ಯಾವ ರೀತಿ ಇದೆ ಗೊತ್ತಾ ಇದು ?

Kannada Mahiti

ವಿಚಿತ್ರವೆಂದರು ನಿಜ. ಈ ರೈಲು ನಿಲ್ದಾಣ ಎರಡು ರಾಜ್ಯಗಳ ಗಡಿಯನ್ನು ಅಂಚಿಕೊಳ್ಳುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಬರುವ ರೈಲ್ವೆ ಸ್ಟೇಷನ್ ಇದಾಗಿದೆ. ಮಹಾರಾಷ್ಟ್ರದ ನದೂರಬಾದ್ ಜಿಲ್ಲೆಯಲ್ಲಿರುವ ಈ ಸ್ಟೇಷನ್ ಹೆಸರು, ನವಾಪುರ್ ರೈಲ್ವೆ ನಿಲ್ದಾಣ ಎಂದು. ಸೂರತ್ ಮತ್ತು ಬೂಸಾವಲ್ ನಡುವಿನ ಮಾರ್ಗದಲ್ಲಿ ಈ ಸ್ಟೇಷನ್ ಬರುತ್ತದೆ.

Advertisements

ಇನ್ನು ಈ ರೈಲ್ವೆ ಸ್ಟೇಷನ್ ನಲ್ಲಿರುವ ಟಿಕೀಟ್ ಕೌಂಟರ್ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದ ಪ್ರದೇಶ ಆಗಿದೆ.ಇನ್ನು ಈ ಸ್ಟೇಷನ್ ನಲ್ಲಿರುವ ಪ್ಲೇಟ್ ಫಾರ್ಮ್ ಗುಜರಾತ್ ರಾಜ್ಯಕ್ಕೆ ಒಳಪಟ್ಟ ಪ್ರದೇಶ. ಇನ್ನು ಈ ರೈಲ್ವೆ ಸ್ಟೇಷನ್ ನಿರ್ಮಾಣ ಮಾಡುವ ಸಮಯದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಂಗಡಣೆ ಆಗಿರಲಿಲ್ಲ. ಆಗಿನ ಕಾಲಕ್ಕೆ ಈ ಪ್ರದೇಶ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದಾಗಿತ್ತು.

ಭಾಷಾವಾರು ವಿಂಗಡಣೆ ಸಮಯದಲ್ಲಿ ಇದು ಎರಡು ರಾಜ್ಯಗಳ ಭೂಪ್ರದೇಶಗಳಾಗಿ ವಿಂಗಡಣೆಯಾಯಿತು. ಆಗ ನವಾಪುರ್ ರೈಲ್ವೆ ಸ್ಟೇಷನ್ ಎರಡು ರಾಜ್ಯಗಳ ನಡುವಿನ ಭೂಪ್ರದೇಶವಾಯಿತು. ಈಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..