ಶರದೃತುವಿನ ನವ ರಾತ್ರಿಗಳು ದೇವಿಯನ್ನು ಆರಾಧಿಸುವುದರಿಂದ ಪುಣ್ಯ ಫಲ ದೊರೆಯುತ್ತದೆ. ಈ ದಿನದಲ್ಲಿ ದೇವಿ ಅಪಾರ ಶಕ್ತಿ ಶಾಲಿಯಾಗಿರುತ್ತಾಳೆ. ದುಷ್ಟರ ಶಿಕ್ಷೆಗೆ ಇದು ಅತ್ಯಂತ ಸಕಾಲ. ನಮ್ಮನ್ನು ನಾವು ಆಂತರಿಕವಾಗಿ ಶಕ್ತಿ ಶಾಲಿಯಾಗಿ ಮಾಡಿಕೊಳ್ಳುವುದಕ್ಕೂ ಇದು ಒಳ್ಳೆಯ ಸಮಯ. ಆದರೆ ಎಲ್ಲರಿಗೂ ಈ ಶರನವ ರಾತ್ರಿಯನ್ನು ಮನೆಯಲ್ಲಿ ಆಚರಿಸಲು ಸಾಧ್ಯವಾಗದೇ ಇರಬಹುದು. ಕೆಲವರ ಮನೆಗಳಲ್ಲಿ ಈ ಸಂಪ್ರದಾಯ ಇರದೇ ಇರಬಹುದು. ಆದರೆ ನವರಾತ್ರಿಯ ಪೂಜೆ ಮಾಡಿದಷ್ಟೇ ಪುಣ್ಯ ಫಲ ಪಡೆಯಲು, ದೇವಿಯ ಕೃಪೆಗೆ ಪಾತ್ರವಾಗಲು ಹೀಗೆ ಮಾಡಬಹುದು..

ಅದೇನೆಂದರೆ ಆಯುಧ ಪೂಜೆ ಅಥವಾ ನವಮಿಯಂದು ನಿಮ್ಮ ದೇವರ ಕೋಣೆಯಲ್ಲಿ ಒಂದು ಕಳಸವನ್ನು ಪ್ರತಿಷ್ಟಾಪಿಸಿ ದುಗಾ೯ದೇವಿ ಅಥವಾ ಯಾವುದೇ ಶಕ್ತಿ ದೇವತೆಯನ್ನು ಭಕ್ತಿಯಿಂದ ಪೂಜಿಸಿ, ನಿಮಗೆ ತಿಳಿದಿರುವ ಮಂತ್ರಗಳನ್ನು ದೇವಿಯ ಮುಂದೆ ಭಕ್ತಿಯಿಂದ ಹೇಳಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಡೆಯನ್ನು ಇಡಿ. ಆದಷ್ಟು ಸಿಹಿ ಪದಾಥ೯ ವನ್ನು ನೈವೇದ್ಯಕ್ಕೆ ಇಡಿ. ಪೂಜೆಯ ಬಳಿಕ ನಿಮಗೆ ಅನುಕೂಲವಾಗುವ ಸಮೀಪದ ದೇಗುಲಕ್ಕೆ ಹೋಗಿ ನಿಮ್ಮ ಹಾಗು ನಿಮ್ಮ ಕುಟುಂಬದವರ ಹೆಸರಿನಲ್ಲಿ ಪೂಜೆ ಮಾಡಿಸಿ. ಇದರಿಂದ ಬಹಳಷ್ಟು ಒಳ್ಳೆಯದಾಗುತ್ತದೆ.

ಆಂತರಿಕವಾಗಿ ಶಕ್ತಿಯನ್ನು ಪಡೆಯಲು ನವರಾತ್ರಿಯ ಯಾವುದೇ ದಿನ ದೇವಿಯನ್ನು ಗಾಡವಾಗಿ ಧ್ಯಾನಿಸಿ . ಮತ್ತು ಭಕ್ತಿಯಿಂದ ನಿಮ್ಮ ಕೋರಿಕೆ ಸಲ್ಲಿಸಿ. ಸಕಲವೂ ಸುಲಭವಾಗಿ ನೆರವೇರುತ್ತದೆ. ಹಾಗೆ ಶ’ತ್ರು ಭಾದೆಯಿದ್ದರೂ ದೇವಿಯ ಮುಂದೆ ಕುಳಿತು ಪ್ರಾಥ್ರ೯ನೆ ಸಲ್ಲಿಸಿದರೆ ಸಾಕು. ಶ’ತೃ ಕಾಟವು ನಾ’ಶವಾಗುತ್ತದೆ. ನೀವು ಎಷ್ಟ ಭಕ್ತಿಯಿಂದ ಸಮರ್ಪಣಾ ಭಾವದಿಂದ ದೇವಿಯನ್ನು ಪೂಜಿಸುತ್ತೀರಾ ಎಂಬುದಷ್ಟೇ ಮುಖ್ಯವಾಗುತ್ತದೆ. ಎಷ್ಟು ಆಡಂಬರದಿಂದ ಹಬ್ಬ ಆಚರಿಸುತ್ತೀರ ಎಂದಲ್ಲ. ನಿಮಗೆ ಅನುಕೂಲವಿದ್ದರೆ ಎಷ್ಟು ವೈಭವದಿಂದಲೂ ಮಾಡಬಹುದು. ಆದರೆ ಭಕ್ತಿ ಅಷ್ಟೇ ಮುಖ್ಯ.
ದುರ್ಗಾ ದೇವಿಯ ಮಂತ್ರ ಉಚ್ಚರಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ದೇವಿಗೆ ಕರ್ಪೂರದ ಆರತಿ ಅತ್ಯಂತ ಶ್ರೇಷ್ಠ . ಒಂಭತ್ತು ದಿನ ಪೂಜೆ ಮಾಡಲು ಸಾಧ್ಯವಾಗದೇ ಇದ್ದರೂ. ಹೀಗೆ ಕೊನೆ ದಿನ ದೇವಿಯನ್ನು ಆರಾಧಿಸುವುದರಿಂದ ಮಾತೆಯ ಕೃಪೆಗೆ ಪಾತ್ರರಾಗಿ ಇಷ್ಟಾರ್ಥ ಸಿದ್ಧಿ ಮಾಡಿಕೊಳ್ಳ ಬಹುದು.