Advertisements

ಗಜ ಚಿತ್ರದ ನಟಿ ಈಗ ಹೇಗಿದ್ದಾರೆ, ಏನು ಮಾಡ್ತಿದಾರೆ ಗೊತ್ತಾ? ಇವರ ಮಗ ಕೂಡ ನಟ..

Cinema

ನಮಸ್ತೆ ಸ್ನೇಹಿತರೆ, ನವ್ಯ ನಾಯರ್ ದಕ್ಷಿಣ ಭಾರತದ ಸಿನಿಮಾ ರಂಗದ ಖ್ಯಾತ ನಟಿ, ತೆಲುಗು ಹೊರತು ಪಡಿಸಿ ಮಲಯಾಳಂ ತಮಿಳು ಕನ್ನಡ ಎಲ್ಲಾ ಬಾಷೆ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಈ ಸಹಜ ಸುಂದರ ನಟಿ. ಮಲಯಾಳಂ ನಟಿಯಾಗಿರುವ ನವ್ಯ ನಾಯರ್ ಅವರು ಸುಮಾರು 50ಕ್ಕು ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.. 2001 ರಲ್ಲಿ ಇಷ್ಟಂ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇನ್ನೂ 2007 ರಲ್ಲಿ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.

[widget id=”custom_html-3″]

Advertisements

ಇದಾದ ನಂತರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಯಲ್ಲಿ ನಮ್ಮ ಯಜಮಾನ್ರು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು.. ಈ ಚಿತ್ರ 2009 ರಲ್ಲಿ ತೆರೆಕಂಡಿತ್ತು. ಮತ್ತೆ ಅದೇ ವರ್ಷದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಭಾಗ್ಯಾದ ಬಳೆಗಾರ ಚಿತ್ರದಲ್ಲಿ ನಟಿಸಿದರು.. ಇನ್ನೂ ಇವರು 2014 ರಲ್ಲಿ ತೆರೆಕಂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದೃಶ್ಯ ಸಿನಿಮಾದಲ್ಲಿ ಮನೋಜ್ಞ ಅಭಿನಯ ಮೂಲಕ ಎಲ್ಲರ ಗಮನ ಸೆಳೆದರು. ಈ ಸಿನಿಮಾ ಇವರಿಗೆ ತುಂಬಾ ಹೆಸರು ತಂದುಕೊಟ್ಟಿತು.. ಇದಾದ ನಂತರದಲ್ಲಿ ನವ್ಯ ನಾಯರ್ ಸಿನಿಮಾಗಳಲ್ಲಿ ನಟಿಸಲಿಲ್ಲ.

[widget id=”custom_html-3″]

ಇನ್ನೂ ನವ್ಯಾ ನಾಯರ್ ಅವರು 2010 ರಲ್ಲಿ ಮುಂಬೈ ಮೂಲದ ಉದ್ಯಮಿ ಸಂತೋಷ್ ಮೆನನ್ ಎಂಬುವವರನ್ನು ಮದುವೆಯಾದರು.. ಇನ್ನೂ ಈ ದಂಪತಿಗೆ ಸಾಯಿ ಕೃಷ್ಣ ಎಂಬ ಮುದ್ದಾದ ಗಂಡು ಮಗು ಜನಿಸಿತು. ಈಗ ನವ್ಯಾ ನಾಯರ್ ಮಗ ಕೂಡ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾನೆ.. ನವ್ಯಾ ನಾಯರ್ ಪ್ರಸ್ತುತ ನಟಿಸುತ್ತಿರುವ ಮಲಯಾಳಂ ಚಿತ್ರ ಒಂದರಲ್ಲಿ ನವ್ಯಾ ನಾಯರ್ ಅವರ ತೆರೆಯ ಮೇಲಿನ ಮಗನಿಗೆ ನವ್ಯಾ ನಾಯರ್ ಸ್ವಂತ ಮಗ ಡಬ್ಬಿಂಗ್ ನೀಡಿದ್ದಾರಂತೆ. ಈ ಮೂಲಕ ನವ್ಯಾ ನಾಯರ್ ಮಗ ಕೂಡ ಸಿನಿಮಾ ಲೋಕದಲ್ಲಿ ಆಕ್ಟೀವ್ ಆಗಿದ್ದಾರೆ.. ಸುಮಾರು ವರ್ಷಗಳ ನಂತರ ನವ್ಯಾ ನಾಯರ್ ಮತ್ತೆ ಮಲಯಾಳಂ ಚಿತ್ರ ಒಂದರಲ್ಲಿ ನಟಿಸುತ್ತಿರುವುದು ವಿಶೇಷ ಎನ್ನಬಹುದು.