Advertisements

ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡಲಿದ್ದಾರಾ ನಟ ಪ್ರೇಮ್ ಪುತ್ರಿ ? ಈಗ ಹೇಗಿದ್ದಾರೆ ಗೊತ್ತಾ ಸ್ಟಾರ್ ನಟನ ಮಗಳು !

Cinema

ನೆನಪಿರಲಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಟ ಪ್ರೇಮ್ ಅನೇಕ ಚಿತ್ರಗಳಲ್ಲಿ ರೊಮ್ಯಾಂಟಿಕ್ ನಟನಾಗಿ ಮಿಂಚಿದ್ದಾರೆ. ಮನೆಯವರ ವಿರೋಧದ ನಡುವೆಯೂ ಜ್ಯೋತಿ ಎಂಬುವವರನ್ನ ಮೂರು ವರ್ಷ ಪ್ರೀತಿಸಿ ಓಡಿಹೋಗಿ ಮದುವೆಯಾದವರು ಪ್ರೇಮ್. ಇನ್ನು ನಾಚಿಕೆ ಸ್ವಭಾವದವರಾಗಿರುವ ಪ್ರೇಮ್ ಅವರ ಪತ್ನಿ ಜ್ಯೋತಿ ಮೀಡಿಯಾಗಳ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ನಟ ಪ್ರೇಮ್ ಗೆ ಕಾಲೇಜಿಗೆ ಹೋಗುತ್ತಿರುವ ಮಗಳಿದ್ದಾಳೆ ಎಂದರೆ ನಿಮಗೆ ನಂಬೋಕೆ ಸಾಧ್ಯವೇ ಇಲ್ಲ. ಹೌದು, ನಟ ಪ್ರೇಮ್ ಎರಡು ಮಕ್ಕಳ ತಂದೆ ಕೂಡ. ಸ್ಯಾಂಡಲ್ವುಡ್ ನ ಈ ಮುದ್ದಾದ ಜೋಡಿ ಮದುವೆಯಾಗಿ ಹತ್ತೊಂಬತ್ತು ವರ್ಷವಾಗಿದೆ.

Advertisements

ಇನ್ನು ನಾಯಕ ನಟನಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುವುದಕ್ಕೂ ಮುಂಚೆ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರು ಈ ನಟ. ಕಾಲೇಜಿನಲ್ಲಿ ಓದುತ್ತಿರುವ ಪ್ರೇಮ್ ಅವರ ಮಗಳ ಹೆಸರು ಅಮೃತಾ ಎಂದು. ಎರಡನೇ ವರ್ಷದ ಇಂಜಿನಿಯರಿಂಗ್ ಪದವಿ ಮಾಡುತ್ತಿರುವ ಅಮೃತಾಳನ್ನ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡಿಸುವ ಎಲ್ಲಾ ಸಿದ್ದತೆಗಳು ನಡೆದಿವೆ. ಹೌದು, ಪ್ರೇಮ್ ಪುತ್ರಿಯ ಫೋಟೋಶೂಟ್ ಮಾಡಿಸಿದ್ದು ಅದ್ದೂರಿಯಾದ ಸೆಲ್ವಾರ್ ಸೀರೆ ಉಟ್ಟು, ಜುಮಕಿ ಧರಿಸಿ ಫೋಟೋಗಳಲ್ಲಿ ಮಿಂಚಿದ್ದಾರೆ ಅಮೃತಾ.

ಇನ್ನು ಕೆಲ ತಿಂಗುಳಗಳ ಹಿಂದಷ್ಟೇ ನಟ ಪ್ರೇಮ್ ಅವರು ತನ್ನ ಪುತ್ರಿ ಅಮೃತಾಳ ೧೮ನೇ ವರ್ಷದ ಹುಟ್ಟುಹಬ್ಬವನ್ನ ಕುಟುಂಬದ ಜೊತೆ ವಿಶೇಷವಾಗಿ ಆಚರಣೆ ಮಾಡಿದ್ದರು. ಇದೆ ಸಮಯದಲ್ಲಿ ಮಗಳಿಗಾಗಿ ತಾವೇ ಗಿಟಾರ್ ಕೂಡ ನುಡಿಸಿದ್ದರು ಪ್ರೇಮ್. ತನ್ನ ತಂದೆಯಂತೆ ತುಂಬಾ ಟ್ಯಾಲೆಂಟೆಡ್ ಆಗಿರುವ ಅಮೃತವರಿಗೆ ಓದುವುದರಲ್ಲಿ ತುಂಬಾ ಆಸಕ್ತಿ ಇದೆಯಂತೆ. ಈಗ ಎರಡನೇ ವರ್ಷದಲ್ಲಿ ಇಂಜಿನಿಯರಿಗ್ ಓದುತ್ತಿರುವ ಈಕೆ ಟಿಕ್ ಟಾಕ್ ಹಾಗೂ ಡಬ್ ಸ್ಮಾಷ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಇನ್ನು ತಂದೆ ತಾಯಿಗೂ ಕೂಡ ತನ್ನ ಮಗಳು ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಮಿಂಚಬೇಕು ಎಂಬ ಆಸೆ ಕೂಡ ಇದೆಯಂತೆ. ಆದರೆ ಈಗ ಫೋಟೋ ಶಾಟ್ ಮಾಡಿಸಿರುವುದು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುವುದಕ್ಕಾಗಿಯೇ ಎಂದು ಹೇಳಲಾಗಿದ್ದರೂ ಅಧಿಕೃತವಾಗಿ ಪ್ರೇಮ್ ಅವರು ಏನನ್ನು ಹೇಳಿಲ್ಲ. ಸದ್ಯಕ್ಕೆ ಕಾಲೇಜಿನಲ್ಲಿ ಓದುತ್ತಿರುವ ಅಮೃತಾ ಬಣ್ಣದ ಲೋಕಕ್ಕೆ ಕಾಲಿಡುವುದು ಅನುಮಾನ ಎಂದು ಹೇಳಲಾಗಿದ್ದು, ತನ್ನ ಪದವಿ ಮುಗಿದ ಮೇಲೆ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸ್ಯಾಂಡಲ್ವುಡ್ ಈ ಮುದ್ದಾದ ಕುಟುಂಬಕ್ಕೆ ಆ ದೇವರು ಒಳ್ಳೆಯದು ಮಾಡಲಿ.