Advertisements

ಗೃಹಪ್ರವೇಶಕ್ಕೆ ಕರೆದು ತನ್ನ ನೆಚ್ಚಿನ ನಟನಿಗೆ ಸರ್ಪ್ರೈಸ್ ಕೊಟ್ಟ ಅಭಿಮಾನಿ ! ಇದಪ್ಪಾ ಅಭಿಮಾನ ಅಂದ್ರೆ..

Uncategorized

ಸ್ನೇಹಿತರೇ, ತಮ್ಮ ನೆಚ್ಚಿನ ನಟರ ಮೇಲೆ ಅಭಿಮಾನ ಇರಬೇಕೇ ಹೊರತು ಅಂಧಾಭಿಮಾನ ಇರಬಾರದು. ನೆನ್ನೆ ಮೊನ್ನೆ ನಡೆದ ಘ’ಟನೆಗಳ ಬಗ್ಗೆ ನೀವೆಲ್ಲಾ ನೋಡಿದ್ದೀರಿ..ಕೆಲ ಅಭಿಮಾನಿಗಳು ಹಿರಿಯ ನಟನೊಬ್ಬನ ಜೊತೆಗೆ ಹೇಗೆಲ್ಲಾ ನಡೆದುಕೊಂಡರು ಅಂತ..ಆದರೆ ಇಲ್ಲೊಬ್ಬ ಅಭಿಮಾನಿ ಇದ್ದಾರೆ, ತಮ್ಮ ನೆಚ್ಚಿನ ನಟನನ್ನ ತಮ್ಮ ಮನೆಯ ಗೃಹಪ್ರವೇಶಕ್ಕೆ ಕರೆದು ಅವರಿಗೆ ಗೊತ್ತಿಲದೆಯೇ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ. ಹೌದು, ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಅವರ ಅಭಿಮಾನಿ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದ ವೇಳೆ ಈ ರೀತಿಯ ಸರ್ಪ್ರೈಸ್ ನೀಡಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

Advertisements

ನಟ ಪ್ರೇಮ್ ಅವರ ಅಭಿಮಾನಿಯೊಬ್ಬರು ಹೊಸದಾದ ಮನೆಯೊಂದನ್ನ ಕಟ್ಟಿಸಿದ್ದು ಗೃಹಪ್ರವೇಶ ಸಮಾರಂಭಕ್ಕೆ ತಮ್ಮ ನೆಚ್ಚಿನ ನಟನಿಗೆ ಆಹ್ವಾನ ನೀಡಿದ್ದಾರೆ. ನಟ ಪ್ರೇಮ್ ಅವರು ಕೂಡ ತನ್ನ ನೆಚ್ಚಿನ ಅಭಿಮಾನಿಯ ಗೃಹಪ್ರವೇಶದ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇದೆ ವೇಳೆ ಅಭಿಮಾನಿ ನೂತನವಾಗಿ ಕಟ್ಟಿಸಿರುವ ಮನೆಯಲ್ಲಿ ಹೋಂ ಥಿಯೇಟರ್ ಇದ್ದು, ತನ್ನ ಮನೆಯ ಗೃಹಪ್ರವೇಶದ ದಿನವೇ ನಟ ಪ್ರೇಮ್ ಅವರ ೨೫ನೇ ಸಿನಿಮಾದ ಟೀಸರ್ ನ್ನ ಪ್ರದರ್ಶನ ಮಾಡುವ ಮೂಲಕ ತಮ್ಮ ಅಭಿಮಾನವನ್ನ ವ್ಯಕ್ತಪಡಿಸಿದ್ದಾರೆ ಆ ಅಭಿಮಾನಿ. ಹೌದು, ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಅವರು ತಮ್ಮ ೨೫ನೇ ಚಿತವಾದ್ರ ‘ಪ್ರೇಮಮ್ ಪೂಜ್ಯಮ್’ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ಈ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಇದೆ ಚಿತ್ರದ ಟೀಸರ್ ನ್ನ ಆ ಅಭಿಮಾನಿ ತನ್ನ ನೂತನ ಮನೆಯ ಗೃಹಪ್ರವೇಶದ ಕಾರ್ಯಕ್ರಮದ ನಡುವೆ ತನ್ನ ನೆಚ್ಚಿನ ನಟನ ಎದುರಿನಲ್ಲಿ ಪ್ರದರ್ಶನ ಮಾಡಿದ್ದಾರೆ. ಇನ್ನು ತನ್ನ ಅಭಿಮಾನಿಯ ಅಭಿಮಾನ ಕಂಡು ಸಂತಸಗೊಂಡಿರುವ ನಟ ಪ್ರೇಮ್ ತನ್ನ ಅಭಿಮಾನಿಯೊಬ್ಬರ ನೂತನ ಮನೆಯ ಗೃಹಪ್ರವೇಶದ ಕಾರ್ಯಕ್ರಮಕ್ಕೆ ಹೋಗಿದ್ದಾಗ ನೂತನ ಮನೆಯಲ್ಲಿ ಪ್ರೇಮಮ್ ಪೂಜ್ಯಮ್ ಚಿತ್ರದ ಟೀಸರ್ ನೋಡಿದ ಕ್ಷಣ ರೋಮಾಂಚನವಾಗಿತ್ತು ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.