Advertisements

ಸ್ವೀಟ್ ಕೊಟ್ಟು ಪತಿಗೆ ಸಿಹಿ ಸುದ್ದಿ ಕೊಟ್ಟ ನಿವೇದಿತಾ! ಖುಷಿಯಲ್ಲಿ ಸಂಭ್ರಮಿಸಿದ ಚಂದನ್.. ನೋಡಿ

Cinema

ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿರುವ ನಿವೇದಿತಾರಿಗೆ ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 1.4 ಮಿಲಿಯನ್ ಫಾಲೋವರ್ಸ್ ಗಳಿಸಿದ್ದು ವಿಧವಿಧವಾದ ಫೋಟೋಶೂಟ್ ಗಳನ್ನು ಮಾಡಿಸಿ ತಮ್ಮ ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುತ್ತಾರೆ ನಿವೇದಿತಾ ಗೌಡ. ಹೌದು ಹಾಗೆಯೇ ಕೆಲವು ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ದು ಇತ್ತೀಚೆಗೆ ಚಂದನ್ ನಿವೇದಿತಾ ಇಬ್ಬರು ರಾಜಾ ರಾಣಿ ಶೋನಲ್ಲಿ ಭಾಗವಹಿಸಿದ್ದರು. ಈ ಶೋ ಮೂಲಕ ಇಬ್ಬರು ಕೂಡ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡರು. ಇನ್ಸ್ಟಾಗ್ರಾಮ್ ನಲ್ಲಿ ಬಹಳ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಸಾಕಷ್ಟು ಫೋಟೋಶೂಟ್ ಗಳಿಗೆ ಪೋಸ್ ನೀಡುತ್ತಿದ್ದು ಹಾಗೆಯೇ ಇನ್ಸ್ಟಾಗ್ರಾಮ್ ನಲ್ಲಿ ಅನೇಕ ರೀಲ್ಸ್ ಗಳನ್ನು ಕೂಡ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ನಿವೇದಿತಾ ಗೌಡ ಯೂಟ್ಯೂಬ್ ಚಾನೆಲ್ ಒಂದನ್ನು ಶುರು ಮಾಡಿ ಅದರ ಮೂಲಕ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

Advertisements

ಹೌದು ಗಂಡ ಚಂದನ್ ಶೆಟ್ಟಿ ಅವರಿಗೆ ಆಗಾಗ ಸರ್ಪ್ರೈಸ್ ಕೊಡುವ ನಿವೇದಿತಾ ಗೌಡ ರವರು ಇತ್ತೀಚೆಗೆ ಗಂಡನಿಗಾಗಿ ಒಂದು ಸ್ಪೆಷಲ್ ರೆಸಿಪಿ ಮಾಡಿದ್ದು ಅದನ್ನು ಗಂಡನಿಗೆ ಬಡಿಸಿದ್ದಾರೆ. ಹೌದು ನಿವೇದಿತಾ ಮಾಡಿದ್ದು ಕ್ಯಾರೆಟ್ ಹಲ್ವಾ. ಹಲ್ವಾ ಮಾಡಿ ಅದನ್ನು ಚಂದನ್ ಶೆಟ್ಟಿ ಅವರಿಗೆ ಬಡಿಸಿದ್ದು ನಿವೇದಿತಾ ಗೌಡ ಮಾಡಿದ ಹಲ್ವಾ ತಿಂದು ಚಂದನ್ ಸಹ ತುಂಬಾ ಸಂತೋಷಪಟ್ಟು ಹೇಳಿದ್ದೇನು ಗೊತ್ತಾ? ನನ್ನ ಹೆಂಡತಿ ನಿವೇದಿತಾ ಮಾಡಿರುವ ಕ್ಯಾರೆಟ್ ಹಲ್ವಾ ಎಲ್ಲಾಕ್ಕಿಂತ ಸ್ಪೆಷಲ್ ಆಗಿದ್ದು ಯಾರೂ ಕೂಡ ಇಷ್ಟು ಚನ್ನಾಗಿ ಹಲ್ವಾ ಮಾಡಲ್ಲ. ಎಲ್ಲಿಯೂ ಇಂತಹ ಅದ್ಭುತ ಹಲ್ವಾ ನಾನು ತಿಂದಿಲ್ಲ. ನಾನು ತುಂಬಾ ಲಕ್ಕಿ ಇಂತಹ ಹೆಂಡತಿ ನನಗೆ ಸಿಕ್ಕಿದ್ದರೆ ಎಂದು ಚಂದನ್ ಶೆಟ್ಟಿ ಅವರು ಕ್ಯಾರೆಟ್ ಹಲ್ವಾ ತಿಂದು ನಿವೇದಿತಾ ಗೌಡ ಅವರನ್ನು ಹಾಡಿ ಹೊಗಳಿದ್ದಾರೆ.

ಸಧ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಸ್ ಮೂಲಕ ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಆಗಾಗ ರೀಲ್ಸ್ ಮಾಡಿ ಪೋಸ್ಟ್ ಮಾಡುವ ನಿವೇದಿತಾ ಗೌಡ ರವರು ಇತ್ತೀಚಿಗೆ ತಾಯಿ ಮತ್ತು ಅಜ್ಜಿಯ ಜೊತೆ ಡ್ಯಾನ್ಸ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದರು. ಇನ್ನು ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ಕೆಲವು ಬಾರಿ ಟ್ರೋಲ್ ಆದರೂ ಕೂಡ ಅಭಿಮಾನಿಗಳು ನಿವೇದಿತಾ ಅವರ ಕೈ ಬಿಡುವುದಿಲ್ಲ. ಹೌದು ಮದುವೆ ನಂತರ ಬಹಳ ಕೂಲ್ ಆಗಿರುವ ನಿವೇದಿತಾ ಇನ್ನುಮುಂದೆ ಕೂಡ ಹೀಗೆ ಇರಲಿ ಎಂದು ಹಾರೈಸೋಣ.