Advertisements

ರೇಷನ್ ಕಾರ್ಡ್ ಬಂದ್, ಹೊಸ ಕಾರ್ಡ್ ಪಡೆಯಲು ಈ ಅರ್ಹತೆ ಇರಲೇಬೇಕು..

Kannada Mahiti

ನಮಸ್ತೇ ಸ್ನೇಹಿತರೆ, ಕಳೆದ ಎರಡು, ಮೂರು ವಾರಗಳಿಂದ BPL ಕಾರ್ಡ್ ದಾರರಿಗೆ ಕೆಲವು ಸಿಹಿ ಸುದ್ದಿಗಳ ಜೊತೆಗೆ ಕೆಲವು ಶಾ’ಕಿಂಗ್ ಸುದ್ದಿಗಳು ಕೂಡ ಬರುತ್ತಿದೆ.. ಹೌದು ಕೆಲವು ಕಡೆ ಇನ್ನು ಮುಂದೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ಸಿಗುವುದಿಲ್ಲ ಎಂದು ಹೇಳುತ್ತಿದ್ದರೆ‌. ಮತ್ತೊಂದು ಕಡೆ.. ಹಾಗೇನು ಆಗೋದಿಲ್ಲ ಉಚಿತ ಅಕ್ಕಿ ಸಿಗುತ್ತದೆ ಎಂದು ಹೇಳುತ್ತಾರೆ.. ಇದರ ಜೊತೆ ಇನ್ನೂ ಮುಂದೆ ರೇಷನ್ ಕಾರ್ಡ್ ಕೂಡ ಬಂದ್ ಆಗುತ್ತದೆ ಎನ್ನುವ ಸುದ್ದಿಗಳು ಸಹ ಬರುತ್ತಿದೆ. ಏನಿದು ನಿಜವಾಗಿಯೂ ರೇಷನ್ ಕಾರ್ಡ್ ಬಂದ್ ಆಗುತ್ತಾ.. ಯಾರಿಗೆ ಬಂದ್ ಆಗುತ್ತೆ? ಏನಿದರ ಸುದ್ದಿ ಎಂಬುದನ್ನು ತಿಳಿಯೋಣ.

Advertisements

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಕೊಡುತ್ತಿರುವ ಅಕ್ಕಿ.. ಸಂತೆಯಲ್ಲಿ ಮಾರಾಟವಾಗುತ್ತಿದೆ. ಇದನ್ನು ತಡೆಯಲು ಮುಂದೆ ಉಚಿತವಾಗಿ ಅಕ್ಕಿ ಕೊಡಬಾರದು ಎಂದು.. ಕೇಜಿ ಅಕ್ಕಿಗೆ 2 ರಿಂದ 3 ರೂಪಾಯಿ ಚಾರ್ಜ್ ವಿಧಿಸಬೇಕು ಅಂತ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈಗ ಕೊಡುತ್ತಿರುವ ಅಕ್ಕಿಯಿಂದ ಯಾವುದೇ ಪ್ರಯೋಜನ‌ವಿಲ್ಲ.. ಈಗಾಗಿ ಪೌಷ್ಟಿಕಾಂಶ ಇರುವ ಅಕ್ಕಿಯನ್ನು ಇನ್ನು ಮುಂದೆ ಕೊಡಲಾಗುತ್ತದೆ ಎಂದು ಗುಡ್ ನ್ಯೂಸ್ ಕೂಡ ಕೊಟ್ಟಿದ್ದಾರೆ. ಅಲ್ಲದೇ ಇದೀಗ ಬರೀ ಅಕ್ಕಿಯನ್ನು ಮಾತ್ರ ಕೊಡುವುದಿಲ್ಲ.. ಅಕ್ಕಿಯ ಜೊತೆಗೆ ಎಣ್ಣೆ, ಸಕ್ಕರೆ, ಗೋದಿ ಮತ್ತು ಕೋಳಿ ಮೊಟ್ಟೆಯನ್ನು ಕೊಡುವ ನಿರ್ದಾರವನ್ನ ಸರ್ಕಾರ ಮಾಡಿದೆ.

ಇದೆಲ್ಲಾ ನಿಜಕ್ಕೂ ಒಳ್ಳೆಯ ನಿರ್ಧಾರಗಳೇ.. ಇದರಿಂದ ಬಡವರಿಗೆ ನಿಜಕ್ಕೂ ಒಳ್ಳೆಯದಾಗುತ್ತದೆ. ಆದರೆ ಇದೆಲ್ಲದರ ನಡುವೆ ಅ’ಕ್ರಮವಾಗಿ ರೇಷನ್ ಕಾರ್ಡ್ ಹೊಂದಿರುವವರಿಗೆ ದೊಡ್ಡ ಶಾ’ಕ್ ಕೊಟ್ಟಿರುವ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ನ’ಕಲಿ ದಾಖಲೆಗಳನ್ನು ನೀಡಿ ಅ’ಕ್ರಮವಾಗಿ ಪಡೆದಿದ್ದಂತಹ ಸುಮಾರು 12 ಲಕ್ಷದ 47 ಸಾವಿರದ 151 ರೇಷನ್ ಕಾರ್ಡ್ ಗಳನ್ನು‌ ಇದೀಗ ಆಹಾರ ಇಲಾಖೆ ರದ್ದು ಗೊಳಿಸಿದೆ.. ಇದು ಬರೀ ಶಾಂಪಲ್ ಎಂದು ರಾಜ್ಯ ಸರ್ಕಾರ ತಿಳಿಸಿದ್ದು. ರಾಜ್ಯಾದ್ಯಂತ ಬರೀ12 ಲಕ್ಷಕ್ಕೂ ಹೆಚ್ಚು ಅ’ಕ್ರಮ ರೇಷನ್ ಕಾರ್ಡ್ ಮಾತ್ರವಲ್ಲ.. ಇನ್ನೂ ಸುಮಾರು ರೇಷನ್ ಕಾರ್ಡ್ ಹೊಂದಿದ್ದು ಕೂಡಲೇ ಒಂದು ವೇಳೆ ಈ ಹಿಂದೆ ನಕಲಿ ದಾಖಲೆ ಪತ್ರಗಳನ್ನು ನೀಡಿ ಅರ್ಥಿಕ ಸಬಲರು ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೆ.

ಸ್ವಯಂಪ್ರೇರಿತರಾಗಿ ತಾಲ್ಲೂಕು ಕಛೇರಿಗೆ ಕಾರ್ಡ್ ಗಳನ್ನು ಹಿಂತಿರುಗಿಸಬೇಕು.. ಒಂದು ವೇಳೆ ಕಾರ್ಡ್ ವಾಪಸ್ ನೀಡದೆ ಹೋದಲ್ಲಿ ಸರ್ಕಾರ ಪತ್ತೆ ಮಾಡಲಿದ್ದು, ಸಿಕ್ಕಿ ಹಾಕಿಕೊಂಡವರಿಗೆ ಪಡಿತರ ಪಡೆದ ದಿನದಿಂದ ಈ ದಿನದವರೆಗೆ ಎಷ್ಟು ಕೇಜಿ ಅಕ್ಕಿಯನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಹಾಕಿ. ಕೇಜಿಗೆ 35 ರೂಪಾಯಿಯಂತೆ ವಸೂಲಿ ಮಾಡುತ್ತಾರೆ.. ಈಗಾಗಿ ನೀವು ಅ’ಕ್ರಮವಾಗಿ ರೇಷನ್ ಕಾರ್ಡನ್ನು ಪಡೆದಿದ್ದರೆ.. ಕೂಡಲೇ ಹಿಂತಿರುಗಿಸಿ ಬಚಾವ್ ಆಗಿ. ಇಲ್ಲವಾದರೆ ಶಿ’ಕ್ಷೆ ಬೀಳುವುದು ಖಚಿತ. ನೀವೆನಂತೀರಾ ಸ್ನೇಹಿತರೆ ಕ್ರಿ’ಮಿನಲ್ ಕೇ’ಸ್ ಆಕುವ 35 ರೂಪಾಯಿನಂತೆ ಕೇಜಿಗೆ ವಸೂಲಿ ಮಾಡುವ ಸರ್ಕಾರದ ನಿರ್ದಾರ ಸರಿ ಇದಿಯಾ ಇಲ್ಲವಾ ಎಂದು ತಿಳಿಸಿ.