Advertisements

ಹೊಸದಾಗಿ ಮದ್ವೆಯಾದ ಈ ದಂಪತಿ ಹನಿಮೂನ್ ಗೆ ಹೋಗೋ ಬದ್ಲು ಮಾಡಿದ ಕೆಲಸ ಏನು ಗೊತ್ತಾ ?

Inspire

ನಮಸ್ತೇ ಸ್ನೇಹಿತರೇ, ಸಾಮಾನ್ಯವಾಗಿ ನವ ವಿವಾಹಿತರು ಊಟಿಯೋ, ಕಾಶ್ಮೀರವೋ ಅಥ್ವಾ ವಿದೇಶಕ್ಕೋ ಇಲ್ಲ ಇನ್ನ್ಯಾವುದೋ ತಮಗಿಷ್ಟವಾದ ಜಾಗಕ್ಕೆ ಹನಿಮೂನ್ ಗೆ ಹೋಗಲು ಇಷ್ಟಪಡುತ್ತಾರೆ. ಆದರೆ ಇಲ್ಲಿ ಹೊಸದಾಗಿ ಮದುವೆಯಾಗಿರುವ ನವ ದಂಪತಿಗಳು ಮಾಡಿರುವ ಕೆಲಸ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನವ ದಂಪತಿಗಳು ಮಾಡಿರುವ ಕೆಲಸಕ್ಕೆ, ಇವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ.

ಉಡುಪಿ ಜಿಲ್ಲೆಯವರಾಗಿರುವ ಮೂಲದ ಅನುದೀಪ್ ಹೆಗಡೆ ಮತ್ತು ಮಿನುಶಾ ಕಾಂಚನ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರು ಹಾಗೂ ಇವರ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೂಡಿ ಬೀಚ್ ಗಳನ್ನ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಪ್ರಕೃತಿಯ ಬಗ್ಗೆ ಸಾಕಷ್ಟು ಕಾಳಜಿಯನ್ನ ಹೊಂದಿರುವ ಅನುದೀಪ್ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್ ಆಗಿ ಕೆಲಸ ಮಾಡುತ್ತಿದ್ದು, ಯಾವುದೊ ಸ್ಥಳಕ್ಕೆ ಹನಿಮೂನ್ ಗಾಗಿ ಹೋಗುವ ಬದಲು ಬೀಚ್ ಗಳನ್ನ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ.

Advertisements

ಈ ನವ ಜೋಡಿ ತಮ್ಮ ಮದುವೆಯ ಬಳಿಕ ಸೋಮೇಶ್ವರ ಬೀಚ್ ಗೆ ಹೋಗಿದ್ದು, ಇದೆ ವೇಳೆ ಬೀಚ್ ನಲ್ಲಿ ಪ್ಲಾಸ್ಟಿಕ್ ಸೇರಿದಂತೆ ಸಂಪೂರ್ಣವಾಗಿ ಕಸವೇ ತುಂಬಿರುವುದನ್ನ ಗಮನಿಸಿದ್ದಾರೆ. ಬಳಿಕ ನಾವೇಕೆ ಹನಿಮೂನ್ ಗೆ ಹೋಗುವ ಬದಲಿ ಬೀಚ್ ನ್ನ ಸ್ವಚ್ಛ ಗೊಳಿಸುವ ಕೆಲಸ ಮಾಡಬಾರದು ಎಂದು ನಿರ್ಧಾರ ಮಾಡಿದ್ದಾರೆ. ಇನ್ನು ಇವರೇ ಹೇಳಿರುವ ಹಗ್ಗೆ ೮೦೦ಕೆಜಿಗಿಂತ ಹೆಚ್ಚು ಕಸವನ್ನ ಬೀಚ್ ನಿಂದ ತೆಗೆದು ಸ್ವಚ್ಛಮಾಡಿದ್ದಾರಂತೆ. ಇನ್ನು ಶ್ರಮವಹಿಸಿ ಸೋಮೇಶ್ವರ ಬೀಚ್ ನ್ನ ಸ್ವಚ್ಛ ಮಾಡಿರುವ ಈ ಜೋಡಿ ಇದರ ಫೋಟೋ ಮತ್ತು ವಿಡಿಯೊಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನಾವು ಮಾಡಿರುವ ಕೆಲಸದಿಂದ ಬೇರೆಯವರಿಗೆ ಪ್ರೇರಣೆಯಾದರೆ ಸಾಕು ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಎಲ್ಲರೂ ಸೇರಿ ಇಂತಹ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಭಾಗಿಯಾದಾಗ ಮಾತ್ರ ಹೆಚ್ಚು ವ್ಯತ್ಯಾಸ ಕಾಣಲು ಸಾಧ್ಯವಾಗುತ್ತದೆ. ಜೊತೆಗೆ ಇದರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನುದೀಪ್ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ನವ ದಂಪತಿಗಳು ಮಾಡಿರುವ ಕೆಲಸ ನೆಟ್ಟಿಗರು ಫಿದಾ ಆಗಿದ್ದು ಅಪಾರ ಮೆಚ್ಚುಗೆಗಳನ್ನ ವ್ಯಕ್ತಪಡಿಸಿದ್ದಾರೆ.