Advertisements

ರಾಷ್ಟ್ರೀಯ ತನಿಖಾ ದಳದಿಂದ ಬಂಪರ್ ಸಿಹಿ ಸುದ್ದಿ ! ಇನ್ಸ್ ಪೆಕ್ಟರ್ ಸೇರಿದಂತೆ 89 ಹುದ್ದೆಗಳಿಗೆ ಅರ್ಜಿ ಆಹ್ವಾನ..ಕೊನೆ ದಿನಾಂಕ ಯಾವಾಗ ನೋಡಿ ?

News

ನಮಸ್ತೇ ಸ್ನೇಹಿತರೇ, ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (NIA) ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಡೆಪ್ಯೂಟೇಷನ್ ಆಧಾರದ ಮೇಲೆ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕೂಡ ಪ್ರಕಟಿಸಲಾಗಿದೆ. ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಇಲಾಖೆಯು ಅಕ್ಟೋಬರ್ ಎಂಟನೇ ತಾರೀಖಿನಂದೇ ಒಟ್ಟು 89 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ಮಾಡಿದೆ. ಹಾಗಾದ್ರೆ ಯಾವ ಯಾವ ಹುದ್ದೆ, ಎಷ್ಟು ಹುದ್ದೆಗಳಿಗೆ ಆಹ್ವಾನ ಮಾಡಿದೆ ಎಂದು ಮುಂದೆ ನೋಡಿ..

Advertisements

ಇನ್ಸ್ ಪೆಕ್ಟರ್ ಹುದ್ದೆ (Inspector) ೨೯, ಸಬ್ ಇನ್ಸ್ ಪೆಕ್ಟರ್ ಹುದ್ದೆ (Sub Inspector) ೩೧, ಹಾಗೂ ಸಹಾಯಕ ಸಬ್ ಇನ್ಸ್ ಪೆಕ್ಟರ್(Assistant Sub Inspector) ೨೯ ಹುದ್ದೆಗಳಿಗೆ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಇಲಾಖೆಯು ಅರ್ಜಿಗಳನ್ನ ಆಹ್ವಾನ ಮಾಡಿದೆ. ಇನ್ನು ಅರ್ಜಿ ಹಾಕಲು ಕೊನೆಯ ದಿನಾಂಕವಾಗಿ ಇಲಾಖೆಯು ಅರ್ಜಿ ಕರೆದ ದಿನಾಂಕದಿಂದ ಒಂದು ತಿಂಗಳ ಅವಕಾಶ ನೀಡಿದೆ. ಅಂದರೆ ನವೆಂಬರ್ ೮ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಏನೆಲ್ಲಾ ಅರ್ಹತೆ ಹೊಂದಿರಬೇಕೆಂದು ಮುಂದೆ ನೋಡಿ..

NIA ನಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವ ವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಇರುವುದು. ಇನ್ನು ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಅಧಿಕೃತ ವೆಬ್ಸೈಟ್ (www.nia.gov.in)ಗೆ ಭೇಟಿ ಕೊಟ್ಟು ಸಂಪೂರ್ಣ ವಿವರವನ್ನ ಪಡೆದುಕೊಳ್ಳಬಹುದಾಗಿದೆ. ಸರ್ಕಾರಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದೊಂದು ಅತ್ತ್ಯುತ್ತಮ ಸದಾವಕಾಶವಾಗಿದೆ. ಇನ್ನು ಈ ಮಾಹಿತಿಯನ್ನ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಯಾರಿಗಾದ್ರೂ ಉಪಯೋಗವಾಗಬಹುದು.