Advertisements

ನಾನು ಮಲಗುವ ಕೋಣೆಗೆ ಪಟಾಕಿಯನ್ನು ಹಚ್ಚಿ ಎಸೆದಿದ್ದರು.. ಬಿಗ್ ಬಾಸ್ ನಲ್ಲಿ ಯಶ್ ಬಗ್ಗೆ ಅಚ್ಚರಿ ವಿಚಾರ ಬಾಯ್ಬಿಟ್ಟ ನಿಧಿ ಸುಬ್ಬಯ್ಯ..

Cinema Entertainment

ನಮಸ್ತೆ ಸ್ನೇಹಿತರೆ, ರಾಕಿಂಗ್ ಸ್ಟಾರ್ ಯಶ್ ಅವರು ಸ್ಯಾಂಡಲ್ವುಡ್ ಮಾತ್ರವಲ್ಲದೇ ಟಾಲಿವುಡ್, ಬಾಲಿವುಡ್ ನಲ್ಲೂ ಕೂಡ ಈಗ ಯಶ್ ಅವರದ್ದೇ ಹವಾ. ಇನ್ನೂ ಬಿಗ್ ಬಾಸ್ ಗೆ ಬಂದಿರುವ ನಿಧಿ ಸುಬ್ಬಯ್ಯನವರು ಯಶ್ ಮನೆಗೆ ಬಂದು ಮಾಡಿರುವ ಅಚ್ಚರಿಯ ಕೆಲಸದ ಬಗ್ಗೆ ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದಾರೆ. ಈ ವಿಷಯ ಹೇಳುತ್ತಿದ್ದಂತೆ ಹಲವಾರು ಯಶ್ ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ. ಬಿಗ್ ಬಾಸ್ ನಲ್ಲಿ ನಿಧಿ ಸುಬ್ಬಯ್ಯನವರು ಯಶ್ ಅವರ ಬಗ್ಗೆ ಅಚ್ಚರಿಯ ವಿಷಯವನ್ನು ಬಿಚ್ಚಿಟ್ಟಿದ್ದಾರೆ‌..

Advertisements

ಬಿಗ್ ಬಾಸ್ ಸೀಸನ್ 8ರ ಎರಡನೇ ದಿನ ರಾತ್ರಿ ನಿಧಿ ಸುಬ್ಬಯ್ಯ ಮಾತನಾಡುತ್ತಾ ನಾನು ಮೈಸೂರಿನ ಕಾಲೇಜಿನಲ್ಲಿ ಓದುತ್ತಿದ್ದಾಗ ರೋಸ್ ಡೇ ದಿನ ನನಗೆ 50 ರಿಂದ 60 ರೋಸ್ ಗಳು ಬರುತ್ತಿದ್ದವು. ಇದರ ಬಗ್ಗೆ ನಾನು ಅಸಮಾಧಾನ ಹೊರಹಾಕುತ್ತಿದ್ದೆ.. ಆದರೆ ನನ್ನ ಬಗ್ಗೆ ಒಂದು ದಿನ ಏನೋ ಹೇಳಿದ್ರು ಗೊತ್ತಿಲ್ಲ ಒಂದು ಅ’ವಘಡವೇ ನಡೆದು ಹೋಗಿತ್ತು. ನಾನು ಅಜ್ಜಿಯ ಮನೆಯಲ್ಲಿ ಉಳಿದುಕೊಳ್ಳುತ್ತಿದೆ.. ಯಾರೋ ನನಗೆ ಪಾಠ ಕಲಿಸಬೇಕು ಅನ್ನುವ ಕಾರಣಕ್ಕಾಗಿ ನನ್ನ ಬಗ್ಗೆ ಪಿಟಿಂಗ್ ಇಟ್ಟಿದ್ದರು. ನಮ್ಮ ಅಜ್ಜಿಯ ಮನೆ ಬಳಿ ನಾಲ್ಕು ಬೈಕ್ ಗಳಲ್ಲಿ ಎಂಟು ಜನರು ಬಂದಿದ್ದರು..

ನಾನು ಮಲಗುವ ಕೋಣೆ ಎಂದುಕೊಂಡು ಪಟಾಕಿಯನ್ನು ಹಚ್ಚಿ ಎಸೆದಿದ್ದರು. ಆದರೆ ಅದು ಅಜ್ಜಿಯ ಕೋಣೆಯಾಗಿತ್ತು.. ಅಜ್ಜಿ ಕೋಣೆಯ ಕರ್ಟನ್ ಎಲ್ಲವೂ ಸು’ಟ್ಟು’ಹೋಗಿತ್ತು ಆದರೆ ಆ ಪಟಾಕಿಯನ್ನು ಎಸೆದವರು ಯಾರು ಎಂದು ಗೊತ್ತೇ ಇರಲಿಲ್ಲ. ಓದು ಮುಗಿದ ಮೇಲೆ ನಾನು ನಟನೆಗೆ ಬಂದೆ.. ಒಂದು ದಿನ ಒಬ್ಬ ವ್ಯಕ್ತಿ ಬಂದು ನಿನ್ನ ಬಳಿ ಕ್ಷಮೆ ಕೇಳಬೇಕು ಎಂದರು. ನಾನು ಅಚ್ಚರಿಯಿಂದ ಯಾಕೆ ಎಂದು ಕೇಳಿದೆ.. ಆಗ ಅವರು ಆ ಪಟಾಕಿಯ ಘಟನೆ ಬಗ್ಗೆ ಹೇಳಿದರು. ಆ ಪಟಾಕಿ ಎಸೆದದ್ದು ನಾನೆ ಎಂದು ತಿಳಿಸಿದರು.. ಆ ವ್ಯಕ್ತಿ ಬೇರೆ ಯಾರು ಅಲ್ಲ ನಟ ಯಶ್ ಎಂದು ನಿಧಿ ಅಚ್ಚರಿಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ‌..